ನಾಗಿಣಿ ಧಾರವಾಹಿಯ ನಾಯಕ ದೀಕ್ಷಿತ್‍ ಶೆಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು?

0
278

ಕನ್ನಡ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳಲ್ಲಿ ನಾಗಿಣಿ ಕೂಡ ಒಂದು. ಈ ಧಾರವಾಹಿಯ ಮೂಲಕ ನಾಯಕ ದೀಕ್ಷಿತ್‍ ಶೆಟ್ಟಿ ಮತ್ತು ನಾಯಕಿ ದೀಪಿಕಾ ದಾಸ್‍ ಕಿರುತೆರೆ ಲೋಕಕ್ಕೆ ಕಾಲಿಟ್ಟವರು. ನಾಯಕ ದೀಕ್ಷಿತ್‍ ಶೆಟ್ಟಿ ಅವರು ಮೂಲತಃ ಕುಂದಾಪುರದವರು. ಆದರೆ ಬೆಳೆದದ್ದು ಮಾತ್ರ ಬೆಂಗಳೂರಿನಲ್ಲಿ.

ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ದೀಕ್ಷಿತ್‍ ಆರಂಭದ ದಿನಗಳಲ್ಲಿ ಸಿನಿಮಾವೊಂದರಲ್ಲಿ ಬಣ್ಣ ಹಚ್ಚಿದ್ದರು. ಆ ನಂತರ ಧಾರವಾಹಿಯಲ್ಲಿ ತಮ್ಮ ಅಭಿನಯದ ಛಾಪನ್ನು ಮೂಡಿಸಿದ್ದರು. ತಂದೆ-ತಾಯಿಯನ್ನು ಕೊಂದು ನಾಗಮಣಿಯನ್ನು ವಶಪಡಿಸಿಕೊಂಡವರ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಮನುಷ್ಯ ರೂಪದಲ್ಲಿ ಭೂಮಿಗೆ ಬರುವ ನಾಗಿಣಿ ಭೂಮಿ ಮೇಲೆ ಏನೆಲ್ಲಾ ಮಾಡುತ್ತಾಳೆ ಎಂಬ ಕಥಾಹಂದರವನ್ನು ಹೊಂದಿರುವ ನಾಗಿಣಿ ಧಾರವಾಹಿಯಲ್ಲಿ ನಾಯಕನ ಪಾತ್ರದ ಮೂಲಕ ಸಾಕಷ್ಟು ಜನರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪಿಯುಸಿಯನ್ನು ಎಂಇಎಸ್‍ ಕಾಲೇಜು ಮಲ್ಲೇಶ್ವರಂನಲ್ಲಿ ಮುಗಿಸಿದ ನಂತರ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿಯನ್ನು ಅಭ್ಯಾಸ ಮಾಡುತ್ತಿದ್ದಾತ ಈಗ, ಓದುವುದರ ಜೊತೆಗೆ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಚಿತ್ರ ಜಗತ್ತಿಗೆ ಬರುವ ಮುನ್ನಾ ಕೆಲ ನಾಟಕಗಳಲ್ಲೂ ಬಣ್ಣ ಹಚ್ಚಿದ್ದರು. ಸದ್ಯ ತಮ್ಮ ಕಾನೂನು ಪದವಿಯ ಜೊತೆ ಜೊತೆಗೆ ನಟನೆಯಲ್ಲೂ ಮುಂದುವರೆದಿದ್ದಾರೆ. ಆ ಮೂಲಕ ನಟನೆ ಮತ್ತು ಓದು ಎರಡೂ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here