ಸಾವು ಸಮೀಪಿಸುತ್ತಿದೆ ಎಂದು ಎಚ್ಚರಿಸುವ 8 ಸೂಚನೆಗಳು

0
310

ಜೀವನ ಮತ್ತು ಮರಣ ಎನ್ನುವುದು ಅಂತ್ಯವಿಲ್ಲದ ಚಕ್ರ.
ಜೀವನದ ಅಂತ್ಯವೇ ಮರಣ. ಮರಣ ಎನ್ನುವುದು ಹೀಗೆ ಇರುತ್ತದೆ ಅಥವಾ ಇಂದೇ ಬರುತ್ತದೆ ಎನ್ನುವುದಕ್ಕೆ
ಯಾವುದೇ ಆಧಾರಗಳಿಲ್ಲ. ನಮಗೆ ಅರಿವಿಲ್ಲದೆ ಬರುವ ಸಾವು ಹೇಗೇ ಬಂದರೂ ಸ್ವೀಕರಿಸಲೇಬೇಕು. ಸಾವನ್ನು
ತಡೆದು ನಿಲ್ಲಿಸುವ ಶಕ್ತಿ ಯಾರಲ್ಲೂ ಇಲ್ಲ. ವ್ಯಕ್ತಿ ಹೇಗೇ ಇದ್ದರೂ, ಏನೇ
ಮಾಡಿದ್ದರೂ ಒಂದಲ್ಲಾ ಒಂದು ದಿನ ಸಾವಿಗೆ ಶರಣಾಗಲೇಬೇಕು. ಅದಕ್ಕಾಗಿಯೇ ಇದ್ದಷ್ಟು ದಿನ
ಸಂತೋಷದಿಂದ ಇತರರಿಗೆ ನೋವುಂಟು ಮಾಡದೆ ಬದುಕುವುದು ಶ್ರೇಷ್ಠ. ಸಾವು ಎನ್ನುವುದು ಖಚಿತ. ಅದರಲ್ಲಿ
ಯಾವುದೇ ಸಂಶಯವಿಲ್ಲ. ವ್ಯತ್ಯಾಸ ಎಂದರೆ ಸಾವು ಒಂದೇ ಬೇಗ ಬರಬಹುದು. ಇಲ್ಲವೇ ದೀರ್ಘ ಸಮಯದ ನಂತರ
ಬರಬಹುದು ಅಷ್ಟೇ. ಗ್ರಹಿಕೆ ಎನ್ನುವುದು ಮನುಷ್ಯನಿಗೆ ಸಿಕ್ಕ ಒಂದು ವರ. ಈ ವರವು ಕೆಲವೊಮ್ಮೆ
ವಿಶೇಷ ಜ್ಞಾನ ಎನಿಸಿಕೊಳ್ಳುವುದು. ನಮ್ಮಲ್ಲಿ ಧನಾತ್ಮಕ ಶಕ್ತಿಯ ಪ್ರಭೆ ಹೆಚ್ಚಿದ್ದರೆ
ಸಂಭವಿಸಬಹುದಾದ ಭವಿಷ್ಯದ ಬಗ್ಗೆ ಕೆಲವು ಸೂಚನೆಗಳು ದೊರೆಯುತ್ತವೆ. ಮುಂದೆ ಹೀಗಾಗಬಹುದು ಎನ್ನುವ
ಕನಸು, ಅರಿವು, ಶಕುನ
ಅಥವಾ ಸೂಚನೆಯ ಮೂಲಕ ತಿಳಿದುಕೊಳ್ಳುತ್ತಾರೆ ಎನ್ನಲಾಗುವುದು. ಕೆಲವರು ಹೇಳುವ ಪ್ರಕಾರ ಬಹುತೇಕ
ಸಂಗತಿಯ ಬಗ್ಗೆ ಎಲ್ಲರಿಗೂ ಮುನ್ನೆಚ್ಚರಿಕೆಯಂತೆ ಸೂಚನೆ ದೊರೆಯುವುದು. ಆದರೆ ಅದನ್ನು ಕೆಲವು
ಸರಿಯಗಿ ಗ್ರಹಿಸುವುದಿಲ್ಲ ಎಂದು ಹೇಳುತ್ತಾರೆ. ನಮ್ಮ ಜೀವನದಲ್ಲಿ ಆಗುವ ಉತ್ತಮ ಸಂಗತಿ ಅಥವಾ
ಕೆಟ್ಟ ಸಂಗತಿಗಳ ಬಗ್ಗೆ ಸೂಚನೆ ದೊರೆಯುತ್ತದೆ.

