02 ಸೆಪ್ಟೆಂಬರ್ 2019 ಗೌರಿ ಗಣೇಶ ಹಬ್ಬದ ವಿಶೇಷ.!

0
1057

ನಾಡಿನ ಸಮಸ್ತ ಕನ್ನಡಿಗರಿಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಗೌರಿ ಗಣೇಶ ಹಬ್ಬದ ಪೂಜೆಯನ್ನು ಹೇಗೆ ಮಾಡಬೇಕು ಹಾಗೂ ಪೂಜಾ ಫಲಗಳನ್ನು ಶ್ರೀ ರವಿಶಂಕರ್ ಗುರೂಜಿಯವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ.

ಇಂದು ಗೌರಿ ಹಬ್ಬ ಆಗಿರುವುದರಿಂದ ತಂಗಿ, ಅಕ್ಕಂದಿರಿಗೆ ಗೌರಿ ಬಾಗಿನವನ್ನು ಕೊಡುತ್ತೀರಿ, ಕೊಡುವಂಥ ಸಂದರ್ಭ. ನಿಮಗೆ ಕೊಡಲು ಆಗುತ್ತಿಲ್ಲ ಎಂಬ ಸಂಕಷ್ಟವಿದ್ದರೆ ಯೋಚಿಸಬೇಡಿ ಒಂದು ಮೊರವನ್ನು ಇಟ್ಟುಕೊಂಡು ಅದಕ್ಕೆ ಹರಿಶಿನ, ಕುಂಕುಮ ಅಕ್ಕಿ, ಹಣ್ಣು ಇದನ್ನು ಇಟ್ಟು ಕೊಡುವುದು ಬಹಳ ಒಳ್ಳೆಯದು. ಗೌರಿ ಹಬ್ಬವನ್ನು ಏತಕ್ಕೆ ಮಾಡುತ್ತಾರೆ ಎಂಬುದು ಎಷ್ಟೋ ಜನರಿಗೆ ಇಂದಿಗೂ ತಿಳಿದಿಲ್ಲ. ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟ ತಂದೆ, ತಾಯಿ ಮೊದಲ ವರ್ಷದಲ್ಲಿ ಗಂಡನ ಮನೆಗೆ ಹೋದವಳು ಹೇಗೆ ಇದ್ದಾಳೋ ಎಂಬ ಯೋಚನೆಯಲ್ಲಿ ಒಂದು ಪ್ರೀತಿಯಿಂದ ಬಾಗಿನವನ್ನು ಕೊಡುತ್ತಾರೆ. ಮಗಳಿಗೆ ಶುಭ ಹಾರೈಸಿ ಹರಿಶಿನ ಸ್ನಾನವನ್ನು ಮಾಡಿಸುತ್ತಾರೆ ಮತ್ತು ಆಕೆಯ ಗಂಡನಿಗೂ ಕೂಡ ಅಂದರೆ ಅಳಿಯನಿಗೂ ಕೂಡ ಅರಿಶಿನ ಎಣ್ಣೆಯನ್ನು ಹಚ್ಚಿ ಸ್ನಾನ ಮಾಡಿಸುತ್ತಾರೆ. ತಂದೆ, ತಾಯಿ ತಮ್ಮ ಮಗಳು ಹೇಗಿದ್ದಾಳೆ, ಅವಳ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಬಹಳ ಸೂಕ್ತವಾದ ಸಮಯ ಇದಾಗಿದೆ. ಮನೆಯಲ್ಲಿ ಗೌರಿ ಕೂರಿಸುತ್ತೇವೆ, ಕರೆಸುತ್ತೇವೆ ಎಂದರೆ ಅದು ತಮ್ಮ ಮನೆಯಲ್ಲಿರುವ ಹೆಣ್ಣುಮಗಳು. ಹಿರಿಯರು ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಗಾದೆಯನ್ನು ಮಾಡಿದ್ದರು. ಗಂಡನ ಮನೆಗೆ ಹೋದ ಹೆಣ್ಣು ಮಗಳು ಚೆನ್ನಾಗಿರಲಿ, ಹಾಗೂ ಹೋದ ಮನೆಯಲ್ಲಿ ಲಕ್ಷ್ಮೀಯ ಕಳೆಯನ್ನು ತರಲಿ ಎಂಬ ಉದ್ದೇಶದಿಂದ ನಮ್ಮ ಹಿರಿಯರು ಈ ಪದ್ಧತಿಯನ್ನು ಮಾಡಿದ್ದರು. ನಮ್ಮ ಮನೆಯ ಲಕ್ಷ್ಮಿ ಇನ್ನೊಬ್ಬರ ಮನೆಯಲ್ಲಿ ಬೆಳಗಲಿ ಎಂಬ ವಾಡಿಕೆ.

