ಕರ್ನಾಟಕ ಸರಕಾರದ ಯಿಂದ 1 ಕೋಟಿ ರೂ. ದೋಚಿದ ಹ್ಯಾಕರ್ಸ್..!

0
106

ಕರ್ನಾಟಕ ಸರಕಾರದ ಆನ್ ಲೈನ್ ಗೆ ಕನ್ನ ಹಾಕಿದ ಹ್ಯಾಕರ್ಸ್ 1 ಕೋಟಿ ರೂ. ದೋಚಿದ್ದಾರೆ. ಈ ಬಗ್ಗೆ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಜುಲೈ 30ರಂದು ನಡೆದಿದ್ದ ಆನ್ ಲೈನ್ ಮೂಲಕ ಗುತ್ತಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಅಧಿಕಾರಿಯ ಅನುಮತಿ ಪಡೆಯದೇ ಹ್ಯಾಕರ್ಸ್ ಗುತ್ತಿಗೆ ಮೊತ್ತವನ್ನು ಬಿಡುಗಡೆ ಮಾಡಿಸಿಕೊಂಡಿದ್ದಾರೆ.7 ಕೋಟಿ ರೂ. ಮೊತ್ತದ ಗುತ್ತಿಗೆಗೆ ಅನುಮತಿ ನೀಡದೇ ಇದ್ದರೂ 1 ಕೋಟಿ ರೂ. ಬಿಡುಗಡೆ ಆಗಿರುವ ಬಗ್ಗೆ ಅನುಮಾನಗೊಂಡ ಇ-ಪ್ರೊಕ್ಯೂರ್ ಮೆಂಟ್ ವಿಭಾಗದ ಹಣಕಾಸು ಸಲಹೆಗಾರರಾಗಿರುವ ಶೈಲಜಾ ಎಸ್.ಕೆ. ಕ್ರೈಂ ವಿಭಾಗದ ಪೊಲೀಸರಿಗೆ ದೂರು ನೀಡಿದ್ದರು.

ನಿಮ್ಮಿ ಎಂಟರ್ ಪ್ರೈಸಸ್ ಗೆ 1 ಕೋಟಿ ರೂ. ಅನುಮತಿ ನೀಡದೇ ಸರಕಾರದಿಂದ ಬಿಡುಗಡೆ ಆಗಿರುವುದು ವಂಚನೆ ಹಾಗೂ ಅಕ್ರಮ ಎಂದು ಆರೋಪಿಸಿ ದೂರು ನೀಡಲಾಗಿದ್ದು, ಈ ಬಗ್ಗೆ ತನಿಖೆ ನಡೆದಿದೆ.

LEAVE A REPLY

Please enter your comment!
Please enter your name here