ಹಸಿದವರಿಗೆ ಅನ್ನ ಪೂರ್ಣೇಶ್ವರಿಯಾದ 80 ವರ್ಷದ ಅಜ್ಜಿ

0
181

ತಮಿಳುನಾಡಿನ ಕೊಯಮತ್ತೂರಿನ ಪುಟ್ಟ ಹಳ್ಳಿಯೊಂದರ ಎಂಬತ್ತು ವರ್ಷದ ಅಜ್ಜಿ ಇಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ . ಕೆ ಕಮಲಥಾಲ್ ಎಂಬ ಹೆಸರಿನ ಅಜ್ಜಿ ಕಳೆದ ೩೦-35 ವರ್ಷಗಳಿಂದ ಒಂದು ರೂಪಾಯಿಗೆ ಇಡ್ಲಿ ನೀಡುವ ಮೂಲಕ ಹಸಿದವರ ಹೊಟ್ಟೆಯನ್ನು ತುಂಬಿದ್ದಾರೆ .ಬೆಳಗ್ಗೆ ಸೂರ್ಯ ಉದಯಿಸುವ ಮುಂಚೆ ಎದ್ದೇಳಿ ಏಕಾಂಗಿಯಾಗಿ ಸಾವಿರಕ್ಕೂ ಹೆಚ್ಚು ಇಡ್ಲಿಯನ್ನು ತಯಾರಿಸುತ್ತಾರೆ .ಮುಂಜಾನೆ ಕೆಲಸಕ್ಕೆ ಹೋಗುವ ಬಡವರು ದಿನಗೂಲಿ ಕೆಲಸಗಾರರು ಈ ಅಜ್ಜಿ ಸಿದ್ಧಪಡಿಸಿದ ಇಡ್ಲಿಯನ್ನು ತಿಂದು ತಮ್ಮ ದೈನಂದಿನ ಚಟುವಟಿಕೆಗೆ ತೆರಳುತ್ತಾರೆ.

ದಿನವೊಂದಕ್ಕೆ ಕಟ್ಟಿಗೆಯ ಒಲೆಯಲ್ಲಿ ಸಾವಿರಕ್ಕೂ ಹೆಚ್ಚು ಇಡ್ಲಿ ತಯಾರಿಸಿ ಹಸಿದ ಹೊಟ್ಟೆಯನ್ನು ತುಂಬಿಸುವ ಕೆಲಸವನ್ನು ಈ ಅಜ್ಜಿ ಮಾಡುತ್ತಾರೆ. ಹಣವಿಲ್ಲದಿದ್ದವರಿಗೂ ಉಣಬಡಿಸುವ ಈ ಅಜ್ಜಿ ಕಾರ್ಯವೈಖರಿ ಬಗ್ಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿತ್ತು. ಈ ವಿಡಿಯೋವನ್ನು ಗಮನಿಸಿದ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥರಾದ ಆನಂದ್ ಮಹೀಂದ್ರಾ ಅವರು ಅಜ್ಜಿಯ ಸೇವೆಗೆ ನಾನು ಕೈಜೋಡಿಸಲು ಸಿದ್ಧನಿದ್ದೇನೆ ಮತ್ತು ಗ್ಯಾಸ್ ಸಿಲಿಂಡರ್ ವ್ಯವಸ್ಥೆ ಮಾಡುವ ಬಗ್ಗೆ ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಅದೇ ರೀತಿ ಅಜ್ಜಿ ಸಮಸ್ಯೆಗೆ ಕೇಂದ್ರ ಸರ್ಕಾರ ಕೂಡ ಸ್ಪಂದಿಸಿದ್ದು ಸಚಿವ ಧರ್ಮೇಂದ್ರ ಅವರು ಅಜ್ಜಿಗೆ ಎಲ್ಪಿಜಿ ಸಂಪರ್ಕ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ .ಅದೇ ರೀತಿ ಇಂಡಿಯನ್ ಗ್ಯಾಸ್ ಸಂಸ್ಥೆಯ ಅಧಿಕಾರಿಗಳು ಅಜ್ಜಿಗೆ ಗ್ಯಾಸ್ ಸಂಪರ್ಕವನ್ನು ಒದಗಿಸಿದ್ದು ಅಜ್ಜಿಯ ಸಾಮಾಜಿಕ ಕಾರ್ಯ ವೈಖರಿಗೆ ಹಲವೆಡೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

LEAVE A REPLY

Please enter your comment!
Please enter your name here