ರಾಮನ ನಂತರ ಅವರ ವಂಶ ಏನಾಯ್ತು ಗೊತ್ತಾ?

0
244

ಒಂದೇ ಮಾತು, ಒಂದೇ ಬಾಣ ಇದು ಭಗವಾನ್‍ ಶ್ರೀರಾಮಚಂದ್ರನ ಸಿದ್ಧಾಂತವಾಗಿತ್ತು.
ಕಾಲ ಅದೆಷ್ಟೇ ಸರಿದರೂ, ಯುಗಗಳೇ ಉರುಳಿದರೂ ಶ್ರೀರಾಮ ಪ್ರಭುವಿನ ಆದರ್ಶ, ಬದುಕಿನ ರೀತಿ ನೀತಿಗಳು
ಮೌಲ್ಯಯುತವಾಗಿದೆ. ಈತ ಬಾಣ ಹಿಡಿದು ಹೆಜ್ಜೆ ಇಟ್ಟ ನೆಲ ಇಂದು ಮರುಭೂಮಿಯಾಗಿ ಬದಲಾಗಿದೆ. ಕಿರೀಟ ಧರಿಸಿ
ಸಿಂಹಾಸನದ ಮೇಲೆ ಕುಳಿತ ಸ್ಥಳದಲ್ಲಿ ರತ್ನಗಳೇ ಸುರಿದಿದೆ. ಧರ್ಮವನ್ನು ಪರಿಪಾಲನೆ ಮಾಡಿ ಆದರ್ಶ ಪುರುಷನಾದ.
ಸಕಲ ಲೋಕಗಳಲ್ಲಿ ಇಂದಿಗೂ ದೇವರಾಗಿ ನೆಲೆಸಿದ್ದಾನೆ.

ಶ್ರೀರಾಮ ಚರಿತ್ರೆ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಅಮರವಾಗಿದ್ದಾನೆ.
ಆದರೆ ರಾಮನ ಅವತಾರ ಮುಗಿದ ನಂತರ ಅವನ ವಂಶ ಏನಾಗಿದೆ. ಅಯೋಧ್ಯಾ ನಗರ ಹೀಗೇಕೆ ಬದಲಾಗಿದೆ? ಎಂಬ ಪ್ರಶ್ನೆಗೆ
ಬಹುತೇಕ ಮಂದಿ ಬಳಿ ಉತ್ತರವಿಲ್ಲ.

ರಾಮ ಮತ್ತು ರಾವಣನಿಗೆ ಯುದ್ಧ ನಡೆದ ನಂತರ ರಾಮ ಅಯೋಧ್ಯಾ ನಗರದಲ್ಲಿ
ಪಟ್ಟಾಭಿಷಿಕ್ತನಾದ ನಂತರ ಅದುವರೆಗೂ ಕಂಡಿರದ ಹಾಗೆ ಆಡಳಿತ ನಡೆಸಿದ. ಸೀತಾ ರಾಮರ ಸಂಸಾರದ ಫಲವಾಗಿ
ಲವ-ಕುಶರ ಜನನವಾಗುತ್ತದೆ. ಲವ-ಕುಶರು ದೊಡ್ಡವರಾದ ನಂತರ ತಮ್ಮಂದಿರ ಮಕ್ಕಳಿಗೂ ಸೇರಿದಂತೆ ಸಮಾನವಾಗಿ
ರಾಜ್ಯವನ್ನು ಹಂಚಿಕೆ ಮಾಡುತ್ತಾನೆ. ಇದಾದಂ ನಂತರ ಮಕ್ಕಳೆಲ್ಲರೂ ತಮ್ಮ ಪಾಲಿನ ರಾಜ್ಯವನ್ನು ಅಚ್ಚುಕಟ್ಟಾಗಿ
ನಡೆಸಿಕೊಂಡು ಹೋಗುತ್ತಾರೆ.

