ಮಕ್ಕಳ ಮನಸ್ಸು ಗಾಳಿ ಬೆಳಕಿನಂತೆ ಪರಿಶುದ್ಧ, ಅವರ ಮನಸ್ಸಿನಲ್ಲಿ ಕಲ್ಮಶ ಇರುವುದಿಲ್ಲ. ಅವರ ಪೂರ್ಣ ಬೆಳವಣಿಗೆ ಅವರ ಸುತ್ತಮುತ್ತಲಿನ ಪರಿಸರದ ಮೇಲೆ ಅವಲಂಬಿತವಾಗಿರುತ್ತದೆ. ಮಗುವಿನ ಮನಸ್ಸು ಮುಗ್ಧತೆಯ ಆಗರ, ಒಂದು ಹಂತದವರೆಗೂ ಅದೇ ಮಗುವಿನ ಆಕರ್ಷಣೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕ
ವಯಸ್ಸಿನಲ್ಲಿ ಅವರ ಸುತ್ತಮುತ್ತಲಿನ ಪರಿಸರ ಹೇಗಿರುತ್ತದೋ, ಅದರ ಪರಿಣಾಮದಿಂದ ಅವರ ಉಜ್ವಲ ಭವಿಷ್ಯ ನಿರ್ಧಾರವಾಗುತ್ತದೆ.
ಮಕ್ಕಳ ಮನಸ್ಥಿತಿ ಹೇಗಿರುತ್ತೆ ಎಂದರೆ ಅವರು ಯಾರನ್ನು ದ್ವೇಶಿಸುವುದಿಲ್ಲ, ಸದಾ ಸಂತೋಷದಿಂದ ಇರಲು ಪ್ರಯತ್ನಿಸುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಶಿಖರದೆತ್ತರದ ಸಾಧನೆಗಳನ್ನು ಮಾಡಿರುವ ಮಕ್ಕಳುಗಳ ಉದಾಹರಣೆಗಳು ನಮ್ಮ ಕಣ್ಮುಂದೆಯೆ ಇದೆ. ಅವರು ಬೆಳೆಯುವ ವಾತವರಣದಿಂದ ಇಷ್ಟು ದೊಡ್ಡ ಸಾಧನೆಗಳನ್ನು ಮಾಡಲು ಮಾತ್ರ ಸಾಧ್ಯ ಅನಿಸುತ್ತದೆ. ಅದರಲ್ಲೂ ಭಾರತೀಯ ಮಕ್ಕಳಲಂತು ಭಾವನಾತ್ಮಕ ಎಂಬುದು ಹುಟ್ಟುತ್ತಲೇ ಬಂದು ಬಿಟ್ಟಿರುತ್ತದೆ. ಅಂತೆಯೇ ಭಾರತ ದೇಶ ಮಾನವೀಯತೆಯ ಬುನಾದಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹೀಗೆ ಸಾಬೀತಾಗಿರುವುದು ಆರು ವರ್ಷದ ಮಕ್ಕಳಿಂದ ಎಂಬುದು ವಿಶೇಷ !
ಹೌದು, ಭಾರತೀಯದ ಬಾಲಕನೊಬ್ಬ, ಭಾರತೀಯ ಹೃದಯಗಳು ಕಷ್ಟಕ್ಕೆ ಮಿಡಿಯುತ್ತವೇ ಎಂಬುದನ್ನು ತನ್ನ ಕೆಲಸದ ಮೂಲಕ ಇಡೀ ವಿಶ್ವಕ್ಕೆ ತೋರಿಸಿದ್ದಾನೆ. ಮಿಜೋರಾಮ್ ರಾಜ್ಯದ ಒಂದು ನಗರದಲ್ಲಿ ದೀರಕ್ ಎಂಬ 6 ವರ್ಷದ ಬಾಲಕ ಎಂದಿನಂತೆ ಮನೆಯ ಮುಂದೆ ಸೈಕಲ್ ಓಡಿಸುತ್ತಾ ಆಟವಾಡುತ್ತಿದ್ದ. ಅವನ ಪಕ್ಕದ ಮನೆಯವರು ಸಾಕಷ್ಟು ಕೋಳಿಗಳನ್ನು ಸಾಕಿದ್ದರು. ಹೀಗೆ ದೀರಕ್ ಸೈಕಲ್ ಹೊಡೆಯುವಾಗ. ಪಕ್ಕದ ಮನೆ ಕೋಳಿಯ ಮರಿ ಆಕಸ್ಮಿಕವಾಗಿ ಬಾಲಕನ ಚಕ್ರಕ್ಕೆ ಸಿಕ್ಕಿತು.
