ರಸ್ತೆಯಲ್ಲೇ ಮಹಿಳಾ ಪೊಲೀಸ್ ಗೆ ಪ್ರಪೋಸ್ ಮಾಡಿದ ಯುವಕ..! ಮುಂದೇನಾಯ್ತು ಗೊತ್ತಾ?

0
12324

ಈ ಪ್ರೀತಿ, ಪ್ರೇಮ ಎಂಬುದು ಯಾರ ಮೇಲೆ, ಯಾವಾಗ ಹೇಗೆ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ನಮ್ಮ ಕಣ್ಮುಂದೆನೆ ಅನೇಕ ಉದಾಹರಣೆಗಳನ್ನು ನೋಡುತ್ತಿರುತ್ತೇವೆ. ಕಾಲೇಜು ಹುಡುಗಿ ಮತ್ತು ಅದೇ ಕಾಲೇಜು ಶಿಕ್ಷಕ ನಡುವಿನ ಪ್ರೇಮ್ ಕಹಾನಿ, ಹದಿಹರೆಯದ ಹುಡುಗ ಮತ್ತು ೪೦ ವಯ್ಯಸ್ಸಿನ ಮಹಿಳಾ ನಡುವಿನ ಸ್ವಚ್ಛ ಪ್ರೀತಿ ಹೀಗೆ ಅನೇಕ ಕಥೆಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಮತ್ತು ಮಾಧ್ಯಮದಲ್ಲಿ ನೋಡುತ್ತಿರುತ್ತೇವೆ.

ಆದರೆ ಸಮಾಜ ಎಂದಿಗೂ ಇದನ್ನು ಒಪ್ಪುವುದಿಲ್ಲ. ಆದರೆ ಯೋಚಿಸಿ ನೋಡಿದರೆ ಇದನ್ನು ತಪ್ಪು ಅಂತ ಹೇಳಲು ಸಾಧ್ಯವಿಲ್ಲ. ಪ್ರೀತಿ ಎಂಬುದು ವಯಸ್ಸು, ಜಾತಿ, ಧರ್ಮ ಎಲ್ಲವನ್ನು ಮೀರಿದ್ದು. ಆದರೆ ನಮ್ಮ ಸಮಾಜಕ್ಕೆ ಇದನ್ನು ಅರ್ಥಪಡಿಸಿ ಮನವರಿಕೆ ಮಾಡುವುದು ಕಷ್ಟಸಾಧ್ಯ.

ಕೆಲವು ತಿಂಗಳುಗಳ ಹಿಂದೆ ಆಂಧ್ರ ಪ್ರದೇಶದಲ್ಲಿ ೧೦ ನೇ ತರಗತಿಯ ವಿದ್ಯಾರ್ಥಿಯೊಬ್ಬ ಪ್ರತಿನಿತ್ಯ ಶಾಲೆ ಮುಗಿದ ಮೇಲೆ ತಮ್ಮ ಶಾಲೆಯ ಶಿಕ್ಷಕಿಯ(೩೦ ವರ್ಷ) ಮನೆಗೆ ಪಾಠಕ್ಕೆಂದು ಹೋಗುತ್ತಿದ್ದ. ದಿನ ಕಳೆದಂತೆ ವಿದ್ಯಾರ್ಥಿಯೂ, ಶಿಕ್ಷಕಿಯ ಸೌಂದರ್ಯಕ್ಕೆ ಮನಸೋತು ಪ್ರೀತಿಸಲು ಆರಂಭಿಸಿದ್ದಾನೆ, ವಿಪರ‍್ಯಾಸವೇನೆಂದರೆ ಶಿಕ್ಷಕಿಗೂ ಆತನ ಮೇಲೆ ಪ್ರೀತಿಯಾಗಿದೆ. ಈ ವಿಚಾರವೂ ಗ್ರಾಮಸ್ಥರಿಗಾಗಲಿ, ಶಾಲಾ ಶಿಕ್ಷಕ ವರ್ಗದವರಿಗಾಗಲಿ ಕಂಡುಬಂದಿಲ್ಲ.

ಆದರೆ ಇಬ್ಬರ ಪ್ರೀತಿ ಮಿತಿ ಮೀರಿ ಆ ಶಿಕ್ಷಕಿ ಗರ್ಭವತಿಯಾಗಿದ್ದಳು. ನಂತರ ಗ್ರಾಮಾಸ್ಥರು,ಪೋಷಕರೆಲ್ಲಾ ಸೇರಿ ಅವರಿಬ್ಬರಿಗೂ ಮದುವೆ ಮಾಡಿಸಿದ್ದಾರೆ. ಅವರ ಪ್ರೀತಿಗೆ ಬೆಂಬಲ ಸಿಕ್ಕಿದ್ದೇನೋ ಸರಿ ಆದರೆ ಹುಡುಗನಿಗೆ ಇನ್ನೂ ೧೫ ವರ್ಷ, ಮನೆ  ಜವಾಬ್ದಾರಿ, ಅಕಸ್ಮಾತ್ ಮಗುವಾದರೆ ಅದರ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುತ್ತಾನೋ ದೇವರೆ ಬಲ್ಲ.

