ಯಾಕೆ ಒಳ್ಳೆಯವರ ಜೀವನದಲ್ಲಿ ಕೆಟ್ಟದಾಗುತ್ತದೆ ?

0
257

ಜೀವನ ಎಂದರೆ ಸುಖ -ದುಃಖಗಳ  ಸಮ್ಮಿಲನ. ಸುಖದ ದಿನಗಳು ಕಳೆಯೋದೇ ಗೊತ್ತಾಗಲ್ಲ. ಆದರೆ  ಯಾವಾಗ  ನಮ್ಮ  ಜೀವನದಲ್ಲಿ  ಕಷ್ಟದ ದಿನಗಳು ಎದುರಾಗುತ್ತದೋ …. ನಾವು   ಯೋಚಿಸುತ್ತೇವೆ .  ನಮ್ಮ  ಜೀವನದಲ್ಲೇ ಯಾಕೆ  ಹೀಗೆ  ಆಗುತ್ತಿದೆ   ಅಂತ . ದೇವರರನ್ನು  ಆಗ  ನಾವು  ತೆಗಳುತ್ತೇವೆ.  ಒಳ್ಳೇದನ್ನೇ  ಮಾಡಿದರೂ  ಏಕೆ   ನಮಗೇ  ಹೀಗೆ ? ಅಂತ.

ಅಂತಹ  ಗೊಂದಲಮಯ ಪ್ರಶ್ನೆಗೆ ಈ ಕೆಳಗಿನ ಎರಡು ನಿದರ್ಶನಗಳು ಸಮಂಜಸವೆನಿಸುತ್ತದೆ.

 ಮೊದಲಿಗೆ ಭಗವದ್ಗೀತೆಯ ಕಥೆ…  

ಒಂದು  ಊರಿನಲ್ಲಿ  ಒಬ್ಬ  ವ್ಯಾಪಾರಿ
 ಇದ್ದ.  ಆತ  ಶ್ರೀಕೃಷ್ಣನ
 ಪರಮ ಭಕ್ತ.  ದೈವಸ್ಮರಣೆ  ಮಾಡಿಯೇ  ದೈನಂದಿನ
  ಕೆಲಸಕ್ಕೆ
 ಮುಂದಾಗುತ್ತಿದ್ದ.  ಈತ ತನ್ನ 
ಸನ್ನಡತೆಯಿಂದಾಗಿ  ಊರಿನಲ್ಲಿ  ಪ್ರಸಿಧ್ಧನಾಗಿದ್ದನು.

     ಪ್ರಪಂಚದ ಸಕಲ ದುಷ್ಚಟಗಳನ್ನೂ  ಕಲಿತ , ಪರರನ್ನು ಹಿಂಸೆ  ಮಾಡುವ  ಗುಣ
 ಇರುವ 
ಒಬ್ಬ ನೀಚ  ಅದೇ   ಊರಿನಲ್ಲಿ
 ವಾಸವಾಗಿದ್ದನು. ಅವನಿಗಿದ್ದ ಒಂದೇ ಒಂದು  ಒಳ್ಳೆಯ  ಗುಣ
 ಎಂದರೆ  ನಿತ್ಯ  ಬೇಗನೇ
 ಎದ್ದು  ದೇವಸ್ಥಾನಕ್ಕೆ ಹೋಗುವುದು.  ದೇವರ  ದರ್ಶನ
ಆದ  ಮೇಲೆ  ಅಲ್ಲಿರುವ ಭಕ್ತರಚಪ್ಪಲಿಗಳನ್ನು ಕದ್ದು,  ಅವರನ್ನು  ಹಿಂಸಿಸಿ  ತನ್ನ  ಶೌರ್ಯ
 ಮೆರೆಯುತ್ತಿದ್ದನು. ಇದು ಅವನ ದಿನಚರಿ.

