ಕುಡಿದ ಮತ್ತಿನಲ್ಲಿ ತನಗೆ ಕಚ್ಚಿದ ಹಾವನ್ನು ಕೊಂದ ಘಟನೆ ಉತ್ತರ ಪ್ರದೇಶದ ಇಟಾದಲ್ಲಿ ಈ ವಿಲಕ್ಷಣ ವಿಚಿತ್ರ ಸಂಗತಿ ವರದಿಯಾಗಿದೆ.
ರಾಜಕುಮಾರ್ ಎಂಬವರು ಮದ್ಯ ಸೇವಿಸಿ ಅಮಲಿನಲ್ಲಿದ್ದರು ಈ ವೇಳೆ ಹಾವು ಒಂದು ಕಚ್ಚಿದೆ.
ಇದಕ್ಕೆ ಔಷಧವನ್ನು ತೆಗೆದುಕೊಳ್ಳುವ ಬದಲು ಹಾವನ್ನು ಹಿಡಿದು ಬಾಯಲ್ಲಿ ಕಚ್ಚಿ 3 ತುಂಡುಗಳನ್ನಾಗಿ ಮಾಡಿದ್ದಾನೆ. ರಾಜಕುಮಾರ್ ಸ್ಥಿತಿ ಗಂಭೀರವಾಗಿದ್ದು ಈ ಬಗೆಗೆ ಈತನ ತಂದೆ ಈ ಘಟನೆಯೂ ಮದ್ಯದ ಅಮಲಿನಲ್ಲಿ ನಡೆದಿದೆ ಆದರೆ ತನ್ನ ಮಗನಿಗೆ ಚಿಕಿತ್ಸೆ ಕೊಡಿಸಲು ಬೇಕಾಗುವಷ್ಟು ಹಣ ತಮ್ಮ ಬಳಿ ಇಲ್ಲ ಎಂದು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಹಾವನ್ನು ಕುಟುಂಬದವರೇ ಅಂತ್ಯಸಂಸ್ಕಾರ ಮಾಡಿದ್ದಾರೆ. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರಂತೆ ಮತ್ತು ತಂದ ಗಂಡಾಂತರ ಮನೆಮಂದಿ ಎಲ್ಲರನ್ನೂ ಚಿಂತಿಸುವಂತೆ ಮಾಡಿದೆ
ಕುಡಿದ ಮತ್ತಿನಲ್ಲಿ ಆಗುವ ಅವಾಂತರಗಳು ಭಾರತದಲ್ಲಿ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗಿಲ್ಲ.