ಹೆಣ್ಣಿನ ಪ್ರಕೃತಿಯೇ ಒಂದು ಅದ್ಭುತ ಅದನ್ನು ಹೆಚ್ಚು ಅರ್ಥ ಮಾಡಿಕೊಳ್ಳುವವರು ತಾಯಿಯೊಬ್ಬಳೆ. ಮಗಳ ಭಾವನೆಗಳನ್ನು ಅರಿತುಕೊಳ್ಳುವಲ್ಲಿ ತಾಯಿ ಸದಾ ಮುಂದಿರುತ್ತಾಳೆ. ಮಗಳ ಮನೆಯಲ್ಲಿ ಅಪಶ್ರುತಿ ಇದ್ದರೆ, ಆ ಸಲುವಾಗಿ ಗೌರಿ ಹಬ್ಬದ ಮೂಲಕ ಸರಿಪಡಿಸುತ್ತಿದ್ದರು. ಹೇಗೆ ಎಂದರೆ ವಿಶೇಷವಾಗಿ ಮಂಗಳ ಗೌರಿ ರಥವನ್ನು ಐದು ವರ್ಷ ತಾಯಿ ಮನೆ ಹಾಗೂ ಮಗಳ ಮನೆಯಲ್ಲೂ ನಡೆಸುತ್ತಿದ್ದರು. ೫ ವರ್ಷ ಮಗಳ ಮನೆಗೆ ಹೋಗುವುದು, ಕೊಡುವುದು ಈ ಮೂಲಕ ಮನೆಯ ಸಮಸ್ಯೆಯನ್ನು ಬಗೆಹರಿಸುತ್ತಿದ್ದರು. ಗೌರಿ ಹಬ್ಬವನ್ನು ಮಾಡುತ್ತಿದ್ದದ್ದು, ಮುಖ್ಯವಾಗಿ ಹೆಣ್ಣಿನ ಸಮಸ್ಯೆಗಳನ್ನು ಅರಿತುಕೊಳ್ಳುವ ಸಲುವಾಗಿ. ಗಂಡನ ಮನೆಗೆ ಹೋದ ಮಗಳ ಆರೋಗ್ಯ, ಪರಿಸ್ಥಿತಿ ಹೇಗೆ ಇದೆ ಎಂಬುದನ್ನು ತಿಳಿದುಕೊಳ್ಳುಲು ತಂದೆ ತಾಯಂದಿರು ಬಾಗಿನ ಕೊಡುವ ರೂಪದಲ್ಲಿ ಮಗಳ ಮನೆಗೆ ಭೇಟಿ ನೀಡುತ್ತಾರೆ. ತಮ್ಮ ಮಗಳ ಜೀವನ ಸುಖಕರವಾಗಿರಲಿ ಎಂದು ಅವಳಿಗೆ ಬಳೆ,ಸೀರೆ ,ಹಣ್ಣು, ಅರಿಶಿನ ಕೊಟ್ಟು ಸುಖಕರವಾಗಿರಲಿ ಎಂದು ಹರಸುತ್ತಾರೆ. ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವಾಗ `ಒಣಕೊಬ್ಬರಿಯನ್ನು‘ ಮುಖ್ಯವಾಗಿ ಕೊಡಿ ಯಾಕೆಂದರೆ ಒಣ ಕೊಬ್ಬರಿ ಶ್ರೇಷ್ಠವಾದ ಆಹಾರ, ಎಷ್ಟು ತಿಂಗಳಾದರೂ ಬಿಟ್ಟು ತಿನ್ನಬಹುದು ಅಷ್ಟು ಶ್ರೇಷ್ಠತೆ. ಹಾಗೆ ಅದರ ಅರ್ಥ ಮಗಳ ಜೀವನವೂ ಒಣಕೊಬ್ಬರಿ ಹಾಗೇ ಇರಲಿ ಎಂದು ತಾಯಂದಿರು ಬಾಗಿನದಲ್ಲಿ ಕೊಬ್ಬರಿಯನ್ನು ಮತ್ತು ಬಾಳೆಹಣ್ಣನ್ನು ಸೇರಿಸಿ ಕೊಡುತ್ತಾರೆ.

