ಯಾವಾಗಲೂ ಮನೆಯಲ್ಲಿ ಹಾಲು ಉಕ್ಕುತ್ತಿದ್ದರೆ ಅದರ ಅರ್ಥ ಏನು ಗೊತ್ತಾ?

0
279

ಭಿನ್ನತೆಯಲ್ಲಿ ಏಕತೆ ಸಾರಿದೆ ನಮ್ಮ ದೇಶ. ಬಹಳಷ್ಟು ಸಂಪ್ರದಾಯ, ಆಚರಣೆಗಳು ನಮ್ಮ ದೇಶದಲ್ಲಿ ವಾಸ ಮಾಡುವ ಜನರಲ್ಲಿ ಹಾಸು ಹೊಕ್ಕಾಗಿದೆ. ಅದೇ ರೀತಿ ಕೆಲವು ಆಚರಣೆಗಳಿಗೆ ಅದರದೇ ಅರ್ಥಗಳಿರುವುದನ್ನು ಗಮನಿಸಬಹುದು. ಸಾಮಾನ್ಯವಾಗಿ ಮನೆಯಲ್ಲಿ ಹಾಲು ಉಕ್ಕುತ್ತದೆ. ಮನೆಯಲ್ಲಿ ಆಚೆ-ಈಚೆ ಓಡಾಡುತ್ತಿದ್ದಾಗ ಹಾಲು ಉಕ್ಕುವುದನ್ನು ಕಾಣುತ್ತೇವೆ.
ಹೀಗೆ ಹಾಲು ಉಕ್ಕಲಿಕ್ಕೆ ಬಿಡುವುದು ಅಥವಾ ಉಕ್ಕದಂತೆ ನೋಡಿಕೊಳ್ಳುವುದು ಅವರವರಿಗೆ ಬಿಟ್ಟ ವಿಚಾರವಾಗಿದೆ. ಆದರೆ ಮನೆಯಲ್ಲಿ ಹಾಲು ಉಕ್ಕುವುದು ಮುಂದೆ ನಡೆಯುವ ಯಾವುದೋ ಒಂದು ಘಟನೆಗೆ ಸೂಚನೆಯನ್ನು ನೀಡುತ್ತಿರುತ್ತದೆ. ಆದರೆ ಕೆಲವೊಮ್ಮೆ ಆ ಘಟನೆಗಳು ಬದುಕಿನಲ್ಲಿ ಜರುಗಿರುತ್ತವೆ. ಮತ್ತೆ ಕೆಲವೊಮ್ಮೆ ಜರುಗುವುದೇ ಇಲ್ಲ. ಅವುಗಳ ಬಗ್ಗೆ ಅಷ್ಟೊಂದು ಕಾಳಜಿ ವಹಿಸುವ ಅಗತ್ಯವೂ ಇಲ್ಲ. ಇವೆಲ್ಲಾ ಆಗುಹೋಗುಗಳು ಬದುಕಿನಲ್ಲಿ ನಡೆದು ಹೋಗುತ್ತವೆ.
ಹಾಲು ಉಕ್ಕಿದರೆ ಅಥವಾ ಚೆಲ್ಲಿದರೆ ಅಥವಾ ಕೆಟ್ಟರೆ ಏನಾದರೂ ಕೆಟ್ಟದಾಗಲಿದೆಯೇ?, ಏನಾದರೂ ಹಾನಿಯಾಗಬಹುದೇ ಎಂದು ಚಿಂತಿಸುವ ಮಂದಿ ಸಾಕಷ್ಟು ಜನರಿದ್ದಾರೆ. ಸಾಮಾನ್ಯವಾಗಿ ನಾವು ಹೊಸ ಮನೆ ಗೃಹಪ್ರವೇಶ ಮಾಡುವ ವೇಳೆ ಅಥವಾ ಯಾವುದಾರೂ ಹೊಸ ಮನೆಗೆ ಹೋಗುವ ಮುನ್ನಾ ಮನೆಯಲ್ಲಿ ಹಾಲು ಉಕ್ಕಿಸುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದೇವೆ. ಬಹಳಷ್ಟು ಜನರು ಪೂರ್ವದ ಕಡೆಗೆ ಹಾಲು ಉಕ್ಕುವಂತೆ ಮಾಡುತ್ತಾರೆ. ಇದರಿಂದ ಒಳ್ಳೆಯದಾಗುತ್ತದೆ ಎಂಬುದು ಕೆಲವರ ನಂಬಿಕೆ.
ಪೂರ್ವ ದಿಕ್ಕು ಶುಭ ದಿಕ್ಕು ಎಂದೇ ಹೇಳಲಾಗುತ್ತದೆ. ಹಾಗಾಗಿ ಪೂರ್ವ ದಿಕ್ಕಿಗೆ ಹಾಲು ಉಕ್ಕಿದರೆ ಶುಭವೇ ಆಗುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಬಹುತೇಕ ಮಂದಿಗಿದೆ. ಹಾಲು ಉಕ್ಕುವುದರಿಂದ ಮನೆಯಲ್ಲಿ ಶಾಂತಿ, ಸುಖ, ಸಮೃದ್ಧಿ ನೆಲೆಸುತ್ತದೆ ಎಂಬ ಮಾತು ಕೂಡ ಇದೆ. ಮದುವೆಗೂ ಮುನ್ನಾ ಮತ್ತು ಮದುವೆಯ ನಂತರ ಹಾಲು ಉಕ್ಕಿಸುವುದನ್ನು ನೋಡುತ್ತೇವೆ. ಹಾಲು ಉಕ್ಕುವ ಸಂದರ್ಭ ಮತ್ತು ಸಮಯಕ್ಕೆ ತಕ್ಕಂತೆ ವ್ಯಾಖ್ಯಾನಿಸಲಾಗುತ್ತದೆ.
ಹಾಲು ಅಮೃತಕ್ಕೆ ಸಮಾನ. ಹಸುವಿನ ಹಾಲು ಭುವಿಯ ಅಮೃತವಿದ್ದಂತೆ ಎಂದು ಹೇಳಲಾಗುತ್ತದೆ. ಅದು ಉಕ್ಕಿದಂತೆ ಅದೃಷ್ಟ ಉಕ್ಕಿ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹಾಲು ಉಕ್ಕಿದರೆ, ತತ್‍ಕ್ಷಣವೇ ದುಡ್ಡು ಬರುತ್ತದೆ ಎಂದು ಭಾವಿಸಬಾರದು. ಆದರೆ ಅದೃಷ್ಟ ನಿಮ್ಮ ಬೆನ್ನ ಹಿಂದೆ ಇದೆ.

LEAVE A REPLY

Please enter your comment!
Please enter your name here