ಇಬ್ಬರು ಮಕ್ಕಳನ್ನು ಬಲಿಪಡೆದ ಮ್ಯಾನ್ ಹೋಲ್

0
179

ಆಟವಾಡುವ ವೇಳೆ ತೆರೆದ ಮ್ಯಾನ್ ಹೋಲ್ ಗೆ ಇಬ್ಬರು ಮಕ್ಕಳು ಬಿದ್ದು ಸಾವನ್ನಪ್ಪಿರುವ ಘಟನೆ ಹರಿಯಾಣದ ಯಮುನಾ ನಗರದಲ್ಲಿ ನಡೆದಿದೆ . ದೇಶದಲ್ಲಿ ಈ ರೀತಿಯ ಹಲವು ಜನ ಪ್ರಾಣ ಕಳೆದುಕೊಳ್ಳುತ್ತಿರುವುದು ನಡೆಯುತ್ತಲೇ ಇದ್ದು ಇದಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ ಧೋರಣೆ ಮುಂದುವರೆಯುತ್ತಲೇ ಇರುವುದು ಜನರಲ್ಲಿ ಭಯವನ್ನು ಮೂಡಿಸುತ್ತಿದೆ.

ಆಕಾಶ್ (3) ಹಾಗೂ ದಕ್ಷ (5) ಇಬ್ಬರು ಮಕ್ಕಳು ಅಸುನೀಗಿದ್ದಾರೆ. ಪೋಷಕರು ಈ ಘಟನೆಯಿಂದ ನೊಂದು ನರಳುತ್ತಿದ್ದಾರೆ.
ಸಾರ್ವಜನಿಕರಲ್ಲಿ ಇದರ ಬಗೆಗೆ ನಿರ್ಲಕ್ಷ್ಯ ಹೆಚ್ಚಾಗುತ್ತಿದ್ದು ರಸ್ತೆಯ ಗುಂಡಿಗಳಿಂದ ಬೈಕ್ನಲ್ಲಿ ಬಿದ್ದು ಸಾವನ್ನಪ್ಪುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಇಂತಹ ನಿದರ್ಶನಗಳಿಂದ ಎಚ್ಚೆತ್ತು ಸಾರ್ವಜನಿಕರಾದರು ಗುಂಡಿಗಳು ಕಂಡರೆ ಮುಚ್ಚುವುದು ಅಥವಾ ಈ ರೀತಿಯ ಅವಘಡಗಳು ಸಂಭವಿಸದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಉತ್ತಮವಾಗಿದೆ. ಪಾಲಿಕೆಯವರು ಇದಕ್ಕೆ ಸಂಬಂಧಿಸಿದಂತೆ ನಿರ್ಲಕ್ಷವನ್ನು ತೋರದೆ ಇದ್ದರೆ ಪ್ರಾಣ ಹಾನಿಯನ್ನು ತಡೆಗಟ್ಟಬಹುದಾಗಿದೆ.
ನಿರ್ಲಕ್ಷ್ಯ ತೋರಿರುವ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆಯವರು ಮಾಹಿತಿಯನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here