ಶಿಕ್ಷಣ ಕ್ಷೇತ್ರದಲ್ಲೊಂದು ಹೊಸ ಕ್ರಾಂತಿ: ಇಲ್ಲಿ ಪ್ಲಾಸ್ಟಿಕ್​ ವಸ್ತುಗಳೇ ಶಾಲಾ ಶುಲ್ಕ

0
150

ಇಂತಹದೊಂದು ವಿಭಿನ್ನ ಮಾದರಿ ಶಾಲೆಯನ್ನು ಪ್ರಾರಂಭಿಸಿದ್ದು, ಮಜಿನ್ ಮುಖ್ತಾರ್ ಮತ್ತು ಅವರ ಸಹವರ್ತಿ ಪರ್ಮಿತಾ ಶರ್ಮಾ. ಅಸ್ಸಾಂ ಭಾಗದಲ್ಲಿ ವಿದ್ಯಾಭ್ಯಾಸದಲ್ಲಿ ಹೊಸ ಸಂಚಲನ ಸೃಷ್ಟಿಸಲು ಮಜಿನ್ ಹಾಗೂ ಪರ್ಮಿತಾ ಬಯಸಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 71 ವರ್ಷಗಳು ಕಳೆದರೂ ಇಂದಿಗೂ ಹಲವರ ಪಾಲಿಗೆ ಶಿಕ್ಷಣ ದೂರದ ಮಾತಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ದುಬಾರಿ ಶುಲ್ಕ ಅಥವಾ ಸರ್ಕಾರಿ ಶಿಕ್ಷಣ ಸಂಸ್ಥೆಗಳ ನಿರ್ಲಕ್ಷ್ಯದಿಂದ ಜನ ಸಾಮಾನ್ಯರ ಮಕ್ಕಳು ಕನಿಷ್ಠ ಶಿಕ್ಷಣಕ್ಕಾಗಿ ಪರದಾಡುವಂತಾಗಿದೆ. ಅಂತದ್ರರಲ್ಲಿ ಸಂಸ್ಥೆಯೊಂದು ಕೇವಲ ಪ್ಲಾಸ್ಟಿಕ್ ಸಂಗ್ರಹಿಸಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ ಎಂದರೆ ನಂಬಲೇಬೇಕು.

ಶಿಕ್ಷಣ ಸಂಸ್ಥೆಗಳ ದುಬಾರಿ ಶುಲ್ಕವನ್ನು ಮೆಟ್ಟಿ ನಿಂತಿರುವ ವಿಭಿನ್ನ ಶಾಲೆ ಇರುವುದು ಗುವಾಹಟಿ ರಾಜ್ಯದ ಪಮೋಹಿಯಲ್ಲಿ. ಅಕ್ಷರ್ ಎಂಬ ಹೆಸರಿನ ಈ ಶಾಲೆಯು ಮಕ್ಕಳಿಂದ ಪ್ಲಾಸ್ಟಿಕ್ ಸಂಗ್ರಹಿಸಿ ಉಚಿತ ಶಿಕ್ಷಣ ಒದಗಿಸುತ್ತಿದೆ. ಮಕ್ಕಳಿಗೆ ಪ್ಲಾಸ್ಟಿಕ್ ತ್ಯಾಜ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಆರಂಭವಾದ ಈ ಅಭಿಯಾನ, ಇಂದು ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸದೇ ಶಿಕ್ಷಣ ಪಡೆಯುವಂತಾಗಿರುವುದು ಮೆಚ್ಚಲೇಬೇಕು. ಪ್ರತಿನಿತ್ಯ ಶಾಲೆಗೆ ಬರುವ ವಿದ್ಯಾರ್ಥಿಗಳು ಪ್ಲಾಸ್ಟಿಕ್​ಗಳನ್ನು ಸಂಗ್ರಹಿಸಿ ನೀಡುತ್ತಾರೆ. ಇದರ ಆಧಾರದಲ್ಲಿ ಮಕ್ಕಳ ಶುಲ್ಕವನ್ನು ನಿರ್ಣಯಿಸಲಾಗುತ್ತದೆ.

