ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿರುವ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ಇದೇ ಆಗಸ್ಟ್ ೦೯ ವರಮಹಾಲಕ್ಷ್ಮಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕುರುಕ್ಷೇತ್ರ ಚಿತ್ರ ದೊಡ್ಡ ತಾರ ಬಳಗವನ್ನು ಹೊಂದಿದೆ. ಮಹಾಭಾರತದ ಗದಾಯುದ್ಧದ ಸನ್ನಿವೇಶಗಳು, ಈ ಸಿನಿಮಾದ ಮುಖ್ಯ ಜೀವಾಳವಾಗಿದೆ. ಸೋಮವಾರ ಚಿತ್ರತಂಡದಿಂದ ಏರ್ಪಡಿಸಿದ್ದ ಪ್ರೀಮಿಯರ್ ಶೋನಲ್ಲಿ ಭಾಗಿಯಾಗಿದ್ದ ಅಭಿಮನ್ಯು ಪಾತ್ರಧಾರಿ ನಿಖಿಲ್ ಕುಮಾರಸ್ವಾಮಿ ತಮ್ಮ ಪಾತ್ರದ ಬಗ್ಗೆ ಖುಷಿಯ ಮಾತುಗಳನ್ನು ಹಂಚಿಕೊಂಡಿದ್ದಾರೆ.
ರಾಕ್ಲೈನ್ ಮಾಲ್’ನಲ್ಲಿ ಏರ್ಪಡಿಸಿದ್ದ ಪ್ರೀಮಿಯರ್ ಶೋ ವೀಕ್ಷಿಸಿದ ನಿಖಿಲ್ ಕುಮಾರಸ್ವಾಮಿ, ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಸರಾಗವಾಗಿ ಉತ್ತರಿಸಿದ್ದಾರೆ. ಕುರುಕ್ಷೇತ್ರ ಚಿತ್ರದಲ್ಲಿ ನಿಮಗೆ ಅಭಿಮಾನಿ ಪಾತ್ರ ಸಿಕ್ಕಿದ್ದು ಹೇಗೆ.? ಎಂಬ ಪ್ರಶ್ನೆಗೆ ನಿಖಿಲ್ ಕುಮಾರಸ್ವಾಮಿ ಅವರು ಒಮ್ಮೆ ಮೈಸೂರಿನಲ್ಲಿ ನಮ್ಮ ನಿರ್ಮಾಪಕರಾದ ಮುನಿರತ್ನ ಅವರು ನಮ್ಮ ತಂದೆ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಕುರುಕ್ಷೇತ್ರ ಚಿತ್ರ ಮಾಡುತ್ತಿದ್ದೇನೆ, ಇದರಲ್ಲಿ ಅಭಿಮನ್ಯು ಪಾತ್ರವಿದೆ ಇದಕ್ಕೆ ನಿಖಿಲ್ ಅವರು ನಟಿಸಿದರೆ ಸೂಕ್ತ ಎಂದರು. ಇದಕ್ಕೆ ನಮ್ಮ ತಂದೆ ಒಪ್ಪಿಗೆ ಸೂಚಿಸಿದ ಬಳಿಕ ನಾನು ನಟಿಸಲು ಒಪ್ಪಿಕೊಂಡೆ.
ಕುರುಕ್ಷೇತ್ರ ಕನ್ನಡ ಚಿತ್ರರಂಗದಲ್ಲಿ ಒಂದು ದೊಡ್ಡ ಮಟ್ಟದ ಚಿತ್ರ .! ಎಲ್ಲಾ ಕಲಾವಿದರನ್ನು ಈ ಚಿತ್ರದಲ್ಲಿ ಒಂದುಗೂಡಿಸಿದ್ದಾರೆ ನಮ್ಮ ನಿರ್ಮಾಪಕರು ಅವರಿಗೆ ನನ್ನ ಧನ್ಯವಾದಗಳು. ಪ್ರತಿಯೊಬ್ಬ ಕಲಾವಿದರು ಕೂಡ ಅದ್ಭುತವಾಗಿ ನಟಿಸಿದ್ದಾರೆ. ನಾನು ಮುಂದೆ ಎಷ್ಟೇ ಸಿನಿಮಾ ಮಾಡಿದರೂ ಕೂಡ ಅಭಿಮನ್ಯು ಪಾತ್ರ ಯಾವತ್ತಿಗೂ ನನ್ನ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುತ್ತದೆ. ಮುನಿರತ್ನ ಅವರು ನಿರ್ಮಿಸಿರುವ ಕುರುಕ್ಷೇತ್ರ ಚಿತ್ರವನ್ನು ಎಲ್ಲ ನನ್ನ ಪ್ರೇಕ್ಷಕ ಬಂಧುಗಳು ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ವೀಕ್ಷಿಸಿ ಎಂದು ಪ್ರೀತಿಯಿಂದ ಹೇಳಿದರು.