ಸೌಂದರ್ಯ ಸಾಯುವ ವಿಷಯ ಮೊದಲೇ ತಿಳಿದುಕೊಂಡಿದ್ದ ತಂದೆ ಮಾಡಿದ್ದೇನು.?

0
287

ಕರುನಾಡು ಒಂದು ಕಲೆಯ ತವರೂರು. ಇಲ್ಲಿ ಹುಟ್ಟಿ ಬೆಳೆದ ಅದೆಷ್ಟೋ ಪ್ರತಿಭೆಗಳು ಭಾರತಾದ್ಯಂತ ಎಲ್ಲಾ ಭಾಷೆಯ ಚಿತ್ರರಂಗವನ್ನು ಆಳಿ ವಿಶ್ವ ಮಟ್ಟದಲ್ಲಿ ಕೀರ್ತಿ ಪಡೆದುಕೊಂಡಿರುತ್ತಾರೆ. ಇದೇ ರೀತಿಯ ಎಷ್ಟೋ ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇದೆ.. ಸೂಪರ್ ಸ್ಟಾರ್ ರಜನಿಕಾಂತ್ ಅವರಿಂದ ಹಿಡಿದು ಖಳನಾಯಕ ಪ್ರಕಾಶ್ ರಾಜ್ ಸೇರಿದಂತೆ ಅನೇಕ ನಟ ನಟಿಯರೆಲ್ಲ ನಮ್ಮ ನೆಲದವರೇ.

 

 

ಈ ಸಾಲಿನಲ್ಲಿ ನಟಿ ಸೌಂದರ್ಯ ಅವರನ್ನು ಇಂದಿಗೂ ಮರೆಯಲು ಸಾಧ್ಯವೇ ಇಲ್ಲ.. ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿ ತೆಲುಗು,ಹಿಂದಿ, ತಮಿಳು ಮತ್ತು ಮಲೆಯಾಳಂ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ, 90ರ ದಶಕದ ಟಾಪ್ ನಟಿ ಮತ್ತು ಭಾರತದ ಕ್ರಶ್ ಆಗಿದ್ದ ಸೌಂದರ್ಯ ಅವರ ಸಾವು ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ.

 

 

ಸುಮಾರು 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ, ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಕರ್ನಾಟಕ ಆಂಧ್ರಪ್ರದೇಶ ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ವ್ಯಾಪಕ ಜನಪ್ರಿಯತೆ ಮತ್ತು ಅಪಾರ ಅಭಿಮಾನವನ್ನು ಹೊಂದಿದ್ದಾರೆ. ತೆಲುಗು ಚಿತ್ರರಂಗದ ಇತಿಹಾಸದಲ್ಲಿ ಮಹಾನಟಿ ಸಾವಿತ್ರಿ ನಂತರ ಅತ್ಯಂತ ಜನಪ್ರಿಯತೆ ಪಡೆದ ನಟಿ ಸೌಂದರ್ಯ ಆಗಿದ್ದು ಆಧುನಿಕ ತೆಲುಗು ಚಿತ್ರರಂಗದ ಸಾವಿತ್ರಿ ಎಂದು ಕರೆಯಲಾಗುತ್ತದೆ.

 

 

18 ಜುಲೈ 1972 ರಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಜನಿಸಿದ ಸೌಂದರ್ಯ ಅವರ ಹುಟ್ಟು ಹೆಸರು ಸೌಮ್ಯ. ಅವರ ತಂದೆ ಕೆ.ಎಸ್.ಸತ್ಯನಾರಾಯಣ್ ಕೈಗಾರಿಕೋದ್ಯಮಿ ಮತ್ತು ಕನ್ನಡ ಚಲನಚಿತ್ರ ಬರಹಗಾರ-ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದರು. ಅವರ ತಂದೆಗೆ ನನ್ನ ಮಗಳು ವೈದ್ಯರಾಗಬೇಕೆಂಬ ಮಹಾದಾಸೆಯನ್ನು ಹೊಂದಿದ್ದರು. ಅಂತೆಯೇ ಸೌಂದರ್ಯ ಅವರಿಗೆ ಎಂ.ಬಿ.ಬಿ.ಎಸ್ ಸೀಟ್ ಕೂಡ ಲಭಿಸಿತ್ತು. ಈ ವಿಚಾರವನ್ನು ತಿಳಿದ ತಂದೆ ಸತ್ಯನಾರಾಯಣ ಅವರಿಗೆ ಸಂತೋಷ ಮುಗಿಲು ಮುಟ್ಟಿತ್ತು. ಈ ವಿಚಾರವನ್ನು ಎಲ್ಲರಿಗೂ ತಿಳಿಸಬೇಕೆಂದು ಹಂಸಲೇಖ ಅವರ ಮನೆಗೆ ಸ್ವೀಟ್ ಕೊಡಲು ಹೋಗಿದ್ದರು.