ಅದರಲ್ಲೂ ರಾಮನ ಮಗ ಕುಶನು ಕುಶಾವತಿ ರಾಜ್ಯವನ್ನು ರಾಮನ ಅಯೋಧ್ಯೆಗೆ
ಸರಿಸಮಾನವಾಗಿ ಮಾಡುತ್ತಾನೆ. ಹೀಗೆ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಹೋಗುವ ವೇಳೆ ರಾಮ ಮತ್ತೊಂದು
ಅವತಾರ ತಾಳಯವ ಸಮಯ ಎದುರಾಗುತ್ತದೆ. ರಾಮ-ಲಕ್ಷ್ಮಣರಿಬ್ಬರೂ ಸರಯೂ ನದಿ ಸೇರಿ ವೈಕುಂಕವಾಸಿಗಳಾಗುತ್ತಾರೆ.
ಇದನ್ನು ನೋಡಿದ ಅಯೋಧ್ಯಾ ಜನರು ಮತ್ತು ವಾನನರು ಕೂಡ ಸರಯೂ ನದಿ ಸೇರಿ ಸ್ವರ್ಗಸ್ಥರಾಗುತ್ತಾರೆ ಎಂದು
ಪುರಾಣಗಳು ಹೇಳುತ್ತವೆ.

ಇದಾದ ನಂತರ ರಾಮನಿಲ್ಲದ ಅಯೋಧ್ಯಾ ಕಳಾಹೀನವಾಗಿ ಬದಲಾಗುತ್ತದಂತೆ.
ಕುಶಾಮತಿ ನಗರದಲ್ಲಿ ನಿದ್ರಿಸುತ್ತಿರುವ ಕುಶನಿಗೆ ಅಯೋಧ್ಯಾ ದೇವಿ ಕನಸಿನಲ್ಲಿ ಬಂದು ರಾಮನಿಲ್ಲದ ಅಯೋಧ್ಯಾ
ನಗರ ಕಳಾಹೀನವಾಗಿದೆ. ಹಾಗಾಗಿ ನೀನು ಬಂದು ನಿನ್ನ ತಂದೆ ರಾಜ್ಯವನ್ನು ಪಾಲನೆ ಮಾಡುವಂತೆ ಹೇಳುತ್ತಾಳೆ.
ಹಾಗಾಗಿ ಆಕೆಯ ಮಾತಿಗೆ ಒಪ್ಪಿ ಮತ್ತೊಮ್ಮೆ ಅಯೋಧ್ಯಾ ನಗರವನ್ನು ರಾಮ ರಾಜ್ಯವನ್ನಾಗಿ ಮಾಡಿದನಂತೆ.

ಒಂದು ದಿನ ಸರಯೂ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಕುಶನ
ಕಿಯೂರು ಎಂಬ ಆಭರಣ ನದಿಯಲ್ಲಿ ಬಿದ್ದು ಹೋಯಿತು. ಎಷ್ಟೇ ಹುಡುಕಿದರೂ ಆ ಆಭರಣ ಸಿಗದಿದ್ದಾಗ, ನದಿಯಲ್ಲಿ
ವಾಸ ಮಾಡುತ್ತಿದ್ದ ಕುಬುಜ ಎಂಬ ನಾಗವಂಶಸ್ಥ ಆ ಆಭರವಣವನ್ನು ತೆಗೆದುಕೊಂಡಿದ್ದಾನೆ ಎಂಬುದನ್ನು ಗ್ರಹಿಸಿದ
ಕುಶನು ಆತನ ಮೇಲೆ ಅಸ್ತ್ರ ಪ್ರಯೋಗ ಮಾಡಲು ಮುಂದಾಗುತ್ತಾನೆ. ಶ್ರೀರಾಮನ ಪರಾಕ್ರಮವನ್ನು ಬಲ್ಲ ಕುಬುಜನು
ಭೂಮಿ ಮೇಲೆ ಬಂದು ಆಭರಣವನ್ನು ಕೇವಲ ಕುತೂಹಲಕ್ಕಾಗಿ ತೆಗೆದುದಾಗಿ ಹೇಳಿ, ತನ್ನ ಮೇಲೆ ಅಸ್ತ್ರ ಪ್ರಯೋಗ
ಮಾಡಬಾರದೆಂದು ಕೇಳಿಕೊಂಡನು.