         ಒಂದು ದಿನ  ಜೋರಾಗಿ  ಮಳೆ
 ಸುರಿಯುತ್ತಿತ್ತು. ಹೀಗಾಗಿ ಯಾರೂ ಇರಲಿಲ್ಲ.   ಆಗ  ದುಷ್ಟವ್ಯಕ್ತಿ ದೇವಾಲಯಕ್ಕೆ ನುಗ್ಗಿದ. ಈ ಸಂದರ್ಭವನ್ನು
ದೇವರೇ  ಅವನಿಗಾಗಿ ನೀಡಿದ  ಸುಸಮಯ  ಎಂದು  ಸಂತೋಷಗೊಳ್ಳುತ್ತಾನೆ. ಅಲ್ಲದೆ  ಗೋಲಕದಲ್ಲಿದ್ದ ಹಣವನ್ನೆಲ್ಲಾ ದೋಚಿ  ಓಡಿತ್ತಾನೆ.

       ಇವ್ಯಾವುದರ ಪರಿವೆಯೇ ಇಲ್ಲದ ವ್ಯಾಪಾರಿ ,ಇದೇ ಸಮಯಕ್ಕೆ
ದೇವಾಲಯಕ್ಕೆ ಬರುತ್ತಾನೆ .  ಅದೇ ಸಮಯಯಕ್ಕೆ  ಅಷ್ಟರಲ್ಲಿ ಅಲ್ಲಿಗೆ  ಬಂದ ಜನರು  ವ್ಯಾಪಾರಿಯೇ ಕಳ್ಳ ಎಂದು ತಪ್ಪಾಗಿ  ಭಾವಿಸಿ ,ಅವನನ್ನು ಬಾಯಿಗೆ ಬಂದಂತೆ  ಬೈಯುತ್ತಾರೆ . ಇದರಿಂದ ನೊಂದ ವ್ಯಾಪಾರಿ ತಾನು ತಪ್ಪತಸ್ಥನಲ್ಲಾ
ಎಂದು ಪರಿಪರಿಯಾಗಿ ಕಾಡಿ- ಬೇಡಿ ಹೊರಬರುತ್ತಾನೆ.

       ವ್ಯಾಪಾರಿ  ಬೇಸರದಲ್ಲಿ ಬರುತ್ತಿರುವಾಗ ದಾರಿಯಲ್ಲಿ  ಒಂದು ಕಾರಿಗೆ  ಡಿಕ್ಕಿ ಹೊಡೆಯುತ್ತಾನೆ. ಆಗ ಅವನಿಗೆ  ಸಣ್ಣಪುಟ್ಟ ಗಾಯವಾಗುತ್ತದೆ. ಕಾರಿನಿಂದ  ಒಂದು ಬ್ಯಾಗ್ ಕೆಳಗೆ  ಬೀಳುತ್ತದೆ.  ಡೈವರ್ ಗಾಬರಿಯಿಂದ  ಬ್ಯಾಗನ್ನು ಅಲ್ಲಿಯೇ ಬಿಟ್ಟು   ಓಡುತ್ತಾನೆ.  ಅಲ್ಲೇ ಮೂಲೆಯಲ್ಲಿ ನಿಂತು ನೋಡಿತ್ತಿದ್ದ ದುಷ್ಟ  “ ಇಂದೇ ನನ್ನ  ಸುದಿನ”  ಅಂತ
ಕಿರುಚಿಕೊಂಡು ಬ್ಯಾಗನ್ನು ಎತ್ತಿಕೊಂಡು ಸಂತೋಷದಿಂದ ಓಡುತ್ತಾನೆ.

 ವ್ಯಾಪಾರಿಯನ್ನು ಈ
ಘಟನೆ  ಬೇಸರಗೊಳಿಸಿತು. ಅವನ ಇಂದಿನ ಸ್ಥಿತಿಗೆ ದೇವರೇ
ಕಾರಣ ಎನ್ನುತ್ತಾ ನಾಸ್ತಿಕನಾಗುತ್ತಾನೆ.

