ಬಾಳಿಗೊಂದು ಬಂಗಾರದ ಮಾತು !

0
364

ಗೆಜ್ಜೆಯ ಬೆಲೆ ಸಾವಿರ ಸಾವಿರ,ಆದರೆ ಹಾಕುವುದು ಕಾಲಿನಲ್ಲಿ.. ಕುಂಕುಮದ ಬೆಲೆ ಪೈಸಗೆ ಸಿಗುತ್ತದೆ ಆದರೆ ಹಚ್ಚುವುದು ಹಣೆಯಲ್ಲಿ !
ಹುಕ್ಕಿನಂತೆ ಕಟು ಮಾತನ್ನು ಹೇಳುವವನು ನಿಜವಾದ ಸ್ನೇಹಿತ.. ಸಕ್ಕರೆಯಂತೆ ಸಿಹಿ ಮಾತಾಡುವವನು ನಯವಂಚಕ !ಅದಕ್ಕೆ ಉಪ್ಪಿನಲ್ಲಿ ಹುಳು ಬಿದ್ದ ಇತಿಹಾಸವೇ ಇಲ್ಲ, ಇತಿಹಾಸದಲ್ಲಿ ಹುಳು ಬೀಳದ ಸಿಹಿ ಇಲ್ಲವೇ ಇಲ್ಲ!
ಕಾಣದ ದೇವರಿಗೆ ಹಾಲು ಖರ್ಜೂರಗಳ ನೈವೇದ್ಯ , ಹಸಿದ ಬಡವನಿಗೆ ಒಣರೊಟ್ಟಿ ,ಹಲಸಿದ ಅನ್ನ! ಇದು ಎಂತಹ ವಿಧಿ ?!

ಈ ಜೀವನವು ಅಷ್ಟೊಂದು ಒಳ್ಳೆಯದೇನಲ್ಲ! ಒಳ್ಳೆಯದಾಗಿದ್ದರೆ ಈ ಮನುಷ್ಯ ಅಳುತ್ತಾ ಈ ಜೀವನಕ್ಕೆ ಬರುತ್ತಿರಲಿಲ್ಲ! ಮತ್ತು ಹೋಗುವಾಗ ಎಲ್ಲರನ್ನೂ ಅಳಿಸುತ್ತಾ ಹೋಗುತ್ತಿರಲಿಲ್ಲ !

ಬಾ ಎಂದರೆ ಸನ್ಮಾರ್ಗದಲ್ಲಿ ಯಾರೂ ಬರುವುದಿಲ್ಲ ಯಾರೂ ಕರೆಯದಿದ್ದರೂ ಕೆಟ್ಟ ಮಾರ್ಗದಲ್ಲಿ ಎಲ್ಲರೂ ಬರುತ್ತಾರೆ!
ಅದಕ್ಕೆ ಮದ್ಯಪಾನ ಮಾರುವವನ ಹತ್ತಿರಕ್ಕೆ ಎಲ್ಲರೂ ಹೋಗುತ್ತಾರೆ! ಆದರೆ ಹಾಲು ಮಾರುವವನು ಅವನೇ ಎಲ್ಲ ಬೀದಿ ಬೀದಿಗೆ ಹೋಗಿ, ಎಲ್ಲರ ಮನೆ ಬಾಗಿಲ ಹತ್ತಿರ ಬರುತ್ತಾನೆ!
ಹಾಲು ಮಾರುವವನಿಗೆ ಕೇಳುತ್ತಾರೆ ಹಾಲಿಗೆ ನೀರು ಬೆಳೆಸಿದ್ದೀರಾ ಎಂದು? ಆದರೆ ದುಪ್ಪಟ್ಟು ಹಣ ಕೊಟ್ಟು ಕೊಂಡ ಮದ್ಯಪಾನಕ್ಕೆ ತಾವೇ ನೀರು ಬೆರೆಸಿ ಕುಡಿಯುತ್ತಾರೆ ! ಇದೆಂತಹ ದುನಿಯಾ ಅಲ್ವಾ !??

ಮದುವೆ ಸಮಾರಂಭದಲ್ಲಿ ಮಧು ಮಗ ಮುಂದೆ, ದುನಿಯಾ ಹಿಂದೆ..
ಆದರೆ ಶವಯಾತ್ರೆಯಲ್ಲಿ ಹೆಣ ಮುಂದೆ ,ದುನಿಯಾ ಪೂರ ಹಿಂದೆ ಹಿಂದೆ !

ಹೆಣ ಮುಟ್ಟಿದ್ದರೆ ಸ್ನಾನ ಮಾಡ್ತಾರೆ. ಆದರೆ ಮೂಕ ಪ್ರಾಣಿಯನ್ನು ಕೊಂದು ತಾವೇ ತಿಂತಾರೆ ..
ಮೇಣದ ಬತ್ತಿ ಹಚ್ಚಿ ಸತ್ತವರನ್ನು ನೆನೆಯುತ್ತಾರೆ ಅದೇ ಮೇಣದ ಬಿತ್ತಿಯನ್ನು ಹಾರಿಸಿ ಜನ್ಮ ದಿನ ನೆನೆಯುತ್ತಾರೆ ಇದು ಎಂಥಹ ಪದ್ದತಿ!!

ಯಾವುದು ನಿನ್ನ ಭಾಗದಲ್ಲಿಲ್ಲ ಅದು ನಿನಗೆ ದೊರತೆ ದೊರೆಯುತ್ತದೆ ! ಯಾವುದು ನಿನ್ನ ಭಾಗ್ಯದಲ್ಲಿ ಇಲ್ಲವೋ ಅದು ದೊರೆತರೂ ಹೊರಟು ಹೋಗುತ್ತದೆ ಇದುವೇ ಸತ್ಯ !

ಊಟದ ಬೆಲೆ ಬಡವನಿಗೆ ಗೊತ್ತು,
ಶ್ರಮದ ಬೆಲೆ ರೈತನಿಗೆ ಗೊತ್ತು !

ಹುಟ್ಟಿದಾಗ ಜಾತಕ, ಮಧ್ಯದಲ್ಲಿ
ನಾಟಕ ,ಸತ್ತಾಗ ಸೂತಕ ಆದರೂ ನಿಲ್ಲಲ್ಲ ಈ ಜನರ ಮಾತಿನ ಕೌತುಕ !

ಅನ್ನವೇ ಸಕಲ ಜೀವಿಗೂ ದೇವರಿಂದ ಬಸವಣ್ಣ ಇದು ತಿಳಿಯದೆ ಮೂಕರಾದರೂ ಎಷ್ಟೋ ಜನ!
ಬರೀ ಕಣ್ಣಿಂದ ನೋಡಿದರೆ ಎಷ್ಟು ದೋಷ ಕಾಣುತ್ತದೆ .. ಒಂದು ಸಲ ಹೃದಯದಿಂದ ನೋಡಿ ಇಡೀ ಜಗತ್ತೇ ಸುಂದರವಾಗಿ ಕಾಣುತ್ತದೆ !

LEAVE A REPLY

Please enter your comment!
Please enter your name here