೧.ಹಸಿ ಹೆಸರು ಕಾಳು ಅಥವಾ ಬೇಯಿಸಿದ ಹೆಸರು ಕಾಳಿನಿಂದ ತಯಾರಿಸಿದ ಅಡುಗೆ ಸೇವನೆ ಮಾಡುವುದರಿಂದ ದೇಹದಲ್ಲಿ ಉಂಟಾಗುವರಕ್ತಸ್ರಾವವನ್ನುನಿಯಂತ್ರಿಸಬಹುದು.
೨.ಪ್ರತಿನಿತ್ಯ ಹೆಸರು ಕಾಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಗೆ ಸೇವಿಸುವ ಪ್ರಕ್ರಿಯೆ ಆರಂಭಿಸಿಕೊಂಡರೆ ಅಲ್ಸರ್, ಅಪೆಂಡಿಕ್ಸನಂಥ ಕಾಯಿಲೆಯನ್ನು ತಡೆಗಟ್ಟಬಹುದು
.
೩.ಚರ್ಮದ ಹೊಳಪಿಗಾಗಿ ಎರಡು ಚಮಚ ಹೆಸರು ಕಾಳು, ಅರ್ಧ ಚಮಚ ಅರಿಶಿನ ಮತ್ತು ಒಂದು ಚಮಚ ಅಕ್ಕಿ ಹಿಟ್ಟು ಇವೆಲ್ಲವನ್ನು ಸೇರಿಸಿ ಒಟ್ಟಿಗೆ ಪುಡಿ ಮಾಡಿ ಇದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಮೊಸರು ಬೆರೆಸಿ ಚರ್ಮಕ್ಕೆ ಲೇಪಿಸಿಕೊಂಡು ಇಪ್ಪತ್ತು ನಿಮಿಷ ಬಿಟ್ಟು ತೊಳೆದುಕೊಂಡರೆ ಚರ್ಮದ ಕಾಂತಿ ಹೆಚ್ಚಾಗುತ್ತದೆ.
೪.ಹೆಸರು ಕಾಳಿನ ಸೇವನೆ ಕೂದಲು ಸೊಂಪಾಗಿ, ದೃಢವಾಗಿ ಬೆಳೆಯಲು ಸಾಕಷ್ಟು ಉಪಯುಕ್ತ.