ಮದುವೆ ಮುರಿದು ಬೆಂಗಳೂರಿಗೆ ಬಂದರಾ ಈ ಸೆಲೆಬ್ರೆಟಿ!?

0
286

ಎ.ಪಿ ಅರ್ಜುನ್, ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರು. ಸಿನಿಮಾ ಮಾಡಬೇಕೆಂದು ಕನಸು ಹೊತ್ತು ಮಂಡ್ಯದಿಂದ ಬೆಂಗಳೂರಿಗೆ ಬಂದು ಅನೇಕ ಏಳು-ಬೀಳುಗಳನ್ನು ಕಂಡು ಕನ್ನಡದ ಉತ್ತಮ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಅಂಬಾರಿ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ ಅರ್ಜುನ್,ತಮ್ಮ ಮೊದಲ ಚಿತ್ರದಲ್ಲೇ ಪ್ರೇಕ್ಷಕರಿಂದ ಹಾಗೂ ಸಿನಿಮಾ ರಂಗದವರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡರು.

ನಂತರ 2013 ರಲ್ಲಿ ದ್ರುವಸರ್ಜಾ ಅವರನ್ನು ಅದ್ದೂರಿ ಎಂಬ ಚಿತ್ರದ ಮುಖಾಂತರ ಬೆಳ್ಳಿ ತರೆಗೆ ಪಾದಾರ್ಪಣೆ ಮಾಡಿಸಿದರು. ಈ ಸಿನಿಮಾ ಶತದಿನೋತ್ಸವ ಆಚರಿಸುವ ಮೂಲಕ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು. ನಂತರ ರಾಟೆ, ಮಿಸ್ಟರ್ ಐರಾವತ ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತ ಬಂದಿರುವ ಎ.ಪಿ ಅರ್ಜುನ್, ಈಗ ಹೊಸಬರನ್ನು ಇಟ್ಟುಕೊಂಡು ಬೆಳ್ಳಿತೆರೆಯ ಮೇಲೆ ಕಿಸ್ ಕೊಡಿಸಲು ರೆಡಿಯಾಗಿದ್ದಾರೆ.

ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕಿಸ್ ಸಿನಿಮಾ ಇದೇ ಸೆಪ್ಟೆಂಬರ್ 27 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇನ್ನು ಈ ಸಿನಿಮಾ ಬಗ್ಗೆ ಮಾತಾನಾಡಲು ಕಿಸ್ ಚಿತ್ರದ ನಾಯಕ ವಿರಾಟ್ ಹಾಗೂ ನಿರ್ದೇಶಕ ಎ.ಪಿ ಅರ್ಜುನ್ ಅವರು, ನಮ್ಮ ಕನ್ನಡ ಯೂಟ್ಯೂಬ್ ಚಾನಲ್‍ನ ಹೆಸರಾಂತ ಸೆಲೆಬ್ರೆಟಿ ಟಾಕ್ ಶೋ ‘ಪಾಪ್‍ಕಾರ್ನ್’ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಕಿಸ್ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹೇಳುತ್ತ ಕೆಲವೊಂದು ಹಾಸ್ಯ ಸನ್ನಿವೇಶಗಳನ್ನು ಹಂಚಿಕೊಂಡರು.

ಈ ನಡುವೆ ನಿಮ್ಮ ಜೀವನದಲ್ಲಿ ನಿಮಗೆ ಕೇಳಿ ಬಂದ ವಿಯರೆಸ್ಟ್ ಗಾಸಿಪ್ ಯಾವುದು ಎಂದು ಕೇಳಿದ ನಿರೂಪಕಿಯ ಪ್ರಶ್ನೆಗೆ ಎ.ಪಿ ಅರ್ಜುನ್, ಐದು ವರ್ಷಗಳ ಹಿಂದೆ ಖಾಸಗಿ ಚಾನಲ್ ಒಂದರಲ್ಲಿ ಮತ್ತು ಪತ್ರಿಕೆಯಲ್ಲಿ ಅರ್ಜುನ್ ತಮ್ಮ ಊರಿನಲ್ಲಿ ಒಂದು ಹುಡುಗಿಯನ್ನು ಎಂಗೇಜ್‍ಮೆಂಟ್ ಆಗಿ ಅವಳನ್ನು ಬಿಟ್ಟು ಬಂದಿದ್ದಾನೆ ಎಂಬ ಸುದ್ಧಿ ಎಲ್ಲೆಡೆ ಹಬ್ಬಿಸಿದ್ದರು. ಇನ್ನು ಈ ವಿಷಯ ಮೂರ್‍ನಾಲ್ಕು ತಿಂಗಳುಗಳ ಕಾಲ ಹರಿದಾಡುತ್ತಲೇ ಇತ್ತು.

ಇದಕ್ಕೆ ಅರ್ಜುನ್ ಹೇಗೆ ಪ್ರತಿಕ್ರಯಿಸಿದ್ದಾರೆ ನೋಡಬೇಕ? ಹಾಗದರೆ ಈ ವಿಡಿಯೋ ನೋಡಿ.

LEAVE A REPLY

Please enter your comment!
Please enter your name here