ಜ್ಯೋತಿಷ್ಯಶಾಸ್ತ್ರ ಹೇಳುವ ಪ್ರಕಾರ, ಸಾವು ಎಂಬುದು ಸಾಮಾನ್ಯವಾದ
ಸಂಗತಿ. ಆದರೆ ನಾವು ಆ ಸಾವಿಗೆ ಎಷ್ಟು ಸಮೀಪವಾಗಿದ್ದೇವೆ ಎಂಬುದಕ್ಕೆ ಕೆಲವು ಸೂಚನೆಗಳು ನಮಗೆ ಲಭಿಸುತ್ತವೆ.
ಹಾಗಾದರೆ ಆ ಸೂಚನೆಗಳು ಯಾವುವು?, ಅದು ಹೇಗೆ ಸಂಭವಿಸುತ್ತದೆ?, ನಮ್ಮ ಅರಿವಿಗೆ ಬರುವುದು ಯಾವಾಗ?
ಎಂಬುದನ್ನು ಇಲ್ಲಿ ತಿಳಿಯೋಣ.

 1. ಭೌತಿಕ
  ಬದಲಾವಣೆಗಳು: ಸಾವು ನಮ್ಮನ್ನು ಸಮೀಪಿಸುತ್ತಿದ್ದೆ ಎಂದಾಗ ಕೆಲವು ಭೌತಿಕವಾದ ಬದಲಾವಣೆಗಳಾಗುತ್ತವೆ.
  ರಕ್ತದೊತ್ತಡ ಹೆಚ್ಚಾಗುವುದು. ಚರ್ಮವು ಕಾಗದದಂತೆ ತೆಳುವಾಗಿರುವುದು ಮತ್ತು ಬಹಳ ಸೂಕ್ಷ್ಮತೆಯನ್ನು
  ಪಡೆದುಕೊಳ್ಳುವುದು. ತ್ವಚೆಯು ನೀಲಿ ಅಥವಾ ನೇರಳೆ ಬಣ್ಣಕ್ಕೆ ತಿರುಗುವುದು. ಮೂತ್ರ ಕೂಡ ಕಂದು ಅಥವಾ
  ತುಕ್ಕಿನ ಬಣ್ಣಕ್ಕೆ ತಿರುಗುತ್ತದೆ. ಕೂದಲು ಹೆಚ್ಚಾಗಿ ಉದುವುದು, ಹಲ್ಲುಗಳ ಗಾಢವಾದ ಕಲೆಯಿಂದ ಕೂಡಿರುವುದು.
 2. ಹಸಿವು
  ಮತ್ತು ಬಾಯಾರಿಕೆ ಪ್ರಮಾಣ ಕಡಿಮೆಯಾಗುವುದು: ವ್ಯಕ್ತಿ ಸಾವಿಗೆ ಹತ್ತಿರವಾಗುತ್ತಿದ್ದಾನೆ ಎಂದರೆ ಅವನಿಗೆ
  ಊಟ-ತಿಂಡಿಯಲ್ಲಿ ಉತ್ಸಾಹವಿರುವುದಿಲ್ಲ. ಅವರು ತಿನ್ನುವ ಮತ್ತು ಕುಡಿಯುವ ವಿಚಾರದಲ್ಲಿ ನಿರಾಕರಣೆ
  ತೋರುತ್ತಾರೆ. ತಮ್ಮ ಆರೋಗ್ಯದ ಬಗ್ಗೆಯೂ ಚಿಂತೆ ಮಾಡುವುದಿಲ್ಲ. ಪ್ರೀತಿ ಪಾತ್ರರು ನೆಚ್ಚಿನ ಆಹಾರ
  ನೀಡಿದರೂ ನಿರಾಕರಿಸುತ್ತಾರೆ.
 3. ಅತಿಯಾದ
  ನಿದ್ರೆ: ಆಹಾರವನ್ನು ತಿರಸ್ಕರಿಸುತ್ತಿದ್ದಾರೆ ಎಂದರೆ ಅವರಲ್ಲಿ ಯಾವುದೇ ರೀತಿಯ ಶಕ್ತಿ ಇರುವುದಿಲ್ಲ.
  ದಿನದ ಬಹುತೇಕ ಸಮಯ ನಿದ್ರೆಯಲ್ಲೇ ಕಳೆಯುತ್ತಾರೆ. ಹೆಚ್ಚಿನ ಆಯಾಸ ಅವರನ್ನು ಆವರಿಸಿರುತ್ತದೆ. ದೇಹದಲ್ಲಿ
