‘ವಿಮಾನ ಪತನ’ ಎಂಬ ಸರಣಿ ದುರಂತಗಳ ಬೆನ್ನು ಹತ್ತಿ..!

0
219

ಭಾರತ ತನ್ನ ಮಿಲಿಟರಿ ಶಕ್ತಿಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಕೊಳ್ಳುತ್ತಿದೆ. ಪ್ರತಿಭಾರಿಯೂ ತನ್ನ ವಾರ್ಷಿಕ ಬಜೆಟ್‍ನಲ್ಲಿ ಸಿಂಹಪಾಲನ್ನು ರಕ್ಷಣಾ ಕ್ಷೇತ್ರಕ್ಕೆ ಮೀಸಲಿಡುತ್ತದೆ. ಇದು ಕೇವಲ ಭಾರತದ ಕಥೆಯಲ್ಲ, ವಿಶ್ವದ ಬಹುತೇಕ ರಾಷ್ಟ್ರಗಳ ಕತೆಯೂ ಹೀಗೆ. ಆದರೆ ರಕ್ಷಣಾ ವೆಚ್ಚಕ್ಕೆ ನೀಡುವ ಹಣದ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ ನಷ್ಟದ ಮಾಹಿತಿ ಕಡಿಮೆ.

ಹೌದು, ರಕ್ಷಣಾ ಕ್ಷೇತ್ರ ಚೆನ್ನಾಗಿದ್ದರೆ ಮಾತ್ರ ಯಾವುದೇ ರಾಷ್ಟ್ರ ನೆಮ್ಮದಿಯಾಗಿರಲು ಸಾಧ್ಯ. ಭಾರತ ಭೂ ಸೇನೆ, ನೌಕಾಸೇನೆ ಮತ್ತು ವಾಯುಸೇನೆಯನ್ನು ಹೊಂದಿದ್ದು, ಪ್ರತಿವರ್ಷವೂ ಹಲವಾರು ಕಾರ್ಯಗಳಿಗಾಗಿ ಕೋಟಿ ಕೋಟಿ ಹಣವನ್ನು ನೀಡುತ್ತದೆ. ಆದರೆ ಸೇನಾಪಡೆಗಳಲ್ಲಿಯೂ ನಷ್ಟ ತಪ್ಪಿದ್ದಲ್ಲ. ಸದ್ಯದ ಮಾಹಿತಿಯ ಪ್ರಕಾರ ಕಳೆದ ಐದು ವರ್ಷದ ಅವಧಿಯಲ್ಲಿ ಭಾರತೀಯ ಸೇನೆ ಅದರಲ್ಲೂ ಪ್ರಮುಖವಾಗಿ ವಾಯುಸೇನೆ ಕಳೆದುಕೊಂಡಿದ್ದು 26 ಯುದ್ಧ ವಿಮಾನಗಳನ್ನು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ವಾಯುಪಡೆಯ ಬಲಾಢ್ಯ ಯುದ್ಧವಿಮಾನಗಳು ಅಪಘಾತಕ್ಕೀಡಾಗಿ ನೆಲಕ್ಕಪ್ಪಳಿಸುತ್ತವೆ. ಹೀಗೆ ಅಪ್ಪಳಿಸಿದ ವಿಮಾನ ಮತ್ತೆ ಉಪಯೋಗಕ್ಕೆ ಬರುವುದಿಲ್ಲ. ಇದು ವಾಯುಪಡೆಗೆ ಆದ ಬಹುದೊಡ್ಡ ನಷ್ಟ ಎಂದೇ ಹೇಳಬೇಕು.

ರಕ್ಷಣಾ ಇಲಾಖೆ ಪಾರ್ಲಿಮೆಂಟಿಗೆ ಸಲ್ಲಿಸಿದ ಮಾಹಿತಿಯ ಪ್ರಕಾರ 26 ಫೈಟರ್ ಜೆಟ್ ವಿಮಾನಗಳು ಐದು ವರ್ಷದೊಳಗೆ ಪತನವಾಗಿದೆ. ಕೇವಲ ವಿಮಾನಗಳಲ್ಲ 12 ಪೈಲೆಟ್ಗಳು ಮತ್ತು ಏಳು ಸಿಬ್ಬಂದಿ ಮೃತರಾಗಿದ್ದಾರೆ ಎನ್ನಲಾಗಿದೆ. ದುರಂತ ಎಂದರೆ 2019ರ ಮೊದಲಾರ್ಧದಲ್ಲಿಯೇ ಆರು ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಪತನವಾಗಿದೆ. ಜನವರಿಯಲ್ಲಿ ಜಾಗ್ವಾರ್, ಎಂಕೆ 132 ಮತ್ತು ಮಿಗ್ 27ಯುಪಿಜಿ ವಿಮಾನಗಳು ಫೆಬ್ರವರಿ ತಿಂಗಳಲ್ಲಿ ಪತನವಾಗಿದೆ. ಮಾರ್ಚ್ ತಿಂಗಳಲ್ಲಿ ಮಿಗ್ 21 ಬೈಸನ್ ಮತ್ತು ಮಿಗ್ 27 ಯುಪಿಜಿ ವಿಮಾನಗಳು ದುರಂತ ಅಂತ್ಯ ಕಂಡಿವೆ. ಎ.ಎನ್ 32 ಯುದ್ಧ ವಿಮಾನ ಜೂನ್‍ನಲ್ಲಿ ಕಾರ್ಯಾಚರಣೆಯ ಸಮಯದಲ್ಲೆ ಪತನವಾಗಿದೆ ಎಂದು ರಕ್ಷಣಾ ಪಡೆಯ ವರದಿ ಹೊರಹಾಕಿದೆ.

ಇನ್ನು ಭಾರತೀಯ ವಾಯುಪಡೆ ಫೆಬ್ರವರಿಯಲ್ಲಿ ನಡೆಸಿ ಬಾಲಾಕೋಟ್ ದಾಳಿ ಎಲ್ಲರಿಗೂ ಚಿರಪರಿಚಿತ. ಈ ದಾಳಿಯ ವೇಳೆ ಮಿಗ್ 21 ಯುದ್ಧ ವಿಮಾನ ಪತನಗೊಂಡಿತ್ತು. ಇನ್ನು ವಾಯುಪಡೆಯ ಬಾಹುಬಲದ ಸುಖೋಯ್ ಯುದ್ಧ ವಿಮಾನಗಳು ಪತನವಾಗಿತ್ತು. ಒಟ್ಟಾರೆಯಾಗಿ ಯುದ್ಧ ವಿಮಾನಗಳ ಸಾಲು ಸಾಲು ಪತನ ವಾಯುಪಡೆಗೆ ಬಾರಿ ನಷ್ಟವನ್ನೆ ಮಾಡಿದೆ. ಈ ಯುದ್ಧ ವಿಮಾನಗಳ ಪತನ ರಕ್ಷಣಾ ಇಲಾಖೆಗೆ ನೀಡಿದ ಬಹುದೊಡ್ಡ ಪಾಠ ವಿಮಾನಗಳು ಮತ್ತು ಸಿಬ್ಬಂದಿಯ ಸಾವು ದೇಶಕ್ಕೆ ನಷ್ಟ.

LEAVE A REPLY

Please enter your comment!
Please enter your name here