ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಕ ಆದ ಪೊಲೀಸ್ ಕಮೀಷನರ್

0
106

ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ 6 ವರ್ಷ ವಯಸ್ಸಿನ, 2 ನೇ ತರಗತಿ ವಿದ್ಯಾರ್ಥಿ ದುದೇಕಾಲಾ ಇಶಾನ್ ಎಂಬ ಬಾಲಕ ಒಂದು ದಿನದ ಮಟ್ಟಿಗೆ ರಾಚಕೊಂಡದ ಪೊಲೀಸ್ ಕಮೀಷನ್ ಆಗಿ ಕಾರ್ಯನಿರ್ವಹಿಸಿದ್ದಾನೆ. ರಾಚಕೊಂಡದ ಪೊಲೀಸ್ ಕಮೀಷನರ್ ಮಹೇಶ್ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, “ಇಶಾನ್ ಎಂಬ ಹೆಸರಿನ ಈ ಬಾಲಕ ಮಾರಣಾಂತಿಕ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಈತ ಸಣ್ಣ ವಯಸ್ಸಿನಿಂದಲೂ ಪೊಲೀಸ್ ಆಫೀಸರ್ ಆಗಬೇಕೆಂದು ಕನಸು ಕಂಡಿದ್ದನಂತೆ, ಬಾಲಕನ ಇಚ್ಚೆಯಂತೆ “ಮೇಕ್-ಎ-ವಿಶ್ ಫೌಂಡೇಷನ್” ಸಹಕಾರದೊಂದಿಗೆ ಬಾಲಕನ ಆಸೆಯನ್ನು ಪೂರೈಸಲಾಗಿದೆ.

ಇಂತಹ ಮಕ್ಕಳನ ಈ ರೀತಿಯ ಆಸೆಗಳನ್ನು ಪೂರೈಸುವುದು ನಮಗೂ ಸಂತೋಷದ ವಿಚಾರ” ಎಂದರು.ಕಳೆದ ಮೂರು ತಿಂಗಳಿನಿಂದ ಇಶಾನ್‌ಗೆ MNJ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಶಾನ್ ಕುಟುಂಬಕ್ಕೆ ಮಗುವಿನ ಚಿಕಿತ್ಸೆಗೆಂದು ನಾವು ರೂ. 10,000 ಧನ ಸಹಾಯ ಮಾಡಿದ್ದೇವೆ ಎಂದ ಕಮೀಷನರ್ ಮಹೇಶ್, ಈ ಮಗು ಶೀಘ್ರ ಗುಣಮುಖವಾಗಲಿ ಮತ್ತು ಮುಂದೆ ಒಂದು ದಿನ ರಾಚಕೊಂಡದ ಪೊಲೀಸ್ ಕಮೀಷನರ್ ಆಗಲಿ ಎಂದು ಹಾರೈಸಿದರು.

ಪೊಲೀಸ್ ಸಮವಸ್ತ್ರ ಧರಿಸಿ ಕಮೀಷನರ್ ಕುರ್ಚಿಯಲ್ಲಿ ಕುಳಿತಿದ್ದ ಇಶಾನ್‌ಗೆ ಎಲ್ಲ ಪೊಲೀಸರು ಗೌರವ ಸೆಲ್ಯೂಟ್ ಹೊಡೆದು ಸ್ವಾಗತಿಸಿ ಆತನ ಇಚ್ಛೆಯನ್ನು ಪೂರೈಸಿದರು. ತದನಂತರ ಮಾತನಾಡಿದ ಇಶಾನ್ ನಾನು ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ಕ್ರಮಕೈಗೊಳ್ಳುವುದಾಗಿ ಹೇಳಿದ್ದಾನೆ.

LEAVE A REPLY

Please enter your comment!
Please enter your name here