  ಚಯಾಪಚಯ ಕ್ರಿಯೆ ಮತ್ತು ಜೀರ್ಣ ಕ್ರಿಯೆ ಬಹಳ ನಿಧಾನವಾಗಿ ನಡೆಯುತ್ತಿರುತ್ತದೆ.
 4. ಉಸಿರಾಟದ
  ಸಮಸ್ಯೆ: ಸಾವಿನ ಪ್ರಾಥಮಿಕ ಚಿಹ್ನೆ ಎಂದರೆ ಅನಿಮಿತ ಅಥವಾ ಉಸಿರಾಟದ ತೊಂದರೆ. ವ್ಯಕ್ತಿಯು ತ್ವರಿತ
  ಅಥವಾ ಆಳವಿಲ್ಲದ ಉಸಿರಾಟದ ತೊಂದರೆಯನ್ನು ಅನುಭವಿಸಬಹುದು. ಕೆಲವೊಮ್ಮೆ ಪ್ರತಿಯೊಂದು ಉಸಿರಾಟದ ನಡುವೆಯೂ
  ವಿರಾಮವನ್ನು ತೆಗೆದುಕೊಳ್ಳಬಹುದು. ಈ ರೀತಿಯ ಅನಿಮಿತವಾದ ಉಸಿರಾಟದ ತೊಂದರೆ ಪ್ರೀತಿ ಪಾತ್ರರಿಗೆ ನೋವನ್ನುಂಟು
  ಮಾಡಬಹುದು.
 5. ದಿಗ್ಭ್ರಮೆ
  ಮತ್ತು ಅನುಚಿತ ವರ್ತನೆ: ಮರಣಕ್ಕೆ ಸಮೀಪವಾದ ವ್ಯಕ್ತಿಯ ಮೆದುಳು ಸಾಕಷ್ಟು ಗೊಂದಲವನ್ನು ಸೃಷ್ಟಿಸುತ್ತದೆ.
  ಅವರಿಗೆ ಯಾವುದೇ ವಸ್ತು ಅಥವಾ ವ್ಯಕ್ತಿಯನ್ನು ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ.
  ತಪ್ಪಾದ ಗ್ರಹಿಕೆ ಹಾಗೂ ಸಂಗತಿಗಳ ಬಗ್ಗೆ ದಿಗ್ಭ್ರಮೆಗೆ ಒಳಗಾಗುವರು.
 6. ಜನರಿಂದ
  ದೂರ ಹೋಗುವರು: ಸಾವಿಗೆ ಸಮೀಪಿಸಿದ ವ್ಯಕ್ತಿಗಳು ಸಾಮಾನ್ಯವಾಗಿ ಜನರಿಂದ ದೂರ ಉಳಿಯುತ್ತಾರೆ. ತಮ್ಮ
  ಬದುಕಿನ ಮೇಲೆ ಯಾವುದೇ ಆಸೆ ಅಥವಾ ನಿರೀಕ್ಷೆ ಹೊಂದಿರುವುದಿಲ್ಲ. ಶಕ್ತಿಯನ್ನು ಕೆಳೆದುಕೊಂಡಿರುವ ಸ್ಥಿತಿಯನ್ನು
  ಅನುಭವಿಸುತ್ತಿರುತ್ತಾರೆ. ಹಾಗಾಗಿ ತಮ್ಮವರು ಮತ್ತು ಪ್ರೀತಿ ಪಾತ್ರರಿಂದ ದೂರವಾಗುತ್ತಾರೆ. ಜೊತೆಗೆ
  ಜನರಿಂದ ಆದಷ್ಟು ದೂರ ಉಳಿಯಲು ಬಯಸುತ್ತಾರೆ. ಆದಷ್ಟು ಸಮಯ ಏಕಾಂಗಿಯಾಗಿ ಇರಲು ಬಯಸುತ್ತಾರೆ.
 7. ಆಧ್ಯಾತ್ಮಿಕ
  ಚಿಂತನೆಗೆ ಹೆಚ್ಚಿನ ಒಲವು: ಸಾವಿಗೆ ಹತ್ತಿರವಾದವರು ಆಧ್ಯಾತ್ಮ ಮತ್ತು ದೈವದ ಬಗ್ಗೆ ಹೆಚ್ಚಿನ ಒಲವನ್ನು
