ಕಾಮುಕರ ಅಟ್ಟಹಾಸ ಅತ್ಯಾಚಾರವೆಸಗಿ ಮಗುವನ್ನು ಕೊಂದರು .

0
145

ಜಾರ್ಖಂಡ್ ನ ಜೇಮ್ ಷೆಡ್ ಪುರದಲ್ಲಿ ಕುಕೃತ್ಯ ಒಂದು ನಡೆದಿದೆ ಟಾಟಾ ನಗರ ರೈಲ್ವೆ ನಿಲ್ದಾಣದ ಫ್ಲಾಟ್ ಫಾರ್ಮ್ ಬಳಿ ತಾಯಿಯೊಂದಿಗೆ ಮಲಗಿದ್ದ ಮೂರು ವರ್ಷದ ಬಾಲಕಿಯನ್ನು ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣ ದಾಖಲಾಗಿದೆ. ಕಾಮುಕರು ಅಟ್ಟಹಾಸ ಮೆರೆದಿದ್ದಾರೆ , ಅತ್ಯಾಚಾರ ಮಾಡಿ ಮಗುವಿನ ತಲೆ ಕತ್ತರಿಸಿ ದೇಹ ಮತ್ತು ತಲೆಯನ್ನು ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿ ಬಿಸಾಡಿ ಹೋಗಿದ್ದಾರೆ.

ತಾಯಿ ಮಗಳು ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ ತನಿಖೆಯ ಬಳಿಕ ಸುಮಾರು 5 ಕಿಲೋ ಮೀಟರ್ ದೂರದಲ್ಲಿ ಮಗುವಿನ ದೇಹದಲ್ಲಿ ಪತ್ತೆಯಾಗಿದೆ. ತನ್ನ ಮಗಳ ದೇಹವೆಂದು ತಾಯಿ ಗುರುತಿಸಿದ್ದಾರೆ.
ಪೊಲೀಸರ ಮಾಹಿತಿ ಅಂತ ಮಗುವಿನ ತಾಯಿ ಪಶ್ಚಿಮ ಬಂಗಾಳದವರು ಗಂಡಸಿನೊಂದಿಗೆ ಬಂದಿದ್ದರೆಂದು ತಿಳಿದುಬಂದಿದೆ , ಈ ಕೃತ್ಯವು ಆತನಿಂದಲೇ ಸಂಭವಿಸಿರಬಹುದು ಎಂದು ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ . ರೈಲ್ವೆ ನಿಲ್ದಾಣದ ಸಿಸಿಟಿವಿಯಲ್ಲಿ ವಿಡಿಯೋ ರೆಕಾರ್ಡ್ ಆಗಿದ್ದು, ಇಬ್ಬರು ದುಷ್ಕರ್ಮಿಗಳು ಬಾಲಕಿಯನ್ನು ಅಪಹರಿಸಿರುವುದು ಸ್ಪಷ್ಟವಾಗಿದೆ , ಎಂದು ಪೊಲೀಸರಿಂದ ತಿಳಿದುಬಂದಿದೆ.
ಅಪರಾಧಿಗಳು ಬಾಲಕಿಯ ಮೇಲಿನ ಅತ್ಯಾಚಾರದ ಕುರಿತು ತಪ್ಪೊಪ್ಪಿಗೆ ನೀಡಿದ್ದಾರೆ. ಈ ವಿಷಯ ಎಲ್ಲರಿಗೂ ತಿಳಿಯುತ್ತದೆ ಎಂದು ಬಾಲಕಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ. ತಾಯಿಯ ಒಡಲು ಮಗುವಿಗೆ ಪಾಷಾಣವಾದದ್ದು ಸಮಾಜ ತಲೆತಗ್ಗಿಸುವ ವಿಷಯವಾಗಿದೆ , ಕ್ರೂರಿ ಗಳಿಂದ ಏನೂ ತಿಳಿಯದ ಮಗು ನೊಂದು ಕೊಲೆಯಾದದ್ದು ಮನ ಕರಗುವ ಸಂಗತಿಯಾಗಿದೆ.
ಪ್ರತಿಯೊಬ್ಬರೂ ತಮ್ಮ ಇತಿಮಿತಿಯನ್ನು ಅರಿತು ಬಾಳಿದರೆ ಸಮಾಜಕ್ಕೆ ಈ ರೀತಿಯ ಕಂಟಕ ವಾಗುವುದನ್ನು ತಡೆಯಬಹುದಾಗಿದೆ.

LEAVE A REPLY

Please enter your comment!
Please enter your name here