ಇದೊಂದು ದ್ವೀಪ ನಗರ ಇಲ್ಲಿ ಜೈಲಿತ್ತು ಆದರೆ ಅಲ್ಲಿ ಜೈಲಿ ಇದ್ದದ್ದು ಅಲ್ಲಿನ ಒಂದು ತಲೆಮಾರಿಗೆ ಗೊತ್ತೇ ಆಗಿಲ್ಲ. ಅಲ್ಲಿ ಆಡಳಿತಗಾರರು ಲಕ್ಷ ಲಕ್ಷ ಜನರನ್ನು ಬಂಧಿಸಿಟ್ಟಿದ್ದರು, ಕೊಂದಿದ್ದರು. ಅದೆಷ್ಟೋ ಅಮಾನವೀಯ ಭೀಕರತೆಗೆ ಈ ಜೈಲು ಸಾಕ್ಷಿಯಾಗಿತ್ತು.
ಭಾರತದಲ್ಲಿ ಬ್ರಿಟಿಷರು ಮಾಡಿದ ಕ್ರೂರ ಕೃತ್ಯಗಳಿಗೆ ಲೆಕ್ಕವೇ ಇಲ್ಲ, ಅವರ ಆಟಾಟೋಪ ಕಂಡಿದ್ದ ಘನಘೋರ ಕಥೆಗಳನ್ನು ಕೇಳಿದ್ದವರಿಗೆ ರಕ್ತ ಕುದ್ದು ಹೋಗುತ್ತೆ. ಹಾಗೆಯೇ ಆ ಬ್ರಿಟಿಷರಿಗೂ ಕೆಲವು ಸ್ಥಳಗಳು ನಿದ್ರೆಗೆಡಿಸಿದ್ದವು.
ದಕ್ಷಿಣ ಭಾರತದಲ್ಲಿ ಬ್ರಿಟಿಷರು ನಡೆಸಿದ ಕೃತ್ಯಗಳು ಇಲ್ಲಿನ ರಾಜರಿಗೆ ಬಹಳ ಕೋಪ ತರಿಸಿತ್ತು, ಅದಕ್ಕೆ ಬ್ರಿಟಿಷರ ವಿರುದ್ಧವೇ ಅವರು ತಿರುಗಿಬಿದ್ದಿದ್ದರು ತಮ್ಮ ರಾಜ್ಯ ಉಳಿಸಿಕೊಳ್ಳಲು. ಅಂತಹವರಲ್ಲಿ ಒಬ್ಬಾತ ಈ ಬ್ರಿಟಿಷರಿಗಾಗಿಯೇ ಜೈಲುಗಳನ್ನು ಕಟ್ಟಿಸಿದ್ದ. ಆ ಜೈಲುಗಳು ನೂರಾರು ಬ್ರಿಟಿಷರಿಗೆ ಚಿತ್ರಹಿಂಸೆ ನೀಡಿತ್ತು.
ಬೆಂಗಳೂರು –ಮೈಸೂರು ಹೆದ್ದಾರಿಯಲ್ಲಿ ಹಾದು ಬರುವಾಗಸಿಗುವ ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರು ನಡೆಸಿದ ಕೃತ್ಯಗಳು ಚರಿತ್ರೆಯಲ್ಲಿ ದಾಖಲಾಗಿವೆ. ಇದೇ ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರಿಗೆ ಚಿತ್ರಹಿಂಸೆಯನ್ನೂ ನೀಡಲಾಗಿತ್ತು ಅದಕ್ಕೆ ಈಗಲೂ ಸಾಕ್ಷಿಗಳು ಕಣ್ಣ ಮುಂದಿವೆ.

ಶ್ರೀರಂಗಪಟ್ಟಣದಲ್ಲಿ ಆಡಳಿತ ನಡೆಸುತ್ತಿದ್ದ ಟಿಪ್ಪು ಬ್ರಿಟಿಷರ ಕಡುವೈರಿಯಾಗಿದ್ದ, ಆತ ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಳ್ಳುವರನ್ನು ಜೈಲಿನಲ್ಲಿಟ್ಟು ಚಿತ್ರಹಿಂಸೆಯನ್ನೂ ಕೊಟ್ಟಿದ್ದ. ಆ ಜೈಲುಗಳು ಡಂಜನ್ ಎಂದೇ ಚಿರಪರಿಚಿತವಾಗಿವೆ. ಇಂತಹ ಡಂಜನ್ಗಳು ನಿಗೂಢವಾಗಿತ್ತು. ಸುಮಾರು 96 ವರ್ಷಗಳ ಕಾಲ ಜನರಿಂದ ಈ ಜೈಲು ಕಣ್ಮರೆಯಾಗಿತ್ತು.
ಆ ಭಯಾನಕ ಡಂಜನ್ಗಳು ಇರುವುದು ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯದ ಉತ್ತರ ದಿಕ್ಕಿನಲ್ಲಿಯೇ. ಕೋಟೆಯ ಗೋಡೆಗೆ ಹೊಂದಿಕೊಂಡಿರುವ ಇದ್ದು, ದಾರಿಹೋಕರಿಗೆ ಕಾಣದಂತಿದೆ. 30 ಮೀಟರ್ ಉದ್ದ, 12 ಮೀಟರ್ ಅಗಲದ ಕರ್ನಲ್ ಬೈಲಿ ಮತ್ತು ಇನ್ಮ್ಯಾನ್ಸ್ ಡಂಜನ್ಗಳು ಜನರನ್ನು ಭಯಬೀಳಿಸುತ್ತದೆ. ಈ ಜೈಲಿನಲ್ಲಿ ಆ ಕಾಲದಲ್ಲಿ 153 ಜನರನ್ನೂ ಕೂಡಿಹಾಕಲಾಗಿತ್ತು, ಆ ಭಯಾನಕ ಜೈಲಿನಿಂದ ಬದುಕುಳಿದು ಬಂದವರೂ ಕೇವಲ 32 ಮಂದಿಯಂತೆ. ಇಲ್ಲಿಯೇ 1782ರ ನವೆಂಬರ್ 3 ರಂದು ಕೊನೆಯುಸಿರೆಳೆದ ಕರ್ನಲ್ ಬೈಲಿಯ ಹೆಸರನ್ನೇ ಈ ಜೈಲಿಗೆ ಇಡಲಾಗಿತ್ತು.
ಇನ್ನು ಈ ಕ್ರೂರ ಜೈಲುಗಳು 1799 ರಿಂದ 1895 ರವರೆಗೂ ಯಾರಿಗೂ ಕಾಣದಂತೆ ಮುಚ್ಚಿಹೋಗಿದ್ದವು, ಇಲ್ಲಿ ಜೈಲು ಇತ್ತೆಂದು ಯಾರಿಗೂಈ ತಿಳಿಯದೇ ಹೋಗಿತ್ತು. ಅಂದಾಜು ಒಂದು 1895 ಬಳಿಕವೇ ಶೋಧನೆಗಳ ಬಳಿಕ ಇಲ್ಲಿ ಜೈಲು ಇತ್ತು ಎಂದು ಪತ್ತೆ ಮಾಡಿದಾಗ ಕಂಡಿದ್ದು ಈ ಭಯಾನಕ ಡಂಜನ್ಗಳು.