ಇನ್ನು ಗಣಪತಿಯ ಪೂಜೆ, ಗಣಪತಿ ಪೂಜೆಯ ಒಂದು ಸಂಸ್ಕಾರ ಅನಾದಿ ಕಾಲದಿಂದಲೂ ಮೂಡಿ ಬಂದಿದೆ. ಅದನ್ನು ತುಂಬ ದೊಡ್ಡ ಮಟ್ಟದಲ್ಲಿ ತೆಗೆದುಕೊಂಡು ಬಂದವರು ಬಾಲಗಂಗಾಧರನಾಥ ತಿಲಕ್. ನಮ್ಮ ದೇಶದಲ್ಲಿ ಜಾತಿ, ಮತ, ಧರ್ಮ ಬಾಂಧವ್ಯವಿಲ್ಲದ ಹೋರಾಟಗಳೇ ಹೆಚ್ಚಿತ್ತು, ಇದನ್ನು ಅರಿತ ಬಾಲಗಂಗಾಧರನಾಥ ತಿಲಕ್ ಅವರು ಒಂದು ಉಪಾಯ ಮಾಡಿದರು. ನಾಡಿನಾದ್ಯಂತ ನಾವು ಗಣಪತಿ ಅನುಷ್ಠಾನ ಮಾಡಿ ವಿಜೃಂಭಣೆಯಿಂದ ಸಂಭ್ರಮಿಸುತ್ತೀವಿ. ಸ್ವಾತಂತ್ರ್ಯ ನಮಗೆ ಸಿಕ್ಕಿದೆ ಎಂದರೆ ಅದು ಬಾಲಗಂಗಾಧರ್ ತಿಲಕ್ ಅವರಿಂದ ಮಾತ್ರವೇ. ಬೀದಿ ಬೀದಿಯಲ್ಲಿ ಗಣಪತಿಯನ್ನು ಕೂರಿಸುತ್ತೀರಿ, ಆದರೆ ಈ ಬಾರಿ ಚಿಕ್ಕದಾಗಿ, ಚೊಕ್ಕದಾಗಿ ಗಣಪತಿಯನ್ನು ಕೂರಿಸಿ ಎಂಬುದು ನನ್ನ ಮನವಿ. ನೆನಪಿಟ್ಟುಕೊಳ್ಳಿ ಗಣಪತಿ ಎಂದರೆ ಶ್ರೇಷ್ಠ ಆತನನ್ನು ಭಕ್ತಿಯಿಂದ ಸ್ಮರಿಸಿ ಮನೆಗೆ ಕರೆತನ್ನಿ ,ತುಂಬಾ ದೊಡ್ಡ ಗಣಪತಿ ಏನೂ ಬೇಡ ಚಿಕ್ಕದಾದ ಗಣಪತಿಯನ್ನು ಶ್ರದ್ಧಾ ಭಕ್ತಿಯಿಂದ ತಂದು ಪೂಜೆ ಮಾಡುವುದು ಒಳ್ಳೆಯದು. ಗಣಪತಿಯನ್ನು ವಿಘ್ನ ನಿವಾರಕ ಎಂದು ಹೇಳುತ್ತಾರೆ. ಎಂತಹ ಸಮಸ್ಯೆ ಬಂದರೂ ಆ ವಿಘ್ನವನ್ನು ನಿವಾರಿಸುವುದು ಗಣಪತಿ. ಇನ್ನೂ ವಿಶೇಷವಾಗಿ ತಿಳಿಯಬೇಕಾದದ್ದು, ವಿಘ್ನ ನಿವಾರಿಸುವುದು ಅವನೇ ಆದರೂ ವಿಘ್ನವನ್ನು ಕೊಡುವ ಶಕ್ತಿಯೂ ಅವರಿಗೆ ಇದೆ. ನಿಮಗೆ ತಿಳಿದಿಲ್ಲ ‘ಕಾರ್ತಿ ವಿಲೆಯಾರ್ಜನರ’ ಮಂತ್ರ ಜಪಿಸಿಕೊಂಡರೆ ಅವರ ಮನೆಯಲ್ಲಿ ಕಳ್ಳತನ ಆಗುವುದಿಲ್ಲ. ಯಾರ ಮನೆಯಲ್ಲಿ ನಿತ್ಯ ಕಳ್ಳತನ ಆಗುತ್ತಿದೆ, ದರೋಡೆಯಾಗುತ್ತಿದೆ ಅಂಥವರು ಮನೆಯಲ್ಲಿ ಅವರ ಸ್ತೋತ್ರವನ್ನು ನಿಯಮ ಅನುಸಾರ ಜಪಮಾಡಿಕೊಂಡರೆ ಕಳ್ಳತನವಾಗುವುದಿಲ್ಲ ಇದು ಪರಮ ಸತ್ಯ. ಕಾರ್ತಿ ವಿಲೆಯಾರ್ಜನರ ಆರ್ಶಿವಾದದಿಂದ ಅವರು ಇದ್ದ ಸ್ಥಳದಲ್ಲಿ ಯಾವ ಕಳ್ಳತನವು ಆಗುತ್ತಿರಲಿಲ್ಲ. ಅದಕ್ಕೆ ಇನ್ನೊಂದು ಪ್ರತ್ಯಕ್ಷ ಸಾಕ್ಷಿ ಎಂದರೆ ಶನಿ ಸಿಂಗಾಪುರ. ಸಿದ್ಧಿ ವಿನಾಯಕನ ಪೂಜೆ ಮಾಡದೆ ಯಾವ ಕೆಲಸವೂ ಪ್ರಾರಂಭಿಸುವುದಿಲ್ಲ! ನೀವು ಕೂಡ ಗಮನಿಸಿರಬಹುದು.

ಮೊದಲು ಸಿದ್ಧಿ ವಿನಾಯಕನ ಆರಾಧನೆ ಮಾಡುತ್ತಾರೆ. ಇಡೀ ಜಗತ್ತಿನಲ್ಲಿ ಮೊದಲ ಶ್ರೇಷ್ಠ ಪೂಜೆ ಎಂದರೆ ಅದು ಗಣಪತಿಗೆ ಮಾತ್ರ. ನೀವು ನ್ಯಾಯ ಬದ್ಧವಾಗಿದ್ದು, ಆ ಜಾಗದಲ್ಲಿ ಅಧರ್ಮ ನಡೆಯುತ್ತಿದೆ,ಅನ್ಯಾಯ ನಡೆಯುತ್ತಿದೆ ಎಂದರೆ ಕಾಣಿಪಾಕ ವಿನಾಯಕನ ಕ್ಷೇತ್ರಕ್ಕೆ ಒಮ್ಮೆ ಹೋಗಿ ಸಂಕಲ್ಪ ಪೂಜೆ, ಸೇವೆಯನ್ನು ಮಾಡಿಕೊಂಡು ಬನ್ನಿ. ಕೋರ್ಟಿನ ವಿಚಾರಗಳು ಸರಿ ಹೋಗಲಿದೆ. ಆದರೆ ನೀವು ಧರ್ಮಬದ್ಧವಾಗಿ ಇದ್ದರೆ ಮಾತ್ರ.! ಕೆಲವರಿಗೆ ಕರ್ಮ ಶಾಪ ಅನ್ನುವುದು ಅಂಟಿಕೊಂಡು ಬಂದಿರುತ್ತದೆ. ಎಷ್ಟು ವರ್ಷವಾದರೂ ಅವರ ಸ್ಥಿತಿ ಗತಿ ಹಾಗೆಯೇ ಇರುತ್ತದೆ. ಪಿತೃಶಾಪ ಹಾಗೂ ಎಷ್ಟೆ ಕೋಟಿಯಿದ್ದರೂ ಅದನ್ನು ಅನುಭವಿಸುವ ಯೋಗ ಅವರಿಗಿರುವುದಿಲ್ಲ, ಇಂಥವರು ಕರ್ಮ ಪ್ರಾಪ್ತಿಯನ್ನು ಬಗೆಹರಿಸಿಕೊಳ್ಳಲು ಶಿವಮೊಗ್ಗ ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ಇರುವ ಪುಣ್ಯ ಕ್ಷೇತ್ರ ‘ಕಮಂಡಲ ಗಣಪತಿ’. ಈ ಗಣಪತಿಯ ಸನ್ನಿಧಿಗೆ ಭೇಟಿ ನೀಡಿ ನಿಮ್ಮ ಕಷ್ಟಗಳನ್ನು ಬಗೆಹರಿಸಿಕೊಳ್ಳಬಹುದು. ಗಣಪತಿಯಲ್ಲಿ ವಿಶೇಷ ನಾನಾ ರೀತಿಯ ಶಕ್ತಿಗಳು ಇವೆ. ಈ ಒಂದು ಗೌರಿ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಿದ್ದೀರಾ, ಒಂದು ಪದ್ಧತಿಯಿಂದ ಮಾಡಬೇಕು ಯಾಕೆಂದರೆ ಗಣಪತಿ ಒಬ್ಬ ಶುದ್ಧ ಬ್ರಾಹ್ಮಣ, ಮೊದಲು ಜನಿವಾರ ಧರಿಸಿದಂತ ಮಹಾ ದಂಪತಿಗಳ ಮೊದಲ ಮಗ, ಜ್ಞಾನಕ್ಕೆ ಒಂದು ಹೆಸರು, ಚುರುಕು, ಮಹಾಜ್ಞಾನಕ್ಕೆ. ನಿಮ್ಮ ಮಕ್ಕಳು ಹೆಚ್ಚು ಬುದ್ಧಿ ಶಾಲೆಯಾಗಿದ್ದರೆ, ಅದ್ಭುತವಾದ ಆಲೋಚನೆಯನ್ನು ಮಾಡುತ್ತಾರೆ ಎಂದರೆ ಅದಕ್ಕೆ ಕಾರಣ ಸಿದ್ಧಿ ಬುದ್ಧಿ ವಿನಾಯಕ. ಇಂದು ಪೂರ್ಣ ಪ್ರಮಾಣದಲ್ಲಿ ಚಂದ್ರನನ್ನು ನೋಡಬಾರದು ಜಾಗ್ರತ ವಹಿಸಿ, ಒಳ್ಳೆಯದಾಗಲಿ ಎಲ್ಲರಿಗೂ ವಿನಾಯಕನ ಅನುಗ್ರಹ, ಆಶೀರ್ವಾದ ಸಿಗಲಿ ಗೌರಮ್ಮನ ಆಶೀರ್ವಾದವೂ ಸಿಗಲಿ ಎಂದು ಕೇಳಿಕೊಳ್ಳುತ್ತೇನೆ ಶುಭವಾಗಲಿ.

LEAVE A REPLY

Please enter your comment!
Please enter your name here