ಭಾವನೊಂದಿನ ಚೆಲ್ಲಾಟಕ್ಕೆ ತನ್ನ ಅಕ್ಕನನ್ನೇ ಕೊಂದ ತಂಗಿ.

0
113

ಮಧ್ಯಪ್ರದೇಶದ ಜಬಲ್ಪುರದ ಕೈಥಾಲದಲ್ಲಿ ಯುವತಿಯೊಬ್ಬಳು ತನ್ನ ಬಾವನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಹಾಗೂ ಆತನನ್ನು ಮದುವೆಯಾಗುವ ಸಲುವಾಗಿ ಗರ್ಭಿಣಿಯಾದ ತನ್ನ ಅಕ್ಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.
ಶಾಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅಭಿಲಾಷಾ ಕೊಲೆಯಾದ ದುರ್ದೈವಿ ಆಕೆಯ ತಂಗಿ ಸಾಕ್ಷಿ ಕೊಲೆಯ ಆರೋಪಿಯಾಗಿದ್ದು ಪೊಲೀಸರು ಬಂಧಿಸಿದ್ದಾರೆ. ಸಾಕ್ಷಿಯ ಅಕ್ಕ ಗರ್ಭಿಣಿಯಾಗಿದ್ದು ಅನಾರೋಗ್ಯದ ಹಿನ್ನೆಲೆಯಲ್ಲಿ ಆಕೆ ತವರು ಮನೆಗೆ ಹೋಗಿದ್ದಾಳೆ ಈ ಸಂದರ್ಭಗಳಲ್ಲಿ ಸಾಕ್ಷಿ ತನ್ನ ಭಾವನಾದ ಅನ್ಮೋಲ್ ಜೊತೆಗೆ ದೈಹಿಕ ಸಂಬಂಧವನ್ನು ಬೆಳೆಸಿದ್ದಾಳೆ ಈ ಸಂಬಂಧವೂ ಕೊನೆಗೆ ಮದುವೆಯಾಗಲು ಬಯಸಿದ್ದು ಅಭಿಲಾಷಾಗೆ ತಿಳಿದಿದೆ ಗಂಡನಿಗೆ ಮನೆಗೆ ಹೋಗಲು ತಿಳಿಸಿದ್ದಾಳೆ. ಸಾಕ್ಷಿ ಮತ್ತು ಅಭಿಲಾಷಾ ನಡುವೆ ಮನಸ್ಥಿತಿ ಹದಗೆಟ್ಟಿದ್ದು ಸಾಕ್ಷಿ ಕೋಪದಿಂದ ಸ್ನಾನಗೃಹದಲ್ಲಿ ಅಭಿಲಾಷಾ ಳನ್ನು ಚಾಕುವಿನಿಂದ ಬರ್ಬರವಾಗಿ ಇರಿದು ಕೊಂದು ಪರಾರಿಯಾಗಿದ್ದಾಳೆ ಪೊಲೀಸರು ತನಿಖೆಯ ಬಳಿಕ ಸಾಕ್ಷಿಯನ್ನು ಪತ್ತೆಹಚ್ಚಿ ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಕಾಮದ ಕಣ್ಣಿನಿಂದ ತನ್ನ ಅಕ್ಕನನ್ನೇ ಕೊಂದ ತಂಗಿಯು ಕಂಬಿಯ ಹಿಂದೆ ಬಂದಿ ಯಾಗಿದ್ದಾಳೆ ಈ ಬಗ್ಗೆ ಸ್ಥಳೀಯರಿಂದ ಟೀಕೆಗಳು ವ್ಯಕ್ತವಾಗಿದ್ದು ಗಂಡ ಮತ್ತು ತಂಗಿಯ ಚಲ್ಲಾಟಕ್ಕೆ ಅಮಾಯಕಿ ಸಾವನ್ನಪ್ಪಿದ್ದು ಪೊಲೀಸರಲ್ಲಿ ಬೇಸರವನ್ನು ಮೂಡಿಸಿದೆ. ಇಂದು ಸಾಕ್ಷಿ ಜೈಲಿಗೆ ಸೇರಿದ ಬಳಿಕ ಸಂತಾಪ ವ್ಯಕ್ತಪಡಿಸುತ್ತಿದ್ದು ಹೋದ ಜೀವ ಮತ್ತೆ ಬರುವುದಿಲ್ಲ ಎಂದು ಅರ್ಥವಾಗಿರಬಹುದು ಅಭಿಲಾಷಾಳ ಗಂಡನ ಬಗೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here