ಸಿಲ್ಸಿಲಾ ಬದಲ್ತಾ ರಿಷ್ತಾ ಖ್ಯಾತಿಯ ನಟಿ ಅದಿತಿ ದೇವ್ ಶರ್ಮಾ ಅಭಿಮಾನಿಗಳಿಗೆ ಖುಷಿ ಸುದ್ದಿ. ಅದಿತಿ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ನಟಿ ಗಂಡು ಮಗುವಿಗೆ ತಾಯಿಯಾಗಿದ್ದಾಳೆ. ಅದಿತಿ 9 ತಿಂಗಳ ಕಾಲ ಗರ್ಭಿಣಿ ಎಂಬ ವಿಷ್ಯವನ್ನು ಮುಚ್ಚಿಟ್ಟಿದ್ದಳು.
ಅದಿತಿ ಗರ್ಭಿಣಿ ಎಂಬ ವಿಷ್ಯ ಅಲ್ಲಲ್ಲಿ ಹರಿದಾಡ್ತಿತ್ತು. ಆದ್ರೆ ನಟಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬೇಬಿ ಬಂಪ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರಲಿಲ್ಲ. ವರದಿ ಪ್ರಕಾರ ಅದಿತಿ ನವೆಂಬರ್ 16ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಅದಿತಿ ಹಾಗೂ ಆಕೆ ಪತಿ ಸರ್ವಾರ್ ಮಗುವಿಗೆ ಸರ್ತಾಜ್ ಎಂದು ನಾಮಕರಣ ಮಾಡಿದ್ದಾರೆ.
ಮಗುವನ್ನು ಕೃಷ್ಣನಿಗೆ ಹೋಲಿಕೆ ಮಾಡ್ತೇನೆ. ಶಾಂತ ಸ್ವಭಾವದ ಮಗನ ನಗು ಎಲ್ಲವನ್ನೂ ಮರೆಸುತ್ತದೆ ಎಂದು ನಟಿ ಹೇಳಿದ್ದಾಳೆ.ನವೆಂಬರ್ ನಲ್ಲಿಯೇ ಅದಿತಿ ಮದುವೆ ವಾರ್ಷಿಕೋತ್ಸವ ನಡೆದಿದೆ. ಇದೇ ತಿಂಗಳಲ್ಲಿ ಮನೆಗೆ ಮಗು ಬಂದಿರುವುದು ಖುಷಿ ಸಂಗತಿ ಎಂದು ನಟಿ ಹೇಳಿದ್ದಾಳೆ.