‘ಕನ್ನಡ ಪುರೋಹಿತ’ ಹಿರೇಮಗಳೂರು ಕಣ್ಣನ್ ಅವರ ಬಗ್ಗೆ ಒಂದಷ್ಟು..

0
184

ಕರ್ನಾಟಕ ಕುತೂಹಲದ ರಾಜ್ಯ ಇಲ್ಲಿ ನಿಸರ್ಗ, ಆಧ್ಯಾತ್ಮಕತೆ ಮತ್ತು ವಿಜ್ಞಾನ ಎಲ್ಲವೂ ಸಮ್ಮಿಲನಗೊಂಡಿದೆ. ಕನ್ನಡ ಶ್ರೀಮಂತಿಕೆ ಇಲ್ಲಿ ಎಲ್ಲೆಲ್ಲೂ ಕಾಣ ಸಿಗುತ್ತದೆ. ಕರ್ನಾಟಕದ ಕಾಫಿ ನಾಡು ಚಿಕ್ಕಮಗಳೂರು ಸರ್ವರನ್ನು ಮುದಗೊಳಿಸುವ ಮೈಕಚಗುಳಿ ಇಡುವ ಪ್ರವಾಸಿ ತಾಣ ಇಲ್ಲಿ ಪುರಾಣ ಪುರುಷನೊಬ್ಬ ಶ್ರೀರಾಮನಿಗೆ ಒಂದು ಬೇಡಿಕೆಯಿಟ್ಟಿದ್ದ ಅದು ಎಂಥಾ ಬೇಡಿಕೆ ಗೊತ್ತಾ..

ಗಿರಿಧಾಮಗಳ ಮಡಿಲಲ್ಲಿರುವ ಚಿಕ್ಕಮಗಳೂರಿನಲ್ಲಿ ಸುಂದರವಾದ ಪುರಾಣ ಪ್ರಸಿದ್ಧ ಮತ್ತು ಐತಿಹಾಸಿಕ ದೇವಾಲಯಗಳೂ ಇರುವುದು ವಿಶೇಷ. ಚಿಕ್ಕಮಗಳೂರಿಗೆ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಹಿರೇಮಗಳೂರು ಎಲ್ಲರ ಆಕರ್ಷಣೆಯ ಕೇಂದ್ರ.

ಮನಸೆಳೆಯುವ ರಾಜಗೋಪುರ, ವಿಶಾಲವಾದ ಪ್ರಾಂಗಣ ಮತ್ತು ಗರ್ಬಗುಡಿ ಹಾಗೂ ಶುಕನಾಸಿ ಹೊಯ್ಸಳ ಶೈಲಿಯಲ್ಲಿದ್ದರೆ, ನವರಂಗ ಮತ್ತು ಗೋಪುರ ದ್ರಾವಿಡ ಶೈಲಿಯಲ್ಲಿದೆ. ಇಲ್ಲಿನ ಪೂಜಿತ ಶ್ರೀ ಕೋದಂಡರಾಮ ಹಿರೇಮಗಳೂರಿನ ಕೋದಂಡ ರಾಮ ಕನ್ನಡ ಪ್ರಿಯ ಅನ್ನೋದು ಹೆಚ್ಚು ಜನಜನಿತ.

ಈ ಸಂಸ್ಕøತಿ ಕಲೆ ಸಾರುವ ದೇವಾಲಯದಲ್ಲಿ ಅಂಜನೇಯ ವಿಗ್ರಹದ ಪೀಠದ ಮೇಲೆ ರಾಮ, ಲಕ್ಷ್ಮಣ ಮತ್ತು ಸೀತೆಯ ವಿಗ್ರಹಗಳಿವೆ. ರಾಮ ಮತ್ತು ಲಕ್ಷ್ಮಣರು ಬಿಲ್ಲುಬಾಣಗಳನ್ನು ಧರಿಸಿದ್ದು, ರಾಮನಿಗೆ ಕೋದಂಡ ಎಂದು ಹೆಸರು ಬಂದಿದೆ ಇದರಲ್ಲಿ ಶ್ರೀರಾಮನ ಬಿಲ್ಲು ‘ಕೋದಂಡ’ವಾಗಿದೆ.

