ಮಳೆಗಾಲದಲ್ಲಿ ಉಂಟಾಗುವ ಜ್ವರದಿಂದ ಪಾರಾಗಲು ಇಲ್ಲಿದೆ ಸುಲಭ ಟಿಪ್ಸ್..!

0
203

ಮಳೆಗಾಲ ಬಂದರೆ ಸಾಕು ಹಲವು ರೋಗಗಳು ನಮ್ಮನ್ನು ಕಾಡುತ್ತದೆ.ಮಳೆ ಬರುವುದರ ಜೊತೆಗೆ ಅನೇಕ ತೊಂದರೆಗಳನ್ನು ಹೊತ್ತು ತರುತ್ತದೆ ಎನ್ನಬಹುದು. ಮಳೆಗಾಲದಲ್ಲಿ ಜ್ವರ, ಕೆಮ್ಮು, ಶೀತ,ನೆಗಡಿ, ಕಾಲುನೋವು, ಮಂಡಿನೋವು, ಡೆಂಗಿ, ಮಲೇರಿಯಾ ಇನ್ನೂ ಮುಂತಾದ ಕಾಯಿಲೆ ಆವರಿಸುತ್ತದೆ.ಹಾಗಾಗಿ ಈ ರೋಗಗಳಿಂದ ಮುನ್ನೆಚ್ಚರಿಕೆ ವಹಿಸಲು ಇಲ್ಲಿದೆ ಕೆಲ ಸರಳ ಟಿಪ್ಸ್ ಅನುಸರಿಸಿ,
೧.ಬಿಸಿ ಹಾಲಿಗೆ ಅರಿಶಿನ ಪುಡಿ ಬೆರೆಸಿ ಕುಡಿಯುವುದರಿಂದ ವೈರಲ್ ಜ್ವರ ನಿಯಂತ್ರಣವಾಗುತ್ತದೆ.
೨.ಗಂಟಲು ನೋವು, ಗಂಟಲು ಸೋಂಕು ಸಮಸ್ಯೆ ಕಾಡುತ್ತಿದ್ದರೆ, ಬಿಸಿ ನೀರಿಗೆ ಉಪ್ಪು ಬೆರೆಸಿ ಗಂಟಲಿನಲ್ಲಿ ಗಾಗಲ್ ಮಾಡುವುದರಿಂದ ಗಂಟಲು ನೋವೂ ಕಡಿಮೆಯಾಗಲಿದೆ.
೩.ಶುಂಠಿ ಕಷಾಯ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
೪.ನೈಸರ್ಗಿಕ ಪದಾರ್ಥಗಳನ್ನು ಹೆಚ್ಚು ಸೇವನೆ ಮಾಡುವುದು ಸೂಕ್ತ.ಇದರಿಂದ ದೇಹದಲ್ಲಿ ಉಂಟಾಗುವ ಅನೇಕ ರೋಗಗಳು ನಿಯಂತ್ರಣದಲ್ಲಿರುತ್ತದೆ.

LEAVE A REPLY

Please enter your comment!
Please enter your name here