            ಒಮ್ಮೆ
 ಕನಸಿನಲ್ಲಿ ಬಂದ ಭಗವಂತ “ನೀನು ಮಾಡಿದ ಪುಣ್ಯ ಫಲದಿಂದ
ನೀನು ಇನ್ನೂ ಬದುಕಿದ್ದೀಯಾ?  ಅದೂ ಅಲ್ಲದೆ ಪೂರ್ವ
ಜನ್ಮದ ಪುಣ್ಯದ ಫಲದಿಂದ ನೀಚ , ಹಣ ಗಳಿಸುತ್ತಿದ್ದಾನೆ”  ಎನ್ನುತ್ತಾನೆ.

  ಆಗ ವ್ಯಾಪಾರಿಗೆ ನಾವು ಈ ದಿನ ಮಾಡುವ ಪುಣ್ಯದ ಫಲವೇ ಜನ್ಮ
ಜನ್ಮಂತರದಲ್ಲೂ ಕಾಯುತ್ತದೆ ಎಂಬ  ಅರಿವು ಮೂಡುತ್ತದೆ.
ಹಾಗಾಗಿ ಇರುವ ಭಾಗ್ಯವನ್ನು ನಾವು ಸದಾ ನೆನೆದು ಒಳ್ಳೆಯ ಕಾರ್ಯ ಮಾಡಿದಾಗ , ಭಗವಂತನ ಅನುಗ್ರಹಕ್ಕೆ
ನಾವು ಪಾತ್ರರಾಗುತ್ತೇವೆ  ಎಂಬ ನೀತಿಯನ್ನು ಈ ಕಥೆ
ತಿಳಿಸುತ್ತದೆ.

 ರಾಮಕೃಷ್ಣಪರಮಹಂಸರು ಹಾಗೂ ವಿವೇಕಾನಂದರ ಸಂಭಾಷಣೆ

ಪರಮಹಂಸರಂಥಾ ಗುರುವನ್ನು ಪಡೆದ ವಿವೇಕಾನಂದರು ಧನ್ಯರೋ ಅಥವಾ ವಿವೇಕಾನಂದರಂಥ  ಶಿಷ್ಯರನ್ನು ಪಡೆದ ಪರಮಹಂಸರು ಧನ್ಯರೋ ?  ಇಲ್ಲ ಇವರಿಬ್ಬರನ್ನೂ ಪಡೆದ  ಭಾರತೀಯರಾದ ನಾವು  ಧನ್ಯ.                          

 ವಿವೇಕಾನಂದರು , ಒಳ್ಳೆಯವರಿಗೇ
ಏಕೆ ಕೆಡಕಾಗುತ್ತದೆ ? :  ಕಷ್ಟಗಳು ಒಳ್ಳೆಯದೇ ?  ಕಠಿಣ ಪರಿಸ್ಥಿತಿಗಳನ್ನು ಎದುರಿಸುವುದು
ಹೇಗೆ ? ಅಸಫಲತೆಯು  ದುಃಖ  ನೀಡುವುದಿಲ್ಲವೇ ? ಎಂದು ರಾಮಕೃಷ್ಣರನ್ನು ಪ್ರಶ್ನಿಸುತ್ತಾರೆ.
ಅದಕ್ಕೆ ಉತ್ತರವಾಗಿ ರಾಮಕೃಷ್ಣ ಪರಮಹಂಸರು ಹೀಗೆ ಹೇಳುತ್ತಾರೆ.