  ತೋರುತ್ತಾರೆ. ಕೆಲವರು ಆಧ್ಯಾತ್ಮ ಮತ್ತು ಚಟುವಟಿಕೆ ಕುರಿತು ಹೆಚ್ಚಾಗಿ ಮಾತನಾಡುತ್ತಾರೆ. ಅಲ್ಲದೇ,
  ವಿಚಿತ್ರವಾದ ಕನಸು ಕಾಣುವುದು ಮತ್ತು ಸಂಗತಿಗಳ ಬಗ್ಗೆ ಮಾತನಾಡುವುದನ್ನು ನೋಡಬಹುದು. ಅವರಿಗೆ ಬೀಳುವ
  ಕನಸುಗಳನ್ನು ಹಂಚಿಕೊಂಡರೆ ಅದು ಬೆಚ್ಚಿ ಬೀಳಿಸುತ್ತದೆ. ದೇವರ ಮನೆಯಲ್ಲಿ ಸಾಕಷ್ಟು ಸಮಯ ಕಳೆಯವುದು
  ಇಲ್ಲವೇ, ಧಾರ್ಮಿಕ, ಪುರಾಣಗಳನ್ನು ಕೇಳುವುದು ಮತ್ತು ಇತರರಿಗೆ ಹೇಳುವಲ್ಲಿ ಹೆಚ್ಚಿನ ಆಸಕ್ತಿ ತೋರುವರು.
  ದೇವರ ಬಗ್ಗೆ ಸಾಕಷ್ಟು ನಂಬಿಕೆ ಮೂಡುವಂತೆ ಮಾಡಲು ಸಾಕಷ್ಟು ಸಲಹೆ ಸೂಚನೆಗಳನ್ನು ನೀಡುವರು.
 8. ವಿದಾಯ
  ಹೇಳುವ ತಯಾರಿ: ಸಾವು ಹತ್ತಿರವಾಗುತ್ತಿದ್ದಂತೆ ವ್ಯಕ್ತಿ ಯಾವುದೇ ವಿಷಯ ಅಥವಾ ವಿಷಯದ ಮೇಲೆ ಸಂಪೂರ್ಣವಾದ
  ಮೋಹವನ್ನು ಕಳೆದುಕೊಳ್ಳುತ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸಾವು ಬರಲಿದೆ ಎಂಬುದನ್ನು ಅರಿತಿರುತ್ತಾರೆ.
  ಈ ನಿಟ್ಟಿನಲ್ಲಿ ತಮ್ಮ ಅಮೂಲ್ಯ ವಸ್ತುಗಳನ್ನು ದಾನ ಮಾಡುತ್ತಾರೆ. ಅಥವಾ ತಮಗೆ ಅಮೂಲ್ಯವಾದ ವಸ್ತು
  ಯಾರಿಗೆ ಸಲ್ಲಬೇಕು ಎಂಬುದನ್ನು ನಿರ್ಧರಿಸಿ ಅವರಿಗೆ ನೀಡುತ್ತಾರೆ. ಭೂಮಿಯ ಋಣ ತೀರಿದೆ ಎಂದು ಆಳವಾದ
  ಜ್ಞಾನದ ಅರಿವಿನ ಕಡೆಗೆ ಸಾಗುತ್ತಾರೆ.

ಸಾವು ಹೀಗೆ ಆಗುತ್ತದೆ ಅಥವಾ ಯಾವಾಗ ಬರುತ್ತದೆ ಎಂಬುದಕ್ಕೆ ಯಾವುದೇ
ಆಧಾರಗಳಿಲ್ಲ. ಆದರೆ ಸಾವು ಸಮೀಪಿಸುತ್ತಿದೆ ಎಂಬುದಕ್ಕೆ ಕೆಲವು ಸೂಚನೆಗಳು ಸಿಗುತ್ತದೆ

LEAVE A REPLY

Please enter your comment!
Please enter your name here