ಯೌವ್ವನ ಚಿಗುರೊಡೆದಾಗ ಲೈಂಗಿಕ ಜೀವನದ ಬಗೆಗೆ ಆತಂಕ ಸಾಮಾನ್ಯವಾಗಿರುತ್ತದೆ. ಮುಜುಗರ ಗಂಡು-ಹೆಣ್ಣಿನ ಮಿಲನಕ್ಕೆ ಅಂಜಿಕೆಯನ್ನು ಉಂಟುಮಾಡುವುದರಿಂದ ವಿಚ್ಛೇದನದ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಅಂಶವಾಗಿದೆ.
ಇತ್ತೀಚೆಗೆ ನಡೆದ ಅಧ್ಯಯನದ ಪ್ರಕಾರ ಲೈಂಗಿಕ ಜೀವನ ಉತ್ತಮವಾಗಿದ್ದರೆ ಸಂಸಾರ ನೆಮ್ಮದಿಯಿಂದ ಇರುತ್ತದೆ ಎಂದು ತಿಳಿದುಬಂದಿದೆ.
ಯುವಕ-ಯುವತಿಯರು ಪ್ರೀತಿಯ ಮೋಹದಲ್ಲಿ ಸಿಲುಕಿದರೂ ತದನಂತರ ಜೀವನದಲ್ಲಿ ಕ್ಷುಲ್ಲಕ ಕಾರಣ ಮನಸ್ತಾಪಕ್ಕೆ, ಒಳಗಾಗಿ ದೂರಾಗುವುದು ಹೆಚ್ಚಾಗಿದೆ.
ಪ್ರಕೃತಿಯಲ್ಲಿನ ನೈಸರ್ಗಿಕ ಕ್ರಿಯೆಯಲ್ಲಿ ಒಂದಾದ ಲೈಂಗಿಕ ಜೀವನದ ಪ್ರಕ್ರಿಯೆಯು ಸಾಕಷ್ಟು ಲಾಭದಾಯಕವಾಗಿತ್ತು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಲೈಂಗಿಕ ಕ್ರಿಯೆಯ ವೇಳೆ ದೇಹದ ಮಾನಸಿಕ ಹಾಗೂ ದೈಹಿಕ ಒತ್ತಡಗಳು ಕ್ರಮೇಣವಾಗಿ ನಿವಾರಣೆಯಾಗುವುದು, ಎಂದು ದಂಪತಿಗಳ ಅಧ್ಯಯನದಿಂದ ತಿಳಿದುಬಂದಿದೆ.
ಲೈಂಗಿಕ ಕ್ರಿಯೆಯನ್ನು ವಾರದಲ್ಲಿ ಕನಿಷ್ಠ ಮೂರರಿಂದ ಗರಿಷ್ಠ ಐದು ಬಾರಿ ಮಾಡಿದರೆ ಒಳಿತು. ಅತಿ ಹೆಚ್ಚಾದರೆ ಕೆಲವರಲ್ಲಿ ಪೋಷಕಾಂಶದ ಸಮಸ್ಯೆಯಿಂದ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಲೈಂಗಿಕ ಪ್ರಕ್ರಿಯೆ ವೇಳೆ ಅಸಹ್ಯದ ಮನೋಭಾವ ತಾಳಿ ಸಂಭೋಗದಿಂದ ದೂರವುಳಿದರೆ ನಷ್ಟವಾಗುವುದು ಖಂಡಿತ ತಪ್ಪಿದ್ದಲ್ಲ.