ಯಶ್ ಬರ್ತ್ ಡೇ ರೆಡಿಯಾಗುತ್ತಿದೆ ಅಭಿಮಾನಿಗಳಿಂದ ಸರ್ಪೈಸ್ ಕೇಕ್ ! ಈ ಸುದ್ದಿ ಓದಿದ್ರೇ ಅಚ್ಚರಿಯಾಗೋದು ಗ್ಯಾರಂಟಿ.!

0
136

ನಮ್ಮಂತವರ ಬರ್ತ್ ಡೇ ಅಂದ್ರೆ ಸಾಕು ಪಾರ್ಟಿ ಮಾಡುತ್ತೇವೆ. ಆದರೆ ಸ್ಟಾರ್ ಗಳ ಹುಟ್ಟು ಹಬ್ಬ ಅಂದರೇ ಕೇಳಬೇಕಾ ? ಅವರಿಗೆ ಆದ ಫ್ಯಾನ್ ಫಾಲೋಯರ್ಸ್ಗಳಿದ್ದು, ಡಿಫ್ರೆಂಟ್ ಕೇಕ್ ತಯಾರಿಸಿ ತಮ್ಮ ನೆಚ್ಚಿನ ನಟನ ಬಳಿ ಕಟ್ ಮಾಡಿಸುತ್ತಾರೆ. ಅರೇ ಇದ್ಯಾಕಪ್ಪಾ ಎಂದು ಪ್ರಶ್ನಿಸುತ್ತಿದ್ದೀರಾ ? ಕೇಕ್ ವಿಚಾರದಲ್ಲೇ ಈಗೊಂದು ಪ್ರಶ್ನೆ ಎದ್ದಿದು. ಇದು ಅಚ್ಚರಿಯ ವಿಚಾರವೂ ಹೌದು. ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಬರ್ತ್ ಡೇ ಕೇಕ್ ಮೂಲಕ ದಾಖಲೆ ಬರೆಯಲು ಮುಂದಾಗಿದ್ದಾರೆ.

 

ಚಂದನವನದಲ್ಲಿ ವಿನೂತನವಾಗಿ ‘ಕೆಜಿಎಫ್’ ನಿಂದ ವಿಶೇಷ ದಾಖಲೆ ಸೃಷ್ಟಿಸಿದ ನಟನಿಗೆ ಹೊಸ ರೀತಿಯಲ್ಲಿ ಹುಟ್ಟು ಹಬ್ಬ ಆಚರಿಸಲು ಮುಂದಾಗುತ್ತಿದ್ದಾರೆ. ಮುಂದಿನ ವಾರ ಅಂದರೇ ಜನವರಿ 8 ರಂದು ಯಶ್ ಹುಟ್ಟುಹಬ್ಬ ಇದೆ. ಆ ದಿನವನ್ನು ಅದ್ದೂರಿಯಾಗಿ ಅಭಿಮಾನಿಗಳು ಆಚರಣೆ ಮಾಡಲು ನಿರ್ಧರಿಸಿದ್ದಾರೆ. ಅದರಲ್ಲೂ ವೇಣು ಗೌಡ ಎಂಬ ಅಭಿಮಾನಿಯೊಬ್ಬರು ಈ ಅದ್ದೂರಿ ಕಾರ್ಯಕ್ರಮಕ್ಕೆ ತಕ್ಕ ಹಾಗೆ ದೊಡ್ಡ ಕೇಕ್ ಅನ್ನು ತಯಾರು ಮಾಡಿಸಲು ಸಜ್ಜಾಗುತ್ತಿದ್ದಾರೆ. ಈ ಕೇಕ್ ಬರೋಬ್ಬರಿ 5 ಸಾವಿರ ಕೆ.ಜಿ ಇದೆ ಎಂದು ಮೂಲಗಳು ತಿಳಿಸಿದೆ.

 

ಪ್ರತಿ ವರ್ಷ ಯಶ್ ತಮ್ಮ ಹುಟ್ಟುಹಬ್ಬವನ್ನು ಹೊಸಕೆರೆಹಳ್ಳಿಯಲ್ಲಿನ ತಮ್ಮ ನಿವಾಸದಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಅವರ ಬರ್ತ್ ಡೇ ಸ್ಥಳ ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ಸ್ ನಲ್ಲಿ ನಡೆಯಲಿದೆ. ಹುಟ್ಟುಹಬ್ಬಕ್ಕೆ ಬರುವ ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದು ಹಾಗಾಗಿ ಸ್ಥಳ ಬದಲು ಮಾಡಲಾಗಿದೆ ಎನ್ನಲಾಗಿದೆ.

 

ಈಗಾಗಲೇ ನಟ ಯಶ್ ಹುಟ್ಟುಹಬ್ಬಕ್ಕೆ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ ವತಿಯಿಂದ ಮುಕ್ತ ಆಹ್ವಾನ ನೀಡಲಾಗಿದೆ. ಜನವರಿ 7 ರಂದು ಮಧ್ಯರಾತ್ರಿ ಹಾಗೂ 8 ರಂದು ಸಂಜೆಯವರೆಗೂ ಕಾರ್ಯಕ್ರಮ ನಡೆಯಲಿದೆ. ಹೋದ ವರ್ಷ ಯಶ್ ತಮ್ಮ ಹುಟ್ಟುಹಬ್ಬವನ್ನು ನಟ ಅಂಬರೀಶ್ ವಿಧಿವಶರಾಗಿದ್ದ ಕಾರಣ ನಿರಾಕರಿಸಿದ್ದರು.

LEAVE A REPLY

Please enter your comment!
Please enter your name here