 

 

ಆ ಸಮಯದಲ್ಲಿ ಹಂಸಲೇಖ ಅವರು ಗಂಧರ್ವ ಎಂಬ ಚಿತ್ರದ ನಾಯಕಿಯ ಹುಡುಕಾಟದಲ್ಲಿದ್ದರು. ಇದೇ ಸಮಯದಲ್ಲಿ ಸೌಂದರ್ಯ ಅವರು ಸ್ವೀಟ್ ಕೊಡಲು ಹೋದಾಗ, ಸೌಮ್ಯ ಅವರ ಸೌಂದರ್ಯಕ್ಕೆ ಮರುಳಾಗಿ ಸತ್ಯನಾರಾಯಣ್ ಅವರಿಗೆ ನನ್ನ ಚಿತ್ರಕ್ಕೆ ನಿಮ್ಮ ಮಗಳೇ ಸರಿಯಾದ ಆಯ್ಕೆ ಬಹಳ ಸುಂದರವಾಗಿದ್ದಾರೆ. ನನ್ನ ಚಿತ್ರದಲ್ಲಿ ಇವಳು ನಟಿಸಲೇ ಬೇಕು ಎಂದು ಒತ್ತಾಯಿಸಿ ಒಪ್ಪಿಸುತ್ತಾರೆ.

 

 

ಗಂಧರ್ವ ಸಿನಿಮಾದಲ್ಲಿ ಅಭಿನಯಿಸಿದ ವರ್ಷವೇ(೧೯೯೨) ತೆಲುಗು ಚಿತ್ರರಂಗದಲ್ಲಿ ಅವಕಾಶ ಸಿಕ್ಕುತ್ತದೆ. ಇದಾದ ಬಳಿಕ ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳಲ್ಲೂ ಅಭಿನಯಿಸುವ ಅವಕಾಶಗಳು ಮನೆ ಬಾಗಿಲಿಗೆ ಹುಡುಕಿಕೊಂಡು ಬರುತ್ತವೆ. ನಂತರ ಒಮ್ಮೆಯೂ ಕೂಡ ಹಿಂತಿರುಗಿ ನೋಡಲೇ ಇಲ್ಲ ಈ ಅದ್ಭುತ ನಟಿ.

 

 

ಹೆಣ್ಣು ಮಕ್ಕಳಿಗೆ ತನ್ನ ತಂದೆ ಎಂದರೆ ಪಂಚಪ್ರಾಣ ಅಂತೆಯೇ ಸೌಂದರ್ಯ ರವರಿಗೂ ತನ್ನ ತಂದೆ ಸತ್ಯನಾರಾಯಣ ಮೇಲೆ ಎಲ್ಲಿಲ್ಲದ ಪ್ರೀತಿ. ತಾನು ಎಲ್ಲೇ ಚಿತ್ರೀಕರಣಕ್ಕೆ ಹೋದರೂ ತನ್ನ ತಂದೆಯನ್ನು ಸಹ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ತಂದೆಯ ಮಾತಿನಂತೆ ಯಾವ ಚಿತ್ರದಲ್ಲೂ ಮೈ ತೋರಿಸುವ ಪಾತ್ರದಲ್ಲಿ ಅಭಿನಯಿಸಲಿಲ್ಲ ಸೌಂದರ್ಯ.! ಇವರೇ ನೋಡಿ ತಂದೆಗೆ ತಕ್ಕ ಮಗಳು ಎಂದರೆ.

