ಬಾಳಿಗೊಂದು ಬಂಗಾರದ ಮಾತು!

0
223

ಬದುಕು ಮನೆಯ ಕಿಟಕಿಯಂತೆ,ತೆರೆದರೆ ಬೆಳಕು! ಇಲ್ಲದಿದ್ದರೆ ಕತ್ತಲು! ಹಾಗೆಯೆ ಶ್ರಮ ಪಟ್ಟರೆ ಸುಖ,ಇಲ್ಲದಿದ್ದರೆ ದುಃಖ! ಎಲ್ಲವು ನಮ್ಮ ಕೈಯಲ್ಲಿಯೆ ಇದೆ..
ಈ ಜಗತ್ತಲ್ಲಿ ದುಡಿದು ಸತ್ತವರಿಗಿಂತ,ಚಿಂತೆ ಮಾಡಿ ಸತ್ತವರೆ ಹೆಚ್ಚು! ಚಿತೆ ದೇಹವನ್ನು ಸುಟ್ಟರೆ,ಚಿಂತೆ ಮನಸ್ಸನ್ನ ಸುಡುತ್ತದೆ! ಅತಿಯಾಗಿ ಯಾವುದಕ್ಕು ಚಿಂತಿಸದಿರಿ..
ಮನುಷ್ಯನ ಜೀವನದಲ್ಲಿ ಎರಡು ಪ್ರಮುಕ ಘಟ್ಟಗಳು,ಯೋಗ ಮತ್ತು ಯೋಗ್ಯತೆ.. ಹಲವರಿಗೆ ಎಲ್ಲ ಅನುಭವಿಸುವ ಯೋಗ ಇರುತ್ತದೆ ಆದರೆ ಯೋಗ್ಯತೆ ಇರುವುದಲ್ಲ!
ಇನ್ನು ಕೆಲವರಿಗೆ ಯೋಗ್ಯತೆ ಇದ್ದರು,ಅನುಭವಿಸುವ ಯೋಗ ಇರುವುದಲ್ಲ! ಇದೆ ಜೀವನ.. ಸೌಂದರ್ಯಕ್ಕೆ ಬೇಗ ಮರುಳಾಗಿ ಬಿಡುತ್ತೆವೆ, ಆದರೆ ಬಾಳಬೇಕಿರುವುದು ವ್ಯಕ್ತಿತ್ವದ ಜೊತೆ,ಎಂಬುವ ವಾಸ್ತವ ಗೊತ್ತಿರುವುದಲ್ಲ..! ಮನೆಯ ಬಾಗಿಲು ಎಷ್ಟೇ ಸುಂದರವಾಗಿದ್ದರು,ಬಾಗಿಲಲ್ಲೇ ಯಾರು ವಾಸಿಸುವುದಿಲ್ಲ! ನೀನ್ ಎಷ್ಟು ಶ್ರೀಮಂತ ಅಂತ ಗೊತ್ತಾಗಬೇಕೆಂದಿದ್ದರೆ ನಿನ್ನಲ್ಲಿರುವ ದುಡ್ಡನ್ನು ಎಣಿಸುತ್ತ ಕೂರಬೇಡ,ಒಂದು ಹನಿ ಕಣ್ಣೀರನ್ನು ಹಾಕಿನೋಡು,ಅದನ್ನು ಒರಿಸಲು ನಿನ್ನ ಸುತ್ತ ಎಷ್ಟು ಮಂದಿ ಸೇರಿರುತ್ತಾರೆ ಎಣಿಸಿ ನೋಡು,ಇದುವೆ ನಿನ್ನ ಜೀವನದ ನಿರ್ಣಾಯಕ ಕ್ಷಣ! ಯಾರು ಚೆನ್ನಾಗಿ ಹೊಂದುಕೊಂಡು ಹೋಗುತ್ತಾರೊ ಅವರೆ ದೀರ್ಘಕಾಲ ಬಾಳುವರು! ಕೇಳಿ ಕೊಡುವ ನೂರಾರು ಬಹುಮಾನಗಳಿಗಿಂತ,ಕೇಳದೆ ಕೊಡುವಂತ ಗೌರವ ಬಹಳ ದೊಡ್ಡದು! ನನ್ನವರು ಅಂತ ನನಗೆ ಯಾರು ಇಲ್ಲ ಅನ್ನುವ ಭಾವನೆ ಮನದಲಿ ಬಂದಾಗ,ನನಗೆ ನಾನೆ ಎಲ್ಲ ಎಂಬುವ ಆತ್ಮಸಾಕ್ಷಿ ಪ್ರಬಲವಾಗಬೇಕೆ ಹೊರೆತು,ನನಗೆ ಯಾರು ಇಲ್ಲ ಎನ್ನುವ ಚಿಂತೆ ನಮ್ಮನ್ನು ಕಾಡಬಾರಾದು. ನಮಗೆ ನಾವೆ ಎಲ್ಲಾ!! ನೀರು ತಾನು ಹರಿಯುವಾಗ ಎದುರಿಗೆ ಬರುವ ಕಸ,ಕಡ್ಡಿ,ಮುಳ್ಳುಗಳನ್ನ ಹೊತ್ತುಕೊಂಡೆ ಹರಿದು ತನ್ನ ಗುರಿಯನ್ನು ತಲುಪುತ್ತದೆ..