ಬೆಂಗಳೂರಿನಲ್ಲಿ ಶುರುವಾಗಿದೆ ನಕಲಿ ಡೆಂಟಿಸ್ಟ್ ಗಳ ದಂಡು.!

0
160

ಮಾಯಾನಗರಿ, ಸಿಲಿಕಾನ್ ಸಿಟಿ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ಬೆಂಗಳೂರು ನಗರ ಸದಾ ಯಾವಾಗಲೂ ಜನಜಂಗುಳಿಯಿಂದ ಕೂಡಿರುವ ನಗರವಾಗಿದೆ. ಪ್ರತಿ ಬಾರಿ ಬೆಂಗಳೂರಿನಲ್ಲಿ ಏನಾದರೂ ಒಂದು ರೀತಿಯ ಗೊಲ್ಮಾಲ್ ನಡೆಯುತ್ತಲೇ ಇರುತ್ತದೆ. ಅದೇ ರೀತಿ ಮತ್ತೊಂದು ನಕಲಿ ವೈದ್ಯರ ಪ್ರಕರಣವೊಂದು ಈಗ ಹೊರಬಿದ್ದಿದೆ. ಹೌದು, ರಾಜಧಾನಿ ಬೆಂಗಳೂರಿನಲ್ಲಿ ಬೀದಿ ಬದಿಯೇ ನಕಲಿ ದಂತ ವೈದ್ಯರು ಕುಳಿತು ಕೇವಲ ನಿಮಿಷದಲ್ಲಿ ಹಲ್ಲು ಜೋಡಣೆ ಮಾಡಿಕೊಡುತ್ತೇವೆ ಎಂದು ಜನರಿಗೆ ಹೇಳಿ ಯಾಮಾರಿಸುತ್ತಿದ್ದಾರೆ.

 

 

ಹಲ್ಲು ನೋವು, ಹಲ್ಲು ಸಮಸ್ಯೆಯಿಂದ ಬಳಲುತ್ತಿರುವ ಅನೇಕ ಜನಸಾಮಾನ್ಯರೇ ಇವರ ಟಾರ್ಗೆಟ್.! ಮಾತಲ್ಲಿ ಮೋಡಿ ಮಾಡುವ ಮೂಲಕ ತಮ್ಮತ್ತ ಸೆಳೆಯುವ ನಕಲಿ ದಂತ ವೈದ್ಯರು, ಬೆಂಗಳೂರಿನ ಮುಖ್ಯ ಭಾಗಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಡಿಮೆ ಹಣಕ್ಕೆ ಹಲ್ಲು ಜೋಡಿಸಿ ಕೊಡುತ್ತೇವೆ ಎಂದು ಹೇಳಿ ಜನರಿಗೆ ಮೋಸ ಮಾಡುತ್ತಿದ್ದು, ಅವರ ಪ್ರಾಣಕ್ಕೆ ಕುತ್ತು ತರುವಂಥ ಕೆಲಸ ಮಾಡುತ್ತಿದ್ದಾರೆ.

 

 

ಯಾವುದೇ ಇಲಾಖೆಯ ಅನುಮತಿ ಪಡೆಯದ ನಕಲಿ ಡಾಕ್ಟರ್ಸ್.! ಪಾದಚಾರಿಗಳ ಓಡಾಡುವ ಜಾಗದಲ್ಲಿ ಕುಳಿತು ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಪ್ರಮುಖವಾಗಿ ಬೆಂಗಳೂರಿನ ಕೆ.ಆರ್ ಮಾರ್ಕೆಟ್ ನಲ್ಲಿ ಈ ನಕಲಿ ದಂತ ವೈದ್ಯರು ತಮ್ಮ ಡೆಂಟಲ್ ಕ್ಲಿನಿಕ್ಗಳನ್ನು ನಡೆಸುತ್ತಿದ್ದಾರೆ. ಇದನ್ನು ಮೋಸದ ವ್ಯವಹಾರವಾಗಿ ರೂಪಿಸಿಕೊಂಡಿರುವ ಇವರು ಫುಟ್ ಪಾತ್ ಗಳಲ್ಲಿ ಕೂಡ ಇದನ್ನು ವ್ಯಾಪಾರವಾಗಿ ನಡೆಸುತ್ತಿದ್ದಾರೆ. ಜನರನ್ನು ಆಕರ್ಷಿಸಿ ಅವರನ್ನು ಮೋಡಿ ಮಾಡುವ ಇವರು, ಫುಟ್ ಪಾತ್ ಮಾತ್ರವಲ್ಲದೆ ಮನೆಗೂ ಬಂದು ಚಿಕಿತ್ಸೆಯನ್ನು ನೀಡಲಿದ್ದಾರಂತೆ.

 

 

ನಾಲ್ಕೈದು ಜನ ಇದ್ದರೆ ಹೋಂ ಡೆಲಿವರಿ ಕೂಡ ಮಾಡ್ತಾರಂತೆ. ಈ ಕೆಲಸ ಮಾಡುತ್ತಿರುವ ನಕಲಿ ವೈದ್ಯರು, ವೃತ್ತಿ ಬದ್ಧವಾಗಿ ಮೆಡಿಕಲ್ ಶಿಕ್ಷಣವನ್ನು ಪಡೆದುಕೊಂಡಿಲ್ಲ, ಯಾವ ಕೌನ್ಸಿಲ್ ಬಳಿಯೂ ಕೂಡ ಅನುಮತಿ ಪಡೆಯದೆ ಇವರು ಧೈರ್ಯದಿಂದ ಈ ಒಂದು ಅಕ್ರಮ ಬಿಸಿನೆಸ್ ಮಾಡುತ್ತಿದ್ದಾರೆ. ಕೆ.ಆರ್ ಮಾರ್ಕೆಟ್ ನ ಸುತ್ತಮುತ್ತ ಈ ಒಂದು ದಂಧೆ ನಡೆಯುತ್ತಿದ್ದು, ಅನೇಕ ಉತ್ತಮ ನುರಿತ ದಂತ ವೈದ್ಯರು ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದರ ಜೊತೆಗೆ ಜನರ ಆರೋಗ್ಯದ ಬಗ್ಗೆ ಕೂಡ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ ಜೊತೆಗೆ ಇಂಥವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

– Mohan Shetty

LEAVE A REPLY

Please enter your comment!
Please enter your name here