ಕೋದಂಡರಾಮ ದೇವಾಲಯದಲ್ಲಿ ಸೀತೆಯ ಸ್ಥಾನ ಇಲ್ಲಿ ಬೇರೆಯಾಗಿರುವುದನ್ನು ಬಹಳಷ್ಟು ಆಸ್ತಿಕರು ಗುರುತಿಸಬಲ್ಲರು. ಏಕೆಂದರೆ ಇಲ್ಲಿ ಸೀತೆ ರಾಮನ ಬಲಕ್ಕಿದ್ದಾಳೆ, ಸಾಮಾನ್ಯವಾಗಿ ಬೇರೆಲ್ಲ ಕಡೆ ಸೀತೆ ಶ್ರೀರಾಮನ ಎಡಕ್ಕಿರುತ್ತಾಳೆ. ಇಲ್ಲಿನ ದೇವಾಲಯದಲ್ಲಿ ಪುಟ್ಟ ಪುಟ್ಟ ಗುಡಿಗಳಿದ್ದು, ತಪೋನಿರತನಾದ ಯೋಗನರಸಿಂಹ, ವೇದಾಂತ ದೇಶಿಕ, ಕಾಳಿಂಗಮರ್ದನ ಕೃಷ್ಣ, ಸುಗ್ರೀವ ಮತ್ತು ಶ್ರೀರಾಮಾನುಜಾಚಾರ್ಯರ ವಿಗ್ರಹಗಳಿವೆ. ಹಿರೇಮಗಳೂರು ಪುರಾಣ ಪ್ರಸಿದ್ಧ ಕ್ಷೇತ್ರವಾಗಿದ್ದು ಇಲ್ಲಿ ಸಿದ್ಧ ಪುರುಷರು ಬಂದುಹೋಗಿದ್ದಾರೆ. ಭೃಗುವಂಶಜನಾದ ಪರಶುರಾಮನಿಂದ ಇದಕ್ಕೆ ಭಾರ್ಗವಪುರಿ ಎಂದೂ ಹೆಸರಿತ್ತಂತೆ. ಇಲ್ಲಿ ಪರಶುರಾಮ ಶ್ರೀರಾಮನನ್ನು ಸಂದರ್ಶಿಸಿದ ಎಂದು ವಾಲ್ಮೀಕಿ ರಾಮಯಣದಲ್ಲಿ ಉಲ್ಲೇಖವಿದೆ ಎನ್ನಲಾಗಿದೆ. ಈ ಕಾರಣಕ್ಕೆ ಇಲ್ಲಿ ರಾಮ ಪರಶುರಾಮರ ವಿಗ್ರಹಗಳನ್ನು ಕಾಣಬಹುದಾಗಿದೆ.

ಇಲ್ಲಿ ಶ್ರೀರಾಮನಿಗೆ ಪರಶುರಾಮ ಒಂದು ಕೋರಿಕೆಯನ್ನು ಮುಂದಿಡುತ್ತಾನೆ. ಅವನ ಬೇಡಿಕೆ ಏನೆಂದರೆ ರಾಮನಿಗೆ ನಿಮ್ಮ ಮದುವೆಯ ಚಿತ್ರಣ ತೋರಿಸುವಂತೆ ಕೇಳುತ್ತಾನೆ. ಪರಶುರಾಮನ ಬೇಡಿಕೆಗೆ ಮಣಿದ ಶ್ರೀರಾಮ ಸೀತೆ, ಲಕ್ಷ್ಮಣರೊಮದಿಗೆ ನಿಂತನಂತೆ ಅದೇ ಭಂಗಿಯಲ್ಲಿ ವಿಗ್ರಹಗಳಿರುವುದನ್ನು ನೋಡಬಹುದು. ಇಲ್ಲಿನ ವಾತಾವರಣ ಈಗ ಕನ್ನಡಮಯವಾಗಿದೆ ಇಲ್ಲಿನ ಪುರೋಹಿತ ಹಿರೇಮಗಳೂರು ಕಣ್ಣನ್ ಕನ್ನಡ ವಾಕ್ಯಗಳನ್ನು ಇಲ್ಲಿ ದರ್ಶಿಕೆಗಳ ರೂಪದಲ್ಲಿ ಇಟ್ಟಿರುವುದು ವಿಶೇಷ.

LEAVE A REPLY

Please enter your comment!
Please enter your name here