ನಾವು ಅಷ್ಟೆ ಜೀವನದಲ್ಲಿ ಎದುರಾಗುವ ಅವಮಾನ, ತಿರಸ್ಕಾರ,ಕೊಂಕು ನುಡಿಗಳನ್ನ ಎದುರಿಸುತ್ತಾ ಸಾದನೆಯ ಶಿಖರ ಮುಟ್ಟಬೇಕು!
ನಿಮ್ಮ ಸಂತೋಷವನ್ನು ಎಲ್ಲರ ಹತ್ತಿರ ಹಂಚಿಕೊಳ್ಳಿ ಆದರೆ ನಿಮ್ಮ ನೋವನ್ನ ಕೆಲವರ ಮಾತ್ರ ಹಂಚಿಕೊಳ್ಳಿ.. ಯಾಕೆಂದರೆ ಗಾಯ ವಾಸಿ ಮಾಡುವ ಔಷದಿ ಎಲ್ಲರ ಮನೆಯಲ್ಲಿಯು ಇರುವಿದಲ್ಲ, ಆದರೆ ಉಪ್ಪು ಎಲ್ಲರ ಮನೆಯಲ್ಲಿಯು ದೊರೆಯುತ್ತದೆ! ಗಾಯಕ್ಕೆ ಔಷದೆ ಹಾಕುವವರಿಗಿಂತ ಉಪ್ಪು ಹಾಕುವವರೆ ಹೆಚ್ಚು.. ನಿಮ್ಮ ನೋವನ್ನ ಅರ್ಥಮಾಡಿಕೊಳ್ಳುವವರಿಗಿಂತ ನೋವಿ ನೀಡುವವರೆ ಹೆಚ್ಚು..
ಕಳೆದು ಕೊಂಡದ್ದು ನಮ್ಮದ್ದಲ್ಲ,ಕಳೆದಯ ಹೊದದ್ದು ನಮ್ಮದ್ದಲ್ಲ,ಬಿಟ್ಟುಕೊಟ್ಟಿದ್ದು ನಮ್ಮದ್ದಲ್ಲ,ಬಿಟ್ಟು ಹೊದದ್ದು ನಮ್ಮದ್ದಲ್ಲ.. ನಮ್ಮದು ಎಂದು ನಮ್ಮಲಿ ಇರುವುದು ಒಂದೆ,ಅದೆ ಈ ಕ್ಷಣ,ಈ ದಿನ.. ಅದನ್ನ ಬಹಳ ಅದ್ಬುತವಾಗಿ ಕಳೆಯೋಣ.. ಸುಕ ಯಾವಗಲು ಸಾಸಿವೆ ಅಷ್ಟೇ ಸಿಗುವುದು,ದುಃಖ ಮಾತ್ರ ಸಾಗರದಷ್ಟು.. ಜೀವನವಡ ಹಾಗೆ ಕತ್ತಲು ದೊಡ್ಡದು,ಅದನ್ನು ಓಡಿಸುವ ದೀಪ ಚಿಕ್ಕದಲ್ವೇ? ಸಮಯ ಬದಲಾದಂತೆ ಬದಲಾಗುವವರನ್ನ ಮರೆತುಬಿಡಿ.. ಆದರೆ ಸಮಯ ಬದಲಾದರು ನಮ್ಮ ಮೇಲೆ ಪ್ರೀತಿ ವiತ್ತು ವಿಶ್ವಾಸ ಇಟ್ಟವರನ್ನ ನೆನಪಿನಲ್ಲಿಡ್ಡಿ.. ಹಿಂದಿನ ಕಾಲದಲ್ಲಿ ಮನುಷ್ಯನ ಮನಸ್ಸು ಬಂಗಾರದಂತಿತ್ತು,ಗುಡಿಯ ಮೂರ್ತಿಗಳು ಕಲ್ಲಾಗಿದ್ದವು.. ಆದರೆ ಈಗ ಗುಡಿಯ ಮೂರ್ತಿಗಳು ಬಂಗಾರದಂತಿವೆ.. ಮನುಷ್ಯನ ಮನಸ್ಸು ಕಲ್ಲಾಗಿದೆ………!

LEAVE A REPLY

Please enter your comment!
Please enter your name here