ಹುಚ್ಚು ಅಭಿಮಾನಿ ತನ್ನ ಮೋಹಕ್ಕೆ 75 ಲಕ್ಷ ರೂ ಹಣ ಕಳೆದುಕೊಂಡಿದ್ದಾನೆ.

0
104

ಪ್ರದೀಪ್ ಕುಮಾರ್ 27 ತಮಿಳುನಾಡಿನ ಉದ್ಯಮಿಯೊಬ್ಬರ ಪುತ್ರ ನಟಿ ಕಾಜಲ್ ಅಗ್ಗರವಾಲ್ ಅವರ ಅಪ್ಪಟ ಅಭಿಮಾನಿ ಆಗಿದ್ದು ಕಾಜಲ್ ರವರನ್ನು ಭೇಟಿ ಯಾಗುವ ಸಲುವಾಗಿ ಸುಮಾರು 75 ಲಕ್ಷ ರೂ ಹಣವನ್ನು ಕಳೆದುಕೊಂಡಿದ್ದಾರೆ.

ಈತನು ತನ್ನ ಸ್ನೇಹಿತರ ಬಳಿ ಕಾಜಲ್ ಅಗರವಾಲ್ ರವರನ್ನು ಭೇಟಿಯಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದ . ಈತನ ಸ್ನೇಹಿತರು ಸಿನಿತಾರೆಯರ ವೆಬ್ ಸೈಟ್ ಒಂದರಲ್ಲಿ ಲಾಗಿನ್ ಆಗಲು ತಿಳಿಸಿದ್ದಾರೆ. ರಿಜಿಸ್ಟರ್ ಆದ ಹತ್ತು ನಿಮಿಷಗಳ ಬಳಿಕ ವ್ಯಕ್ತಿಯೊಬ್ಬನಿಂದ ಕರೆ ಬಂದಿತ್ತು ಆತನು ಪ್ರದೀಪ್ ನಿಂದ ಐಡಿ ಪ್ರೂಫ್ ಆತನ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾನೆ ನಂತರ ಅವರನ್ನು ಭೇಟಿ ಮಾಡಿಸುವುದಾಗಿ ಭರವಸೆ ನೀಡಿ ಸರ್ವಿಸ್ 50000 ಪಾವತಿಸಬೇಕಾಗಿ ತಿಳಿಸಿದ್ದಾನೆ ಮುಂಗಡ ಹಣವೆಂದು 25,000 ಒಂದು ಪಡೆದುಕೊಂಡಿದ್ದು ಈತನು ಉದ್ಯಮಿಯ ಪುತ್ರನೆಂದು ತಿಳಿದಮೇಲೆ ವಂಚಕರು ಬೆದರಿಸಿ ಕ್ರಮೇಣವಾಗಿ 75ಲಕ್ಷ ರೂ ಹಣವನ್ನು ಕಿತ್ತಿದ್ದಾರೆ.

ಈ ರೀತಿ ಮೋಸ ಹೋಗಿದ್ದಲ್ಲದೆ ಮೋಸಗಾರರಿಂದ ನಿರಂತರ ಕಿರುಕುಳದಿಂದ ನೊಂದ ಪ್ರದೀಪ್ ಮನೆಬಿಟ್ಟು ಕೋಲ್ಕತ್ತಾಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾನೆ, ಪ್ರದೀಪ್ ತಂದೆ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಅವರನ್ನು ಕರೆತಂದಿದ್ದಾರೆ ಪೊಲೀಸರ ವಿಚಾರಣೆಯ ವೇಳೆ ಪ್ರದೀಪ್ ತಾನು ಕಾಜಲ್ ಅಗರವಾಲ್ ರವರನ್ನು ಭೇಟಿಯಾಗಿಯಾಗಲೂ ಇಚ್ಚಿಸಿದ್ದು ಹಾಗೂ ಮೋಸ ಹೋದದ್ದು ತಿಳಿಸಿದ್ದಾನೆ.
ಪ್ರದೀಪ್ ನಿಂದ ಮಾಹಿತಿಯನ್ನು ಪಡೆದು ಪೊಲೀಸರು ರಾಮನಾಥಪುರಂ ನಲ್ಲಿ ನಡೆಯುತ್ತಿದ್ದ ಆನ್ಲೈನ್ ವಂಚಕರ ಜಾಲವನ್ನು ಬಂಧಿಸಿದ್ದಾರೆ ಚೆನ್ನೈನ ವಸತಿಗೃಹವೊಂದರಲ್ಲಿ 37 ವರ್ಷದ ಶರಣ್ ಕುಮಾರ್ ಗೋಪಾಲನ್ ಎಂಬುವವರನ್ನು ಬಂಧಿಸಿದ್ದಾರೆ.
ಶರವಣ್ ಕುಮಾರ್ ಮಣಿಕಂಠನ್ ಎಂಬುವವರಿಗೆ ಖಾತೆಯಿಂದ ವರ್ಗಾವಣೆ ಮಾಡಿಸಿಕೊಂಡಿದ್ದ ಮಣಿಕಂಠನ್ ತಮಿಳು ಚಲನ ಚಿತ್ರವನ್ನು ನಿರ್ದೇಶಿಸುತ್ತಿದ್ದು ಶರವಣ್ ಕುಮಾರ್ ಬಂಡವಾಳ ಹೂಡುತ್ತಿದ್ದರು ,ಎಂದು ಪೊಲೀಸರು ತಿಳಿಸಿದ್ದಾರೆ. ಅನ್ಯ ಮಾರ್ಗದ ಸಂಪಾದನೆಯಿಂದ ಇವರು ಪೊಲೀಸರ ವಶವಾಗಿದ್ದಾರೆ. ಆನ್ಲೈನ್ ಮೂಲಕ ವಂಚನೆಗೊಳಗಾಗುವವರ ಪಟ್ಟಿ ಹೆಚ್ಚಾಗುತ್ತಲೇ ಇದೆ . ವಿದ್ಯಾವಂತರು ಹೆಚ್ಚಾಗಿ ಮೋಸ ವಾಗುತ್ತಿರುವುದು ಅಸಹನಿಯ ಸ್ಥಿತಿ ಎನ್ನುವುದೊ ಅತಿ ಬುದ್ಧಿವಂತಿಕೆ ಎನ್ನುವುದು ತಿಳಿಯುವುದಿಲ್ಲ.

LEAVE A REPLY

Please enter your comment!
Please enter your name here