ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ವ್ಯವಹಾರದಲ್ಲಿ ತೀರ ಸಾಲ ಮಾಡಿದ್ದರೂ, ಅದರ ಹಿನ್ನೆಲೆಯಲ್ಲೇ ಬೇಸತ್ತು ನೇತ್ರಾವತಿ ನದಿಗೆ ಹಾರಿ ಪ್ರಾಣತ್ಯಾಗ ಮಾಡಿಕೊಂಡಿದ್ದಾರೆಂಬ ಮಾತು ಎಲ್ಲೆಡೆ ಹರಿದಾಡುತ್ತಿತ್ತು. ಇತ್ತ ಪ್ರತ್ಯಕ್ಷದರ್ಶಿಯೊಬ್ಬರು ನಾನು ನೇತ್ರಾವತಿ ಸೇತುವೆಯ ಎಂಟನೇ ಪಿಲ್ಲರ್ ಮೇಲಿಂದ ಯಾರೂ ನದಿಗೆ ಹಾರಿದ್ದನ್ನು ನೋಡಿದೆ.! ಎಂದು ಮಾಧ್ಯಮದ ವರದಿಗಾರರಿಗೆ ಸುದ್ದಿ ನೀಡಿದ್ದಾರೆ.
ಸೈಮನ್ ಡಿಸೋಜಾ ಎಂಬ ಬೆಸ್ತರು ಮಾಧ್ಯಮಕ್ಕೆ ಸುದ್ದಿ ನೀಡಿದ್ದಾರೆ. ನಾನು ಸೇತುವೆ ಕೆಳಗೆ ಮೀನು ಹಿಡಿಯುತ್ತಿದ್ದ ಎಂಟನೇ ಪಿಲ್ಲರ್ ಮೇಲಿಂದ ನದಿಗೆ ಯಾರೋ ಜಿಗಿದಿದ್ದು ನನಗೆ ತಿಳಿಯಿತು. ನಾನು ರಕ್ಷಣೆಗೆ ಮಾಡಲು ಮುಂದಾಗುವದೊರಳಗೆ ಅವರು ನೀರಿನಲ್ಲಿ ಮುಳುಗಿ ಹೋಗಿದ್ದರೂ..ಈ ಮಾಹಿತಿಯನ್ನು ಕೋಸ್ಟ್ ಗಾರ್ಡ್ ಅಧಿಕಾರಿಗಳಿಗೆ ನಾನು ತಿಳಿಸಿದ್ದೆ ಎಂದು ಸ್ಪಷ್ಟ ಮಾಹಿತಿಯನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ. ಎನ್.ಡಿ.ಆರ್.ಎಫ್ ತಂಡ, ಗೃಹ ರಕ್ಷಣೆ ಮತ್ತು ಹೆಲಿಕಾಪ್ಟರ್ ರಕ್ಷಣಾ ತಂಡಗಳು ಭಾಗಿಯಾಗಿ ಸತತ ಗಂಟೆಗಳ ಕಾರ್ಯಾಚರಣೆಯೊಂದಿಗೆ ಸಿದ್ಧಾರ್ಥ ಅವರ ಮೃತ ದೇಹವನ್ನು ಇಂದು ಬೆಳಗ್ಗೆ ಪತ್ತೆ ಮಾಡಿ, ಹೊರತೆಗೆದು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.