ಒಂದೆಡೆ ಪರಿಸರ ಸ್ವಚ್ಛವಾಗುತ್ತಿದ್ದರೆ, ಮತ್ತೊಂದೆಡೆ ಉಚಿತ ಶಿಕ್ಷಣ ಮಕ್ಕಳಿಗೆ ದೊರೆಯುತ್ತಿದೆ. ಈ ಮೂಲಕ ಪ್ಲಾಸ್ಟಿಕ್​ ಸುಡುವುದರಿಂದ ಆರೋಗ್ಯದ ಮೇಲಾಗುವ ಅಪಾಯದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವಲ್ಲಿ ಅಕ್ಷರ್ ಸಂಸ್ಥೆಯು ಯಶಸ್ವಿಯಾಗಿದೆ. ಶಾಲೆಯ ಸುತ್ತ ಮುತ್ತಲಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸುವ ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳುವುದಲ್ಲದೆ, ಸ್ಥಳೀಯರಲ್ಲೂ ಪ್ಲಾಸ್ಟಿಕ್ ಬಗೆಗಿನ ಅರಿವು ಮೂಡಿಸುತ್ತಿದ್ದಾರೆ. ಇಂತಹದೊಂದು ವಿಭಿನ್ನ ಮಾದರಿ ಶಾಲೆಯನ್ನು ಪ್ರಾರಂಭಿಸಿದ್ದು, ಮಜಿನ್ ಮುಖ್ತಾರ್ ಮತ್ತು ಅವರ ಸಹವರ್ತಿ ಪರ್ಮಿತಾ ಶರ್ಮಾ.

ಅಸ್ಸಾಂ ಭಾಗದಲ್ಲಿ ವಿದ್ಯಾಭ್ಯಾಸದಲ್ಲಿ ಹೊಸ ಸಂಚಲನ ಸೃಷ್ಟಿಸಲು ಮಜಿನ್ ಹಾಗೂ ಪರ್ಮಿತಾ ಬಯಸಿದ್ದರು. ಇವರ ಕನಸಿಗೆ ಆರಂಭದಲ್ಲಿ ಸಾಥ್ ನೀಡಿದ್ದು ಟಾಟಾ ಇನ್ಸಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಸಂಸ್ಥೆ. ಇವರ ಸಹಾಯದಿಂದ ಪ್ರಾರಂಭವಾದ ಶಾಲೆಯಲ್ಲಿ ಮೊದಲ ವರ್ಷ ಇದ್ದದ್ದು ಕೇವಲ 20 ವಿದ್ಯಾರ್ಥಿಗಳು ಮಾತ್ರ. ಇಂದು ಇದೇ ಸಂಸ್ಥೆಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ 7 ಶಿಕ್ಷಕರು ವಿದ್ಯಾಭ್ಯಾಸ ಒದಗಿಸುತ್ತಿದ್ದಾರೆ.
ಅಸ್ಸಾಂನಲ್ಲಿ ಚಳಿಗಾಲದ ಸಂದರ್ಭದಲ್ಲಿ ಸ್ಥಳೀಯರು ಪ್ಲಾಸ್ಟಿಕ್​ಗೆ ಬೆಂಕಿ ಹಾಕಿ ಮೈ ಕಾಯಿಸಿಕೊಳ್ಳುತ್ತಿರುತ್ತಾರೆ. ಇದರ ಬಗ್ಗೆ ಜನರಿಗೆ ಅರಿವು ಮೂಡಿಸಲು ಮಜಿನ್ ನಿರ್ಧರಿಸಿದ್ದರು.

