ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ನಟ ಅಭಿಜಿತ್

0
335

‘ಕಾಲೇಜು ಹೀರೋ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಕರಿಯರ್ ಆರಂಭಿಸಿದ ನಟ ಅಭಿಜಿತ್ ನಂತರ ಸಾಕಷ್ಟು ಸಿನಿನಿಮಾಗಳಲ್ಲಿ ನಟಿಸಿದರು. ಕೆಲವೊಂದು ಸಿನಿಮಾಗಳಲ್ಲಿ ನಾಯಕನಾಗಿಯೂ, ಕೆಲವೊಂದು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲೂ ಅವರು ನಟಿಸಿದರು.

 

 

ಆದರೆ ಅಭಿಜಿತ್ ನಟಿಸಿದ ಸಿನಿಮಾಗಳು ಅವರಿಗೆ ಹೇಳಿಕೊಳ್ಳುವಂತ ಹೆಸರು ತರಲಿಲ್ಲ. ಕೆಲವು ವರ್ಷಗಳ ಕಾಲ ನಟನೆಯಿಂದ ದೂರವೇ ಇದ್ದ ಅಭಿಜಿತ್ ನಂತರ ‘ಅಣ್ಣಯ್ಯ’ ಧಾರಾವಾಹಿ ಮೂಲಕ ಕಿರುತೆರೆತಯಲ್ಲಿ ನಟಿಸಲು ಆರಂಭಿಸಿದರು. ಮಧ್ಯೆ ಕೆಲವು ದಿನಗಳ ಕಾಲ ಬ್ರೇಕ್ ಪಡೆದು ಇದೀಗ ಮತ್ತೆ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕಲರ್ಸ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಂಗಳಗೌರಿ’ ಮದುವೆ ಧಾರಾವಾಹಿಯಲ್ಲಿ ಅಭಿಜಿತ್ ವಕೀಲರಾಗಿ ನಟಿಸುತ್ತಿದ್ದಾರೆ.

 

 

ಅಭಿಜಿತ್ ನಟ ಮಾತ್ರವಲ್ಲ ಗಾಯಕ, ನಿರ್ದೇಶಕ, ನಿರ್ಮಾಪಕರಾಗಿ ಕೂಡಾ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಕಾರ್ಯಕ್ರಮ ‘ಅಕ್ಷರ ಮಾಲೆ’ಯಲ್ಲಿ ಅಭಿಜಿತ್ ನಿರೂಪಕರಾಗಿ ಕೂಡಾ ಗಮನ ಸೆಳೆದಿದ್ದರು. ಅಭಿಜಿತ್ ಅವರಿಗೆ ಹೆಚ್ಚು ಅವಕಾಶಗಳು ದೊರೆತು ಅವರಿಗೆ ಬ್ರೇಕ್ ಸಿಗುವಂತಾಗಲಿ ಎಂದು ಹಾರೈಸೋಣ.

LEAVE A REPLY

Please enter your comment!
Please enter your name here