ಪ್ರೀತಿಸಿದ ಹುಡುಗಿ ಕೈಕೊಟ್ಳು ಎಂದು ನೇತ್ರಾವತಿ ನದಿಗೆ ಹಾರಿದ ಮಂಗಳೂರಿನ ಹುಡುಗ ನಂತರ ಏನಾಯ್ತು ಗೊತ್ತಾ?

0
434

ಪ್ರೀತಿಸಿದ ಹುಡುಗಿ ಕೈ ಕೊಟ್ಳು ಅಂತ ಈ ಯುವಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ . ಹೌದು ಈ ಘಟನೆ ಮಂಗಳೂರಿನಲ್ಲಿ ನಡೆದಿದೆ . ಕಾಸರಗೋಡು ಮಂಜೇಶ್ವರ ನಿವಾಸಿ 23 ವರ್ಷದ ನೌಫಲ್ , ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ್ದಾನೆ , ನಂತ್ರ ಕೊನೆಗೆ ತಾನೇ ಈಜಿಕೊಂಡು ಬಂದು ದಡ ಸೇರಿದ್ದಾನೆ . ನೌಫಲ್ ಎಂಬ ಯುವಕ ತನ್ನ ಸ್ನೇಹಿತನ ಜೊತೆಗೆ ಟೆಂಪೋದಲ್ಲಿ ಮಂಗಳೂರಿನ ಕಡೆಗೆ ಹೊರಟಿದ್ದ , ಆದ್ರೆ ನೇತ್ರಾವತಿ ಸೇತುವೆಯ ಹತ್ರ ಬಂದು , ವಾಂತಿ ಮಾಡುವ ನೆಪದಲ್ಲಿ ನದಿಗೆ ಹಾರಿ ಬಿಟ್ಟಿದ್ದಾನೆ .

ಕೊನೆಯ ಕ್ಷಣದಲ್ಲಿ ಈಜುತ್ತಾ ಸೇತುವೆಯ ಪಿಲ್ಲರ್‍ ಹತ್ತಿರ ಬಂದು ಸ್ಲ್ಯಾಬ್ ಹತ್ತಿ ಕುಳಿತಿದ್ದಾನೆ. ಈ ಯುವಕನನ್ನು ನೋಡಲು ಸೇತುವೆಯ ಹತ್ತಿರ ಜನರ ಗುಂಪು ಕೂತುಹಲದಿಂದ ಸೇರಿದ್ರು . ಮಂಗಳೂರು ನಗರ ಟ್ರಾಫಿಕ್ ಪೋಲಿಸರು ಮತ್ತು ಅಲ್ಲಿ ಬಂದಿದ್ದ ಜನರ ಸಹಾಯದಿಂದ ನೌಫಲ್ ನನ್ನು ಮೇಲೆ ಕರೆತಂದು , ನಂತ್ರ ಕಂಕನಾಡಿ ನಗರ ಪೋಲಿಸ್ ಠಾಣೆಗೆ ಹಸ್ತಾಂತರ ಮಾಡಿದ್ದಾರೆ . ಪೋಲಿಸ್ ಠಾಣೆಯಲ್ಲಿ ಈತ , ತಾನು ಒಂದು ಹುಡುಗಿಯನ್ನ ಪ್ರೀತಿಸುತ್ತಿದ್ದೆ ಆದ್ರೆ ಪ್ರೇಮ ವೈಫಲ್ಯ ಆದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಲು ನಿರ್ಧರಿಸಿ ನದಿಗೆ ಹಾರಿದ್ದೇನೆ ಅಂತ ಹೇಳಿಕೊಂಡಿದ್ದಾನೆ ಆ ಯುವಕ.

ಈತ ನದಿಗೆ ಹಾರಿ ಅಲ್ಲಿ ಈಜಾಡಿ ಸೇತುವೆಯ ಪಿಲ್ಲರ್‍ ಹತ್ತಿ ಕುಳಿತ ವಿಡಿಯೋ ಈಗ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ . ಈ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ .

LEAVE A REPLY

Please enter your comment!
Please enter your name here