ಹೀಗೆ ಸೈಕಲ್ ಚಕ್ರಕ್ಕೆ ಸಿಕ್ಕಿದ ಕೋಳಿಮರಿ, ಸ್ಥಳದಲ್ಲೇ ಸಾವನಪ್ಪಿತ್ತು. ಆದರೆ ಮಕ್ಕಳಿಗೆ ಸಾವು ಬದುಕಿನ ಬಗ್ಗೆ ಏನು ತಿಳಿದಿರುತ್ತದೆ ಹೇಳಿ. ಅಂತೆಯೇ ದೀರನ್ ಗೂ ಕೂಡ
ಏನಾಗಿದೇ ಕೋಳಿಮರಿಗೆ ಎಂಬುದು ತಿಳಿದಿರಲಿಲ್ಲ. ಆದರೆ ಪೆಟ್ಟಾಗಿದ್ದ ಕೋಳಿ ಮರಿಗೆ ಚಿಕಿತ್ಸೆ ಕೊಡಿಸಬೇಕು ಎಂಬುದು ಮಾತ್ರ ತಿಳಿದಿತ್ತು. ತಕ್ಷಣ ಆ ಕೋಳಿ ಮರಿಯನ್ನು ಕೈಯಲ್ಲಿ ಹಿಡಿದು ತನ್ನ ಮನೆಗೆ ಓಡಿ ಹೋಗುತ್ತಾನೆ.
ಹೀಗೆ ಮನೆಗೆ ಓಡಿ ಬಂದ ಬಾಲಕ ದೀರನ್ ತನ್ನ ಪೋಷಕರ ಬಳಿ, ಈ ಕೋಳಿ ನನ್ನ ಸೈಕಲ್ ಚಕ್ರಕ್ಕೆ ಸಿಕ್ಕಿ ಪೆಟ್ಟಾಗಿದೆ, ಆದುದರಿಂದ ಇದಕ್ಕೆ ಚಿಕಿತ್ಸೆ ಕೊಡಿಸಬೇಕು ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದು ಹೇಳಿ, ತನ್ನ ಅಪ್ಪ ಕೊಡುತ್ತಿದ್ದ ಹಣವನ್ನು ಹುಂಡಿಯಲ್ಲಿ ಹಾಕಿ 10 ರೂಪಾಯಿ ಜೋಡಿಸಿದ್ದ. ಆ 10 ರೂಪಾಯಿಯನ್ನು ತೆಗೆದುಕೊಂಡು, ತನ್ನ ಮನೆಯ ಪಕ್ಕದ ರಸ್ತೆಯಲ್ಲಿದ್ದ ಆಸ್ಪತ್ರೆಯ ಕಡೆಗೆ ಒಂದೇ ಉಸಿರಿನಲ್ಲಿ ಓಡಿ ಹೋಗುತ್ತಾನೆ.
ಹೀಗೆ ಆಸ್ಪತ್ರೆಗೆ ಬಂದ ಬಾಲಕ, ವೈದ್ಯರ ಬಳಿ, ಈ ಹತ್ತು ರೂಪಾಯಿಯನ್ನು ತೆಗೆದುಕೊಂಡು ಕೋಳಿಮರಿಗೆ ಚಿಕಿತ್ಸೆ ಕೊಡುವಂತೆ ಅಂಗಲಾಚಿ ಬೇಡಿ ಕೊಳ್ಳುತ್ತಾನೆ. ಒಂದು ಕೈಯಲ್ಲಿ ಕೋಳಿ ಮರಿ ಮತ್ತೊಂದು ಕೈಯಲ್ಲಿ ಕೋಳಿಯ ಮರಿಯನ್ನಿಟ್ಟುಕೊಂಡು ವೈದ್ಯರ ಬಳಿ ಇದಕ್ಕೆ ಚಿಕೆತ್ಸೆ ಕೊಡಲೇಬೇಕು ಎಂದು ರಚ್ಛೇ ಇಡಿಯಲು ಪ್ರಾರಂಭಿಸಿದ. ಈ ರೋದನೆಯನ್ನು ನೋಡಲಾರದ ವೈದ್ಯರು ಕೋಳಿ ಮರಿಯನ್ನು ಪರಿಶೀಲಿಸಿ ಇದು ಸತ್ತು ಹೋಗಿದೆ ಎಂದು ಹೇಳಿ ಬಾಲಕನಿಗೆ ಸಮಾಧಾನ ಪಡಿಸುತ್ತಾರೆ.
ಹೀಗೆ ಕೋಳಿಯ ಮರಿಯನ್ನು ಬದುಕಿಸಿ ಎಂದು ಅಂಗಲಾಚಿ ಬೇಡಿಕೋಳ್ಳುವ ಚಿತ್ರವನ್ನು ತೆಗೆದ ಆಸ್ಪತ್ರೆಯ ವೈದ್ಯರು ಸಾಮಾಜಿಕ ಜಾಲತಾಣದಲ್ಲಿ ಹರಿಯಲು ಬಿಟ್ಟಿದ್ದಾರೆ. ನಂತರ ಈ ಚಿತ್ರ ಪ್ರಪಂಚಾದ್ಯಂತ ದೊಡ್ಡ ಮಟ್ಟದ ವೈರಲ್ ಆಗಿದೆ. ಪುಟ್ಟ ಮಕ್ಕಳ ಮನಸ್ಸು ಹೇಗಿರುತ್ತದೆ ಎಂಬುದಕ್ಕೆ ಇದೊಂದು ದೊಡ್ಡ ನಿದರ್ಶನ ಅಲ್ಲವೇ..? ಇಡೀ ವಿಶ್ವವೇ ಈ ಪುಟ್ಟ ಬಾಲಕನ ಕೆಲಸಕ್ಕೆ ಶ್ಲಾಘನೇ ವ್ಯಕ್ತಪಡಿಸಿದ್ದು, ದೀರನ್ ನನ್ನು ಹೊಗಳಿ ಕೊಂಡಾಡಿದ್ದಾರೆ.