ಮತ್ತೊಂದು ಮೂವಿಯಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಅಬಿನಯ ಚಕ್ರವರ್ತಿ ಸುದೀಪ್, ಅದ್ಯಾವ ಚಿತ್ರ ಗೊತ್ತೇ ?

0
188

ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಬಾಲಿವುಡ್ ಚಿತ್ರ ದಬಾಂಗ್-3 ರಲ್ಲಿ ಕಿಚ್ಚ ಸುದೀಪ್ ಅಭಿನಯವನ್ನು ಎಲ್ಲರೂ ಮೆಚ್ಚಿ ಭೇಷ್ ಎಂದಿದ್ದಾರೆ. ಅದರಲ್ಲಿ ಸುದೀಪ್ ವಿಲನ್ ಅಭಿನಯವನ್ನು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು ಕೂಡ.

 

 

ಹಾಗಾಗಿ ಅದನ್ನು ಗಮನದಲ್ಲಿಟ್ಟುಕೊಂಡು ಸುದೀಪ್ ಮತ್ತೊಮ್ಮೆ ವಿಲನ್ ರೂಪದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಹೌದು, ತಮಿಳು ನಟ ಸಿಂಬು ಅವರ ಬಹುನಿರೀಕ್ಷಿತ ‘ಮಾನಾಡು’ ಚಿತ್ರದಲ್ಲಿ ಸುದೀಪ್ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರಂತೆ. ಈ ಸುದ್ದಿಗಳು ಆದಷ್ಟು ಪಕ್ಕಾ ಆಗಿದೆ.
ಕಾಲಿವುಡ್ ನ ಈ ಮಾನಾಡು ಸಿನಿಮಾ ಜನವರಿ ತಿಂಗಳಷ್ಟರಲ್ಲಿ ಸೆಟ್ಟೇರಲಿದೆ. ಆದರೇ ಈವರೆಗೂ ಚಿತ್ರದ ವಿಲನ್ ಯಾರೆಂದು ನಿರ್ಧಾರವಾಗಿಲ್ಲ.

 

 

ಒಂದು ಮೂಲಗಳ ಪ್ರಕಾರ, ಅಭಿನಯ ಚಕ್ರವರ್ತಿ ಸುದೀಪ್ ಅವರನ್ನ ವಿಲನ್ ಪಾತ್ರಕ್ಕೆ ಆರಿಸಲಾಗಿದೆ ಎಂಬ ತಿಳಿದು ಬಂದಿದೆ. ಈ ಹಿಂದೆ ತಮಿಳು ನಟ ವಿಜಯ್ ಅವರ ‘ಪುಲಿ’ ಚಿತ್ರದಲ್ಲಿ ಸುದೀಪ್ ಖಳನಾಯಕನಾಗಿ ಕಾಣಿಸಿಕೊಂಡಿದ್ದನ್ನು ನಾವು ಇದೇ ವೇಳೆ ನೆನಪಿಸಿಕೊಳ್ಳಬಹುದಾಗಿದೆ.

 

 

ಈ ಹಿಂದೆ ಇದೇ ಮಾನಾಡು ಚಿತ್ರಕ್ಕೆ ಸುದೀಪ್‌ಗೂ ಮುನ್ನ ವಿಲನ್ ಪಾತ್ರದಲ್ಲಿ ನಟಿಸುವಂತೆ ಅರವಿಂದ್ ಸ್ವಾಮಿ ಅವರಿಗೆ ಆಫರ್ ನೀಡಿತ್ತು. ಆದ್ರೆ ಅರವಿಂದ್ ಆಫರ್‌ನ್ನು ಸ್ವೀಕರಿಸಿಲ್ಲ. ಈ ಸಿನಿಮಾವನ್ನು ವೆಂಕಟ್ ಪ್ರಭು ನಿರ್ದೇಶಿಸಿದ್ದು, ಸುರೇಶ್ ಕಾಮಾಚಿ ಬಂಡವಾಳ ಹೂಡಿ ತೆರೆಗೆ ತರಲು ಸಖತ್ ತಯಾರಿ ನಡೆಸಿದ್ದಾರೆ.

LEAVE A REPLY

Please enter your comment!
Please enter your name here