23 ವರ್ಷದ ಯುವತಿಯನ್ನು ಮದುವೆ ಆದ 13 ವರ್ಷದ ಹುಡುಗ ..!

0
1357

13 ವರ್ಷದ ಹುಡುಗ 23 ವರ್ಷದ ಯುವತಿಯನ್ನು ಮದುವೆಯಾದ ಘಟನೆ ಕರ್ನುಲ್ ನಲ್ಲಿ ನಡೆದಿದೆ.
ಈ ಮದುವೆ ಮಾಡಿಸಿದ್ದು ಹುಡುಗನ ತಾಯಿಯಂತೆ. 13 ವರ್ಷದ ಬಾಲಕ ಬಳ್ಳಾರಿ ಜಿಲ್ಲೆ ಯವನು ,ಇವನು 23 ವಯಸ್ಸಿನ ಯುವತಿಯನ್ನು ಮದುವೆ ಆಗಿದ್ದಾನೆ.

ಹುಡುಗನ ತಾಯಿ ಕಾಯಿಲೆ ಬಿದ್ದಿದ್ದಳು. ಆದ್ದರಿಂದ ಹುಡುಗ ಮದುವೆ ಆದ, ಇದು ತಾಯಿಯ ಕೊನೆ ಆಸೆಯಂತೆ. ಏಪ್ರಿಲ್ 23 ರಂದು ಇವರ ಮದುವೆ ಆಯಿತು.ಇವರ ಮದುವೆ ಫೋಟೋಗಳು
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆಂಧ್ರ ಪ್ರದೇಶದ ಕರ್ನುಲ್ ಜಿಲ್ಲೆಯಲ್ಲಿ ಇವರಿಬ್ಬರ ಮದುವೆ ಆಗಿದೆ.

ಹುಡುಗನದು ಇದೆ ಊರು,ಯುವತಿ ಬಳ್ಳಾರಿ ಜಿಲ್ಲೆಯ ಚಿನಕನೂರಿನವಳು ಈ ಪ್ರಕರಣ ಬೆಳಕಿಗೆ ಬಂದು ಎರಡು ದಿನ ಆಯ್ತು. ಅಷ್ಟರಲ್ಲೇ ಇವರಿಬ್ಬರ ಕುಟುಂಬಸ್ಥರು ಎಸ್ಕೇಪ್ ಆಗಿದ್ದಾರೆ. ಹುಡುಗನ ತಾಯಿ ಊರಿನ ಮುಖ್ಯಸ್ಥರ ಹತ್ತಿರ ನಾನು ಕಾಯಿಲೆಯಿಂದ ಬಳಲುತ್ತಿದ್ದೇನೆ, ನಾನೇನಾದರು ಸತ್ತರೆ ನನ್ನ ಮಗನನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ಹೇಳಿದಾಗ ,ಎಲ್ಲರೂ ತೀರ್ಮಾನಿಸಿ 13 ವರ್ಷದ ಹುಡುಗನನ್ನು 23 ವರ್ಷದ ಯುವತಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಈ ಮದುವೆ ಒಂತರ ವಿಚಿತ್ರ ವಾಗಿದೆ.

LEAVE A REPLY

Please enter your comment!
Please enter your name here