ಅಲ್ಲದೇ, ತಾನು ಮಾಡಿದ ತಪ್ಪಿಗಾಗಿ ತನ್ನ ಸಹೋದರಿ ಕುಮುದಾವತಿಯನ್ನು
ಮದುವೆಯಾಗುವುದಾಗಿ ಕೇಳಿಕೊಳ್ಳುತ್ತಾನೆ. ಅದಕ್ಕೆ ಸಮ್ಮತಿ ಸೂಚಿಸಿ, ಕುಮುದಾವತಿಯನ್ನು ಮದುವೆಯಾಗಿ
ಅಯೋಧ್ಯಾ ನಗರದ ರಾಣಿಯನ್ನಾಗಿ ಮಾಡುತ್ತಾನೆ. ಇವರಿಗೆ ಅತಿಥಿ ಎಂಬ ಮಗನ ಜನನವಾಗುತ್ತದೆ. ಕುಶನ ನಂತರ
ಅಯೋಧ್ಯಾ ನಗರವನ್ನು ಆಳ್ವಿಕೆ ಮಾಡುತ್ತಾನೆ. ಅತಿಥಿ ಉತ್ತಮ ರಾಜ ಎಂಬ ಹೆಸರು ಪಡೆದಿದ್ದನಾದರೂ, ದುರ್ಜನ
ಎಂಬ ರಾಕ್ಷಸನ ಜೊತೆಗೆ ನಡೆದ ಯುದ್ಧದಲ್ಲಿ ವೀರಮರಣವನ್ನಪ್ಪುತ್ತಾನೆ.

ರಾಮನ ನಂತರ 23 ಜನರು ರಾಮನ ರಾಜ್ಯವನ್ನು ಆಳಿದರು ಎಂದು ಚರಿತ್ರೆ
ಹೇಳುತ್ತದೆ. ಆದರೆ ರಾಮ ಮತ್ತು ಕುಶನ ನಂತರ ಅಷ್ಟು ಅದ್ಭುತವಾಗಿ ರಾಜ್ಯವನ್ನು ಯಾರೂ ನಡೆಸಲಿಲ್ಲ ಎಂದು
ಹೇಳಲಾಗುತ್ತದೆ. ರಘುವಂಶದಲ್ಲಿ ಅಗ್ನಿವರ್ಣ ಕೊನೆಯ ರಾಜ. ಆದರೆ ಅವನಿಗೆ ಕೆಟ್ಟ ಅಭ್ಯಾಸಗಳು ಇದ್ದುದರ
ಪರಿಣಾಮವಾಗಿ ಕ್ಷಯ ರೋಗದಿಂದ ಸಾವನ್ನಪ್ಪಿದನು. ಆ ವೇಳೆಗೆ ಆತನ ಪತ್ನಿ 6 ತಿಂಗಳ ಗರ್ಭಿಣಿಯಾಗಿದ್ದಳು.
ಇದಾದ ನಂತರ ಯಾವ ಪುರಾಣದಲ್ಲೂ ರಘುವಂಶದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎನ್ನಲಾಗುತ್ತದೆ.

ಇದಾದ ನಂತರ ದ್ವಾಪರಯುಗದಲ್ಲಿ ರಘುವಂಶಕ್ಕೆ ಸೇರಿದ ಪ್ರಸಯಯುಜಿತ್‍
ಎಂಬ ರಾಜ ದ್ರೌಪದಿ ಮೇಲಿನ ಮೋಹದಿಂದಾಗಿ ಕೌರವರ ಪರವಾಗಿ ಪಾಂಡವರ ವಿರುದ್ಧ ಯುದ್ಧ ಮಾಡಿ ಪಾಂಡವರಿಂದ
ಹತನಾದ ಎಂದು ಹೇಳಲಾಗುತ್ತದೆ. ಇದಾದ ನಂತರ ರಘುವಂಶದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎನ್ನಲಾಗುತ್ತದೆ.

LEAVE A REPLY

Please enter your comment!
Please enter your name here