ಈಗ ಇದೇ ರೀತಿಯ ಘಟನೆ ಹೈದರಬಾದ್ ನಲ್ಲಿ ನಡೆದಿದೆ. ಯುವಕನೊಬ್ಬ ಮಹಿಳಾ ಪೊಲೀಸ್  ಮೇಲೆ ಮನಸೋತು ನಡು ರಸ್ತೆಯಲ್ಲೇ ಪ್ರಪೋಸ್ ಮಾಡಿದ್ದಾನೆ. ಅಬ್ಬಾ ಏನ್ ಧೈರ್ಯಾ ಅಲ್ವಾ ಇವ್ನ್ದು? ಹೌದು ಸುಮಾರು ೩ ತಿಂಗಳುಗಳಿಂದ ಈ ಯುವಕ ಬಿಡದೆ ಮಹಿಳಾ ಪೊಲೀಸ್ ಅನ್ನು ಹಿಂಬಾಲಿಸುತ್ತಿದ್ದನಂತೆ. ಪ್ರತಿನಿತ್ಯ ಅವರು ಎಲ್ಲಿರುತ್ತಾರೆ, ಏನು ಮಾಡುತ್ತಿದ್ದಾರೆ, ಯಾವಾಗ ನನ್ನ ಪ್ರೀತಿಯಾ ವಿಚಾರವನ್ನು ಆಕೆಗೆ ಹೇಳಿಬಿಡುತ್ತಿನೋ ಎಂಬುವ ತವಕದಿಂದ ಪ್ರತಿನಿತ್ಯ ಹಿಂಭಾಲಿಸುತ್ತಿದ್ದ.

ಪೊಲೀಸ್  ಅಲ್ವಾ ಯಾರಿಗೆ ತಾನೆ ಭಯ ಆಗಲ್ಲ ಹೇಳಿ. ಕೆಲವೊಮ್ಮೆ ಏನೂ ತಪ್ಪು ಮಾಡದೇ ಹೋದ್ರೇನೆ ಹಾಕ್ಕೊಂಡ್ ರುಬ್ಬ್ತಾರೆ ಇನ್ನು ಪ್ರಪೋಸ್ ಮಾಡುದ್ರೆ ಬಿಡ್ತಾರಾ? ಸತತ ಮೂರು ತಿಂಗಳುಗಳ ಕಾಲ ಅಲೆದ ಹುಡುಗ, ಒಂದು ದಿನ ಧೃಡ ಮನಸ್ಸು ಮಾಡಿ ತನ್ನ ಪ್ರೇಮ ವಿಚಾರವನ್ನು ಹೇಳಿಯೇ ಬಿಟ್ಟಿದ್ದಾನೆ, ಆದರೆ ಮಹಿಳಾ ಪೊಲೀಸ್ ನನ್ನ ವಯ್ಯಸ್ಸೆಷ್ಟು ನಿನ್ನದೆಷ್ಟು? ಕಾಲೇಜು ಹುಡುಗನಾಗಿ ನನಗೆ ಪ್ರಪೋಸ್ ಮಾಡ್ತೀಯಾ? ಹಾಗೆ ಹೀಗೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರು ಆ ಹುಡುಗ ಬಿಡದೆ ತನ್ನ ಪ್ರೀತಿಯಾ ವಿಷಯ ಹೇಳುತ್ತಲೇ ಇದ್ದ. ನಂತರ ಆ ಪೊಲೀಸ್ ಗೆ ಪಿತ್ತ ನೆತ್ತಿಗೇರಿದೆ. ಬಾ ಪೊಲೀಸ್ ಠಾಣೆಗೆ ಎಂದು ಅವನ ಟೀಶರ್ಟ್ ಎಳೆಯಲು ಮುಂದಾಗಿದ್ದಾರೆ. ಮುಂದೆ ಆಗಿದ್ದೇ ಬೇರೆ.

ಇತ್ತೀಚಿಗೆ ಮೋಬೈಲ್,ಸಿಮ್,ಇಂಟರ್ ನೆಟ್ ಸೇವೆಗಳೆಲ್ಲಾ ಅಗ್ಗವಾಗಿದ್ದು ಮನುಷ್ಯನ ಜೀವನದ ಒಂದು ಭಾಗದಂತಾಗಿದೆ.  ತಮ್ಮ ಟಿಲಿಕಾಂ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ಸೆಳೆಯಲು ಕಂಪನಿಗಳು ಹೊಸ ಹೊಸ ಯೋಜನೆಗಳನ್ನು ತರುತ್ತಿದ್ದು ಜನರು ಕೂಡ ಮೊಬೈಲ್ ಹಾಗೂ ಇಂಟರ್‌ನೆಟ್ ಸೇವೆಯನ್ನು ನಾನಾ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಕೆಲವರು ಇನ್ಸ್ಟಾಗ್ರಾಮ್, ಫೇಸ್‌ಬುಕ್, ವಾಟ್ಸ್ಆಪ್ ಎಂದು ನಿರತರಾದರೆ ಇನ್ನು ಕೇಲವರು ಎಂಟರ್‌ ಟೈನ್ ಮೆಂಟ್ ಮಾಡಿ ಸಾಕಷ್ಟು ಹಣ ಮಾಡುತ್ತಿದ್ದರೆ.

ಇಲ್ಲಿಯ ತನಕ ನೀವು ಓದಿದ ಪ್ರಪೋಸ್ ಸ್ಟೋರಿ, ನಿಮ್ಮನೆಲ್ಲ ನಕ್ಕುನಗಿಸಲು ಮಾಡಿದಂತಹ ಪ್ರಾಂಕ್ ವಿಡೀಯೋ. ಹೌದು ತೆಲುಗಿನ ಫೇಮಸ್ ಪ್ರಾಂಕ್ ಭಾಯ್, ಈ ರೀತಿ ನಡು ರಸ್ತೆಯಲ್ಲಿ  ಮಹಿಳಾ ಪೇದೆಗೆ ಪ್ರಾಂಕ್ ಮಾಡಿದ್ದಾನೆ, ಮತ್ತು ಈ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ನೀವೂ ಒಮ್ಮೆ ಈ ವೀಡಿಯೋ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕುಬಿಡಿ !

LEAVE A REPLY

Please enter your comment!
Please enter your name here