ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್​​ನಲ್ಲಿ ಪಿವಿ ಸಿಂಧುಗೆ ಗೆಲುವು

0
524

ವಿಶ್ವ ಚಾಂಪಿಯನ್ ಆಟಗಾರ್ತಿ ಪಿವಿ ಸಿಂಧು ಗೆಲುವಿನೊಂದಿಗೆ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ಅಭಿಯಾನವನ್ನು ಮುಕ್ತಾಯಗೊಳಿಸಿದ್ದಾರೆ. ಶುಕ್ರವಾರ ನಡೆದ ಎ ಗುಂಪಿನ ತನ್ನ ಅಂತಿಮ ಪಂದ್ಯದಲ್ಲಿ ಪಿವಿ ಸಿಂಧು, ಚೀನಾ ಹೀ ಬಿಂಗ್​ಜಿಯಾವೋ ವಿರುದ್ಧ ಗೆಲುವು ಕಾಣುವ ಮೂಲಕ 2019ರ ಋತುವಿಗೆ ಮುಕ್ತಾಯ ಹೇಳಿದರು.

 

 

ಹಾಲಿ ಚಾಂಪಿಯನ್ ಆಗಿದ್ದ ಸಿಂಧು, ಗುರುವಾರ ಚೆನ್ ಯುಫೀ ವಿರುದ್ಧ ಸೋಲು ಕಂಡ ಬಳಿಕ ನಿರ್ಗಮನ ಕಂಡಿದ್ದರು. ಅಕಾನೆ ಯಮಗುಚಿ ಹಾಗೂ ಯುಫೀ ವಿರುದ್ಧದ ಪಂದ್ಯದಲ್ಲಿ ಹೋರಾಟ ತೋರಿದ್ದರೂ ಸೋಲು ಕಂಡಿದ್ದ ಸಿಂಧು, 21-19, 21-19 ರಿಂದ ಬಿಂಗ್​ಜಿಯಾವೋರನ್ನು ಮಣಿಸುವ ಮೂಲಕ ಗುಂಪಿನಲ್ಲಿ 3ನೇ ಸ್ಥಾನ ಪಡೆದರು. ಅದರೊಂದಿಗೆ ಬಿಂಗ್​ಜಿಯಾವೋ ವಿರುದ್ಧ ಸತತ ನಾಲ್ಕು ಪಂದ್ಯಗಳಲ್ಲಿ ಕಂಡಿದ್ದ ಸೋಲಿಗೆ ಸೇಡು ತೀರಿಸಿಕೊಂಡರು.

 

 

ಬಿಂಗ್​ಜಿಯಾವೋ ವಿರುದ್ಧ 15 ಪಂದ್ಯಗಳಲ್ಲಿ ಸಿಂಧುಗೆ ಇದು 6ನೇ ಗೆಲುವಾಗಿದೆ. ಮೊದಲ ಗೇಮ್ ಆರಂಭದಲ್ಲಿಯೇ ಎದುರಾಳಿಗೆ ಸಿಂಧು ಮುನ್ನಡೆ ಬಿಟ್ಟುಕೊಟ್ಟಿದ್ದರು. ಆದರೆ, ವಿರಾಮದ ನಂತರ ತಿರುಗೇಟು ನೀಡುವಲ್ಲಿ ಯಶಸ್ವಿಯಾದ ಸಿಂಧು 19-19ರಲ್ಲಿದ್ದಾಗ ಸತತ ಎರಡು ಅಂಕ ಕಲೆಹಾಕಿ ಗೆಲುವು ಸಾಧಿಸಿದರು. 2ನೇ ಗೇಮ್ಲ್ಲೂ ಸಿಂಧು ಹೋರಾಟದ ಆಟವಾಡಿ ಗೆಲುವು ಕಂಡಿದ್ದರು. ಪಿವಿ ಸಿಂಧು ಇನ್ನೀಗ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್​ನಲ್ಲಿ ಆಡಲಿದ್ದಾರೆ.

LEAVE A REPLY

Please enter your comment!
Please enter your name here