ಹಿಮ್ಮಡಿ ಬಿರುಕು ಹಾಗಿದ್ರೆ ಇಲ್ಲಿದೆ ಪರಿಹಾರ !

0
239

ಹಿಮ್ಮಡಿಗಳಲ್ಲಿ ಮೂಡುವ ಬಿರುಕು ಕಾಲಿನ ಸೌಂದರ್ಯವನ್ನು ಹಾಳು ಮಾಡುತ್ತದೆ. ಮಾತ್ರವಲ್ಲ ಇದರ ಜೊತೆಗೆ ಸಹಿಸಲಾರದ ನೋವುಂಟು ಮಾಡುತ್ತದೆ. ಕಾಲಿನ ಒಡೆದ ಹಿಮ್ಮಡಿಯನ್ನು ಮುಚ್ಚಿಡಲು ನಾನಾ ನಮೂನೆಯ ಹರಸಾಹಸ ಪಡುತ್ತಾರೆ. ಅದರ ಬದಲು ಮನೆ ಮದ್ದು ಮಾಡಿ ಹಿಮ್ಮಡಿ ಬಿರುಕನ್ನು ಮಾಯ ಮಾಡಬಹುದು.

ಹಿಮ್ಮಡಿಯಲ್ಲಿ ಮೂಡಿದ ಬಿರುಕಿಗೆ ಗ್ಲಿಸರಿನ್ ಬಹಳ ಉತ್ತಮ ಮದ್ದು. ಪ್ರತಿದಿನ ರಾತ್ರಿ ಮಲಗುವ ಮೊದಲು ಗ್ಲಿಸರಿನ್ ಹಚ್ಚಿ. ಗ್ಲಿಸರಿನ್ ಹಚ್ಚುವುದರಿಂದ ಒಡಕು ಮುಚ್ಚಿಹೋಗುತ್ತದೆ. ಮಾತ್ರವಲ್ಲ ಹಿಮ್ಮಡಿ ಬಿರುಕಿನಿಂದ ಉಂಟಾದ ನೋವು ಕೂಡ ಇರುವುದಿಲ್ಲ.

ಎಲ್ಲದಕ್ಕಿಂತಲೂ ಬೆಸ್ಟ್ ಮದ್ದು ಎಂದರೆ ತೆಂಗಿನ ಎಣ್ಣೆ. ಇದು ಹಿಮ್ಮಡಿ ಬಿರುಕಿನ ಜೊತೆಗೆ ಒಣಚರ್ಮಕ್ಕೆ ಉತ್ತಮ ಪರಿಹಾರ. ಇದು ಚರ್ಮದಲ್ಲಿನ ತೇವಾಂಶವನ್ನು ಕಾಪಾಡಿ, ಬ್ಯಾಕ್ಟೀರಿಯಾದ ಸೋಂಕು ಬರದಂತೆ ತಡೆಯುತ್ತದೆ. ರಾತ್ರಿ ಮಲಗುವ ಮೊದಲು ಕಾಲಿಗೆ ತೆಂಗಿನ ಎಣ್ಣೆ ಹಚ್ಚಿ. ಇದರಿಂದ ಬಹುಬೇಗನೇ ಪರಿಹಾರ ದೊರೆಯುತ್ತದೆ.

ರಾತ್ರಿ ಮಲಗುವ ಮುಂಚೆ ಒಡೆದ ಜಾಗಗಳಿಗೆ ಲಿಂಬೆಹಣ್ಣನ್ನು ಹಚ್ಚಿ ಚೆನ್ನಾಗಿ ಸ್ಕ್ರಬ್ ಮಾಡಿ. ಬೆಳಿಗ್ಗೆ ಎದ್ದ ತಕ್ಷಣ ತೊಳೆಯುವುದರಿಂದ ಕಾಲು ಮೃದುವಾಗುತ್ತವೆ

LEAVE A REPLY

Please enter your comment!
Please enter your name here