ಮೈತ್ರಿ ಸರ್ಕಾರವನ್ನು ಪತನಗೊಳಿಸಿ, ಮುಖ್ಯಮಂತ್ರಿ ಗದ್ದುಗೇರಿರುವ ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ಇದೀಗ ಹೊಸ ಸಂಕಷ್ಟ ಎದುರಾಗಿದೆ. ಕಾಂಗ್ರೆಸ್-ಜೆಡಿಎಸ್ನಲ್ಲಿನ ಅತೃಪ್ತ ಶಾಸಕರನ್ನು ಮಂತ್ರಿಸ್ಥಾನ ನೀಡುವ ಆಮೀಷಯೊಡ್ಡಿ ಹೊಸ ಸರ್ಕಾರ ರಚಿಸಿರುವ ಬಿಎಸ್ವೈಗೆ ತಮ್ಮ ಪಕ್ಷದ ಹಿರಿಯ ಶಾಸಕರೇ ಮಗ್ಗಲು ಮುಳ್ಳಾಗಿದ್ದಾರೆ. ಹೌದು, ಬಿಜೆಪಿಯ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಕೈ ತಪ್ಪುವ ಆತಂಕ ಎದುರಾಗಿದ್ದು, ಹೀಗಾಗಿ 10 ಹಿರಿಯ ಶಾಸಕರು ಬಂಡಾಯವೇಳಲು ತೆರೆಮರೆಯಲ್ಲಿ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ಇಬ್ಬರು ಹಿರಿಯ ಶಾಸಕರು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಬೆಂಗಳೂರಿನ ತಾಜ್ವೆಸ್ಟ್ ಂಡ್ ಹೊಟೇಲ್ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಸಿಎಂ ಯಡಿಯೂರಪ್ಪನವರಲ್ಲಿ ತಳಮಳ ಸೃಷ್ಟಿಸಿದೆ. ಈ ಎಲ್ಲ ರಾಜಕೀಯ ಬೆಳವಣಿಗೆಗಳು ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಐದುಗಳಲ್ಲೇ ಬಿಎಸ್ವೈಗೆ ಹೊಸ ಸಂಕಟ ಎದುರಾಗಿದೆ.