ಸಾಮಾಜಿಕ ಸೇವೆ ಮಾಡುತ್ತಲೇ ಹೃದಯ ಕದ್ದ ಹುಡುಗಿ…ಅಸ್ಸೋಂ ಅಳಿಯನಾಗುತ್ತಿರುವ ಚೇತನ್​

0
216

‘ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ’ ಎಂಬ ಮಾತಿದೆ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಪರಿಚಯವೇ ಇಲ್ಲದವರನ್ನು ಪ್ರೀತಿಸಿ ಅವರನ್ನು ಬಾಳಸಂಗಾತಿಯನ್ನಾಗಿ ಸ್ವೀಕರಿಸುತ್ತೇವೆ. ಇಂತಹ ಸಾಕಷ್ಟು ಉದಾಹರಣೆಗಳಿವೆ. ಇದೀಗ ‘ಆ ದಿನಗಳು’ ಸಿನಿಮಾ ಖ್ಯಾತಿಯ ಚೇತನ್ ವಿಷಯದಲ್ಲಿ ಕೂಡಾ ಈ ಮಾತು ನಿಜವಾಗಿದೆ.

2019 ರಲ್ಲಿ ಧ್ರುವಾಸರ್ಜಾ, ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ, ಹಾಗೆ ಸುಮ್ಮನೆ ಖ್ಯಾತಿಯ ಕಿರಣ್, ರಾಘವೇಂದ್ರ ರಾಜ್​​​ಕುಮಾರ್ ಪುತ್ರ ಯುವರಾಜ್​​​, ಯಜ್ಞಾಶೆಟ್ಟಿ, ಸುಮನ್ ರಂಗನಾಥ್ ಸೇರಿ ಬಹುತೇಕ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅಷ್ಟೇ ಏಕೆ ‘ಆ ದಿನಗಳು’ ಖ್ಯಾತಿಯ ನಟಿ ಅರ್ಚನಾ ಶಾಸ್ತ್ರಿ ಕೂಡಾ ಹೈದರಾಬಾದ್​​​​ನಲ್ಲಿ ಸಪ್ತಪದಿ ತುಳಿದಿದ್ದರು. ಇದೀಗ ಅದೇ ಸಿನಿಮಾದ ನಾಯಕ ಚೇತನ್​​ಗೆ ಕೂಡಾ ಕಂಕಣ ಭಾಗ್ಯ ಕೂಡಿ ಬಂದಿದೆ. ಚೇತನ್ ಮದುವೆಯಾಗುತ್ತಿರುವುದು ಅಸ್ಸೋಂ ಸುಂದರಿಯನ್ನು. ಸುಮಾರು 5 ವರ್ಷಗಳ ಪ್ರೀತಿ ಈಗ ವೈವಾಹಿಕ ಜೀವನಕ್ಕೆ ತಿರುಗುತ್ತಿದೆ. ಚೇತನ್ ಸಿನಿಮಾ ಮಾತ್ರವಲ್ಲ ಸಾಮಾಜಿಕ ಸೇವೆಯಲ್ಲೂ ಎತ್ತಿದೆ ಕೈ. ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದ ಸಮಯದಲ್ಲಿ ಅವರಿಗೆ ಅಸ್ಸೋಂನ ಮೇಘ ಎಂಬ ಹುಡುಗಿ ಪರಿಚಯವಾಯಿತು. ಇಬ್ಬರ ಪರಿಚಯ ಸ್ನೇಹವಾಗಿ ಕೊನೆಗೆ ಅದು ಪ್ರೀತಿಗೆ ಬದಲಾಗಿದೆ. ಮೇಘ ಕೂಡಾ ಸಾಮಾಜಿಕ ಕಾರ್ಯಕರ್ತೆ, ಜೊತೆಗೆ ಕನ್ನಡವನ್ನೂ ಕಲಿತಿದ್ದಾರೆ.

ಮೇಘ ಹ್ಯೂಮನ್ ರೈಟ್ಸ್ ವಿಷಯದಲ್ಲಿ ಕಾನೂನು ಅಧ್ಯಯನ ಮಾಡುತ್ತಿದ್ದಾರೆ. ಫೆಬ್ರವರಿ 2 ರಂದು ಬೆಂಗಳೂರಿನ ಗಾಂಧಿಭವನದ ಪಕ್ಕದ ವಿನೋಭಾ ಭಾವೆ ಭವನದಲ್ಲಿ ಚೇತನ್ ಹಾಗೂ ಮೇಘ ಸಪ್ತಪದಿ ತುಳಿಯುತ್ತಿದ್ದಾರೆ. ಬಹಳ ಸರಳವಾಗಿ ನಡೆಯಲಿರುವ ಮದುವೆಗೆ ಎಲ್ಲಾ ಹಿಂದುಳಿದ ವರ್ಗಗಳ ನಾಯಕರು ಭಾಗಿಯಾಗುತ್ತಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here