ಅದನ್ನು ಶಾಲೆಯಿಂದಲೇ ಆರಂಭಿಸಲು ಯೋಜನೆ ಹಾಕಿಕೊಂಡಿದ್ದರು. ಆದರೆ ಆರಂಭದಲ್ಲಿ ಯಾವುದೂ ಸುಲಲಿತವಾಗಿರಲಿಲ್ಲ. ಏಕೆಂದರೆ ಕನಿಷ್ಠ ಶಿಕ್ಷಣ ಒದಗಿಸಬೇಕಾದರರೂ, ಸರಿಯಾದ ಪಠ್ಯಕ್ರಮಗಳನ್ನು ಹೊಂದಿಸಬೇಕಾಗಿತ್ತು. ಇವೆಲ್ಲವನ್ನು ಸರಿ ಹೊಂದಿಸಿದ ಸಂಸ್ಥಾಪಕರು, ಬಳಿಕ ಶುಲ್ಕದ ರೀತಿಯಲ್ಲಿ ವಿದ್ಯಾರ್ಥಿಗಳಿಂದ ವಾರಕ್ಕೆ ಕನಿಷ್ಠ 25 ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಲು ಆರಂಭಿಸಿದರು. ಅಸ್ಸಾಂನಲ್ಲಿ ಚಳಿಗಾಲದ ಸಂದರ್ಭದಲ್ಲಿ ಸ್ಥಳೀಯರು ಪ್ಲಾಸ್ಟಿಕ್​ಗೆ ಬೆಂಕಿ ಹಾಕಿ ಮೈ ಕಾಯಿಸಿಕೊಳ್ಳುತ್ತಿರುತ್ತಾರೆ.

ಇದರ ಬಗ್ಗೆ ಜನರಿಗೆ ಅರಿವು ಮೂಡಿಸಲು ಮಜಿನ್ ನಿರ್ಧರಿಸಿದ್ದರು. ಅದನ್ನು ಶಾಲೆಯಿಂದಲೇ ಆರಂಭಿಸಲು ಯೋಜನೆ ಹಾಕಿಕೊಂಡಿದ್ದರು. ಈ ಪ್ಲಾಸ್ಟಿಕ್ ವಸ್ತುಗಳನ್ನು ಹೇಗೆ ಮರುಬಳಕೆ ಮಾಡಬಹುದು ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು. ಒಂದು ಬಾರಿ ಬಳಸಿದ ಪ್ಲಾಸ್ಟಿಕ್ ಬಾಟಲ್, ಚೀಲಗಳನ್ನು ಯಾವ ರೀತಿಯಾಗಿ ಮರುಬಳಕೆ ಮಾಡಿ ವಿವಿಧ ವಸ್ತುಗಳನ್ನು ತಯಾರಿಸಬಹುದು ಎಂಬುದನ್ನು ತೋರಿಸಿದರು. ಹೊಸ ರೀತಿಯ ಬೋಧನಾ ಶೈಲಿಯು ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸಿತು. ದಿನ ಕಳೆದಂತೆ ಶಾಲೆಯ ಈ ಪಠ್ಯಕ್ರಮವು ಎಲ್ಲ ಕಡೆ ಜನಪ್ರಿಯತೆ ಗಳಿಸಿತು.

ಇಂದು ಅಕ್ಷರ್ ಶಾಲೆಯಲ್ಲಿ ಒಂದರಿಂದ 9ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. 4 ರಿಂದ 15 ವರ್ಷದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಈ ಪರಿಸರ ಸ್ನೇಹಿ ಶಾಲೆಯನ್ನು ವಿವಿಧೆಡೆ ವಿಸ್ತರಿಸಬೇಕೆಂಬ ಆಸೆಯನ್ನು ಮಜಿನ್-ಪರ್ಮಿತಾ ಹೊಂದಿದ್ದಾರೆ. ಈ ಮೂಲಕ ಮತಷ್ಟು ಪರಿಸರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಕನಸು ಕಟ್ಟಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here