ಕೃಷ್ಣ ನದಿ ಪ್ರವಾಹದ ವೇಳೆ ಆಂಬುಲೆನ್ಸ್ ಗೆ ದಾರಿ ತೋರಿಸಿ ಸಾಹಸ ಮೆರೆದ ಬಾಲಕನಿಗೆ ರಾಯಚೂರು ಜಿಲ್ಲಾಡಳಿತ ಸಾಹಸ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೃಷ್ಣ ನದಿ ಪ್ರವಾಹದಿಂದಾಗಿ ಹಿರೇರಾಯ ಕಂಪಿ -ಗೂಗಲ್ ಸೇತುವೆ ಮುಳುಗಿ ಹೋಗಿತ್ತು ಇದರಿಂದಾಗಿ ಮೃತ ದೇಹ ಹೊತ್ತು ಬರುತ್ತಿದ್ದ ಆಂಬುಲೆನ್ಸ್ ಚಾಲಕನಿಗೆ ಯಾವ ದಾರಿಯಲ್ಲಿ ಹೋಗಬೇಕು ಎಲ್ಲ ದಾರಿ ಪೂರ್ತಿ ನೀರಿನಿಂದ ಆವೃತಿ ಆಗಿದೆ ಎಂದು ದಾರಿ ತಿಳಿಯದೆ ಹೋದಾಗ ಹುಡುಗ ವೆಂಕಟೇಶ್ ನೀರಿಗಿಳಿದು ನಡೆದು ಬಂದು ಆಂಬುಲೆನ್ಸ್ ಗೆ ದಾರಿ ತೋರಿಸಿದ .
ಈ ಘಟನೆ ಪಬ್ಲಿಕ್ ಟಿವಿಯಲ್ಲಿ ಕೂಡ ವರಡಿಗೊಂಡಿತ್ತು. ಬಾಲಕನ ಸಾಧನೆ ಗುರುತಿಸಿ ಜಿಲ್ಲಾಡಳಿತ ಈತನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ರಾಯಚೂರಿನ ಕಾವಯತ್ ಪೊಲೀಸ್ ಮೈದಾನದಲ್ಲಿ ಇಂದು ನಡೆದ ಧ್ವಜಾರೋಹಣ ದಲ್ಲಿ ಆತನಿಗೆ ಜಿಲ್ಲಾಡಳಿತ ಸಾಹಸ ಸೇವಾ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಿದೆ.
ಹಾಗೂ ಇಂತಹ ಸಾಹಸಮಯ ಕೆಲಸ ಮಾಡಲು ಈ ಮೂಲಕ ಪ್ರೋತ್ಸಾಹ ನೀಡಿದೆ.