 

 

ಸತ್ಯನಾರಾಯಣ ಅವರು ಜ್ಯೋತಿಷ್ಯವನ್ನು ಬಹಳ ನಂಬುತ್ತಿದ್ದರು. ಅವರು ಮಹಾನ್ ದೈವ ಭಕ್ತರು ಕೂಡ..ಏನೇ ಒಳ್ಳೆಯ ಕೆಲಸ ಮಾಡಬೇಕಾದರೂ ಬಿವು ರಾಮನ್ ಹತ್ತಿರ ಹೋಗಿ ಭವಿಷ್ಯ ಕೇಳುತ್ತಿದ್ದರು. ಆ ಖ್ಯಾತ ಜ್ಯೋತಿಷಿ ಸತ್ಯ ನಾರಾಯಣ್ ಅವರಿಗೆ ಯಾವ ವಿಚಾರವನ್ನು ಹೇಳಿದರೋ ಗೊತ್ತಿಲ್ಲ.. ಅವರು ನಿಧನರಾಗುವ ಕೆಲವು ದಿನಗಳ ಮುನ್ನ ತನ್ನ ಮಗಳು ಸೌಂದರ್ಯ ಅವರಿಗೆ ಬಹುಮುಖ್ಯವಾದ ಮಾತುಗಳನ್ನೆಳಿದ್ದರು.

 

 

ಮಗಳೇ ನಿನಗೆ 2004 ರಿಂದ ಟೈಮ್ ಸರಿಯಾಗಿಲ್ಲ. ಚಿತ್ರರಂಗವನ್ನು ತ್ಯಜಿಸಿ ಬೇರೆ ಯಾವುದಾದರೂ ಕೆಲಸವನ್ನು ಪ್ರಾರಂಭಿಸು ಮತ್ತು ನೀನು ತುಂಬಾ ಜಾಗೃತಿಯಾಗಬೇಕು ನಿನಗೆ ಅತಿ ದೊಡ್ಡ ಗಂಡಾಂತರವಿದೆ ಎಂದು ತನ್ನ ಮಗಳಿಗೆ ಹೇಳಿದ್ದರಂತೆ.

ಇಷ್ಟು ಮಾತ್ರವಲ್ಲದೆ ಸೌಂದರ್ಯ ಎಲ್ಲಿಗೆ ಹೋದರು ತಂಗಿಯ ಜೊತೆ ಇರುವಂತೆ ಮಗ ಅಮರ್ ನಾಥ್ ಅವರ ಬಳಿ ಪ್ರಮಾಣ ಮಾಡಿಸಿಕೊಂಡಿದ್ದರು. ಆದರೆ ವಿಪರ್ಯಾಸವೆಂದರೆ ಅದೇ ವರ್ಷ ಚುನಾವಣಾ ಪ್ರಚಾರದ ವೇಳೆ ಬೆಂಗಳೂರಿನಲ್ಲಿ ತನ್ನ ಸಹೋದರ ಅಮರನಾಥ್ ಅವರೊಂದಿಗೆ ವಿಮಾನ ಅಪಘಾತದಲ್ಲಿ ಅವರು ನಿಧನರಾದರು..(17 ಏಪ್ರಿಲ್ 2004)

 

 

ಆದರೆ ಅದೆಷ್ಟೋ ಜನಕ್ಕೆ ಗೊತ್ತಿರುವುದಿಲ್ಲ ಸೌಂದರ್ಯ ಅವರು ಪ್ರಯಾಣಿಸುತ್ತಿದ್ದ ವಿಮಾನ ನೆಲಕ್ಕೆ ಅಪ್ಪಳಿಸಿದ ಮೇಲೂ ಸೌಂದರ್ಯ ಬದುಕಿದ್ದರು ಎಂಬುದು. ಸಹಾಯಕ್ಕಾಗಿ ಕೂಗಿದರು ಆದರೆ ಕೆಲವೇ ಕ್ಷಣದಲ್ಲಿ ವಿಮಾನ ಬ್ಲಾಸ್ಟ್ ಆಗಿ ಅವರು ಇಹಲೋಕ ತ್ಯಜಿಸುತ್ತಾರೆ.

ತನ್ನ ತಂದೆ ಹೇಳಿದ ಗಂಡಾಂತರ ಎಂದರೆ ಇದೇ ಅಲ್ಲವೇ ?

LEAVE A REPLY

Please enter your comment!
Please enter your name here