2000 ರೂಪಾಯಿ ನೋಟುಗಳ ಮುದ್ರಣ ಸ್ಥಗಿತ..!

0
157

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) 2000 ರೂಪಾಯಿ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.ಈ ಹಣಕಾಸು ವರ್ಷದಲ್ಲಿ (2019-20) ಇದುವರೆಗೆ ಒಂದೇ ಒಂದು 2000 ರೂಪಾಯಿ ನೋಟುಗಳನ್ನೂ ಮುದ್ರಣ ಮಾಡಿಲ್ಲ ಎಂಬುದು ಖಚಿತವಾಗಿದೆ.

ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳ ಮುದ್ರಣವನ್ನು ನಿಲ್ಲಿಸಿ, ಕಪ್ಪುಹಣವನ್ನು ನಿಯಂತ್ರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.ಕಪ್ಪುಹಣ ನಿಯಂತ್ರಣಕ್ಕಾಗಿ ಅಪನಗದೀಕರಣ ಕಪ್ಪುಹಣ ನಿಯಂತ್ರಿಸುವ ಸಲುವಾಗಿ ಸರ್ಕಾರ 1000 ಮತ್ತು 500 ಮುಖಬೆಲೆಯ ನೋಟುಗಳನ್ನು 2016 ನವೆಂಬರ್ 8 ರಂದು ಬ್ಯಾನ್ ಮಾಡಿತ್ತು. ನಂತರ 2000 ರೂ. ಮುಖಬೆಲೆಯ ನೋಟುಗಳನ್ನು ಪರಿಚಯಿಸಿತ್ತು. ಆದರೆ ಈಗ ಅದೇ ಕಪ್ಪುಹಣದ ನಿಯಂತ್ರಣಕ್ಕಾಗಿ ಸರ್ಕಾರ 2000 ಮುಖಬೆಲೆಯ ನೋಟುಗಳ ಮುದ್ರಣವನ್ನೇ ನಿಲ್ಲಿಸಿದೆ.

ಅಷ್ಟಕ್ಕೂ ತಾನೇ ಪರಿಚಯಿಸಿದ್ದ 2000 ಮುಖಬೆಲೆಯ ನೋಟುಗಳ ಮುದ್ರಣವನ್ನೇ ಸರ್ಕಾರ ಇದ್ದಕ್ಕಿದ್ದಂತೆ ನಿಲ್ಲಿಸಿರುವುದಕ್ಕೆ ಕಾರಣವೇನು? 2000 ಮುಖಬೆಲೆಯ ನೋಟುಗಳನ್ನು ಸುಲಭವಾಗಿ ಕಳ್ಳಸಾಗಣೆ ಮಾಡಬಹುದು ಎಂಬುದನ್ನು ಅರಿತ ಸರ್ಕಾರ ಈ ನಿರ್ಧಾರಕ್ಕೆ ಬರುತ್ತಿದೆ. ಅದೂ ಅಲ್ಲದೆ ಆಂಧ್ರ ಪ್ರದೇಶ ಮತ್ತು ತಮಿಳುನಾಡು ಗಡಿಯಲ್ಲಿ ಇತ್ತೀಚೆಗಷ್ಟೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 6 ಕೋಟಿ ರೂ. ಮೌಲ್ಯದ 2000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿದ್ದವು.

ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಸುಲಭವಾಗಿ ಕಳ್ಳಸಾಗಣೆ ಮಾಡುವುದಕ್ಕೆ ಸಾಧ್ಯವಾಗಿದ್ದರಿಂದ ಕಪ್ಪುಹಣ ಮತ್ತಷ್ಟು ಹೆಚ್ಚಬಹದು ಎಂಬ ಆತಂಕದಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಮಾರ್ಚ್ 2018 ರವರೆಗೆ ಅಂದರೆ ಕಳೆದ ಹಣಕಾಸಿನ ವರ್ಷದಲ್ಲಿ ಒಟ್ಟು 3363 ಮಿಲಿಯನ್ 2000 ಮುಖಬೆಲೆಯ ನೋಟುಗಳು ಮುದ್ರಣಗೊಂಡು, ಹಂಚಿಕೆಯಾಗಿದ್ದವು. ಆದರೆ 2019-20 ರ ಹಣಕಾಸು ವರ್ಷದಲ್ಲಿ 2000 ಮುಖಬೆಲೆಯ ಒಂದೇ ಒಂದು ನೋಟೂ ಮುದ್ರಣವಾಗಿಲ್ಲ.

ಅಪನಗದೀಕರಣದ ನಂತರ 2000 ಮುಖಬೆಲೆಯ ನೋಟುಗಳನ್ನು ಸರ್ಕಾರ ಪರಿಚಯಿಸಿತ್ತು. ಆದರೆ ಹೆಚ್ಚಿನ ಮುಖಬೆಲೆಯ ನೋಟುಗಳು ಎಂದಿಗೂ ಅಪಾಯಕಾರಿ ಎಂದು ಆರ್ಥಿಕ ತಜ್ಞರು ಅಂದೇ ಅಭಿಪ್ರಾಯಪಟ್ಟಿದ್ದರು. ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಪರಿಚಯಿಸುವ ಮುನ್ನ ಸರ್ಕಾರ ಆದರ ಸಾಧಕ ಮತ್ತು ಅದಕ್ಕಿಂತ ಹೆಚ್ಚಿನ ಬಾಧಕಗಳ ಬಗ್ಗೆ ಯೋಚಿಸಬೇಕಿತ್ತು. ಆದರೆ ಸರ್ಕಾರ ಈ ಬಗ್ಗೆ ದುಡುಕಿನ ನಿರ್ಧಾರ ತೆಗೆದುಕೊಂಡಿದೆ ಎಂಬ ದೂರು ಕೇಳಿಬಂದಿತ್ತು. ಇದೀಗ ಅದರ ಮುದ್ರಣವನ್ನೇ ನಿಲ್ಲಿಸಿದ್ದು, ಮುಂದೊಮ್ಮೆ ಈ ನೋಟುಗಳನ್ನೂ ಸರ್ಕಾರ ಬ್ಯಾನ್ ಮಾಡಿಬಿಡಬಹುದೇ ಎಂಬ ಆತಂಕ ಹೆಚ್ಚಾಗಿದೆ.

ಈ ಮಾಹಿತಿ ಇಷ್ಟವಾದರೆ ತಪ್ಪದೆ ಶೇರ್ ಮಾಡಿ ನಿಮ್ಮ ಎಲ್ಲಾ ಸ್ನೇಹಿತರಿಗೂ ಪೇಜ್ ಲೈಕ್ ಮಾಡಲು ತಿಳಿಸಿ. ನಾವು ನೀಡುವ ಮಾಹಿತಿಗಳು ,ಲೇಖನಗಳು ಎಲ್ಲವೂ ಕಾಪಿರೈಟ್ಸ್ ಗೆ ಒಳಪಟ್ಟಿದ್ದು ಕದಿಯುವುದು,ಕಾಪಿ ಪೇಸ್ಟ್ ಅಥವಾ ಬೇರೆ ರೀತಿಯಲ್ಲಿ ನಮ್ಮ ಅನುಮತಿ ಇಲ್ಲದೆ ಬಳಸಿದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು. ಲೈಕ್, ಶೇರ್, ಕಾಮೆಂಟ್ ಮಾಡುವ ಮೂಲಕ ಪ್ರೋತ್ಸಾಹಿಸಿ

LEAVE A REPLY

Please enter your comment!
Please enter your name here