           ವಜ್ರವು  ಸಂಘರ್ಷ
ಇಲ್ಲದೆ  ಹೊಳೆಯುವುದಿಲ್ಲ. ಚಿನ್ನವು  ಕರಗದೆ  ಹೊಳೆಯುವುದಿಲ್ಲ.
ಹಾಗೇ ಒಳ್ಳೆಯ ಜನರು ದುಃಖವನ್ನು ಭೋಗಿಸುವುದಿಲ್ಲ. ಅವರು ಭಗವಂತನಿಗೆ ಪರೀಕ್ಷೆ ನೀಡುತ್ತಾರೆ. ಇದು
 ಜೀವನದ  ನಿಯಮವಾಗಿದೆ. 
ಈ  ದುಃಖಗಳು ಜನರನ್ನು ಒಳ್ಳೆಯವರನ್ನಾಗಿಸುತ್ತದೆ.

              ಹಾಗೇ ಕಷ್ಟಗಳು  ಜೀವನದಲ್ಲಿ 
ಪರೀಕ್ಷೆ  ಇದ್ದಂತೆ.  ಇವು  ನಮಗೆ
 ಪಾಠ  ಕಲಿಸುವುದಕ್ಕಾಗಿಯೇ ಎದುರಾಗುತ್ತದೆ ಎನ್ನುತ್ತಾರೆ.

            ಕಣ್ಣುಗಳು ಕೇವಲ ದೃಶ್ಯವನ್ನು ನೋಡುತ್ತದೆ,
ಮನಸ್ಸು ದಾರಿಯನ್ನು ತೋರಿಸುತ್ತಾ ಹೋಗುತ್ತದೆ.  ಹಾಗಾಗಿ
 ಕಷ್ಟಗಳಿಗೆ  ಪರಿಹಾರ ನಮ್ಮಲ್ಲೇ ಇರುತ್ತದೆ. ಅದನ್ನು ಸಫಲವಾಗಿ ನಿಭಾಯಿಸು
ಸಾಮರ್ಥ್ಯ ನಮ್ಮಲ್ಲಿಯೇ ಇರುತ್ತದೆ ಎನ್ನುತ್ತಾರೆ.

            ಎಷ್ಟು ದೂರ ಬಂದಿದ್ದೀರಾ ? ಅಂತ ಮಾತ್ರ ನೋಡಿ. ಎಷ್ಟು ದೂರ
ಹೋಗಬೇಕು ಅಂತ ಯೋಚಿಸಬೇಡಿ. ದೇವರು  ನಮಗೆ  ಕೊಟ್ಟಿರುವುದರ ಬಗ್ಗೆ  ಮಾತ್ರ ಯೋಚಿಸಿ ,  ಕೊಡದಿರುವುದರ  ಬಗ್ಗೆ  ಚಿಂತಿಸಬೇಡಿ
. ಈ ಎಲ್ಲಾ ಅನುಭವವನ್ನು ನಿಭಾಯಿಸಿ ಗೆದ್ದವನ್ನು ಕೊನೆಯಲ್ಲಿ” ಒಳ್ಳೆಯವನು” ಎಂಬ ಹೆಸರು ಪಡೆಯುತ್ತಾನೆ.

 ಎಷ್ಟು ಸತ್ಯ ಅಲ್ಲವೆ
, ಕಷ್ಟ ಬಂದಾಗ ವೆಂಕಟರಮಣ ಎನ್ನುವ ಜನ ಸುಖದಲ್ಲಿ ಯಾವುದರ ಪರಿವೆಯೂ ಇರದೆ ಬದುಕು ಸವಿಸುತ್ತಾನೆ.
ಹೀಗಾಗದೆ ಕಷ್ಟ ಸುಖ ಎರಡನ್ನೂ ಸಮಾನವಾಗಿ ಎದುರಿಸುವ ಮನಃಸ್ಥೈರ್ಯ ಬೆಳೆಸಿಕೊಳ್ಳಬೇಕು. ಇದನ್ನೇ ನಮ್ಮ
ಭಗದ್ಗೀತೆಯಲ್ಲಿ ಕೃಷ್ಣ , ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರು ತಿಳಿಸಲು ಇಚ್ಚಿಸಿರುವುದು.

LEAVE A REPLY

Please enter your comment!
Please enter your name here