ಮಲಗುವ ಶೈಲಿಯಿಂದ ದೇಹದ ಬೊಜ್ಜು ನಿವಾರಿಸಿಕೊಳ್ಳಬಹುದು..! ಹೇಗೆ ಗೊತ್ತಾ.??

0
241

ಇಂದು ಸಾಮಾನ್ಯವಾಗಿ ಬಹುತೇಕ ಜನರು ಬೊಜ್ಜು ಅಥವಾ ಅತಿಯಾದ
ತೂಕದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅದಕ್ಕಾಗಿ ತೂಕ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಸಾಕಷ್ಟು
ತಂತ್ರಗಳನ್ನು ಬಳಸುತ್ತಾರೆ. ಡಯಟ್‍ ಮಾಡುವುದು, ಜಿಮ್‍ಗೆ ಹೋಗುವುದು, ಊಟವನ್ನು ಸರಿಯಾದ ಸಮಯಕ್ಕೆ
ತೆಗೆದುಕೊಳ್ಳದೇ ಇರುವುದು ಹೀಗೆ ನಾನಾ ರೀತಿಯ ಕಸರತ್ತನ್ನು ಮಾಡುತ್ತಿರುತ್ತಾರೆ.

ದಪ್ಪವಾಗಿದ್ದೇನೆ ಎಂಬ ಕಾರಣಕ್ಕಾಗಿ ನಾಲ್ಕು ಜನರ ಮುಂದೆ ಧೈರ್ಯವಾಗಿ
ಮಾತನಾಡುವುದು ಕಷ್ಟವಾಗುತ್ತದೆ. ಇದೇ ಕಾರಣಕ್ಕಾಗಿ ಸಾಕಷ್ಟು ಜನರು ಖಿನ್ನತೆಗೆ ಒಳಗಾಗುತ್ತಾರೆ. ಅವರಿಗೇ
ತಿಳಿಯದೇ ಅವರಿಗೊಂದು ಜಿಗುಪ್ಸೆ ಕಾಡುತ್ತಿರುತ್ತದೆ. ಆದರೆ ಎರಡು ಸರಳವಾದ ಮಾರ್ಗಗಳನ್ನು ಅನುಸರಿಸುವ
ಮೂಲಕ ನಮ್ಮ ದೇಹದ ಬೊಜ್ಜನ್ನು ಕರಗಿಸಿಕೊಳ್ಳಬಹುದು.

ಒಂದು ನಿದ್ರೆ ಮಾಡುವಾಗ ಮತ್ತೊಂದು ವ್ಯಾಯಾಮ ಮಾಡುವ ವೇಳೆ
ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಅವಕಾಶವಿದೆ. ಮಲಗುವ ಮುನ್ನಾ ನಮ್ಮ ದೇಹದ ಕೊಬ್ಬನ್ನು
ಕರಗಿಸಲು ನಾವೊಂದು ಸರಳ ಉಪಾಯವೊಂದನ್ನು ದೀರ್ಘ ಅವಧಿಯವರೆಗೆ ಮಾಡಬೇಕಾಗುತ್ತದೆ. ಪ್ರತಿದಿನ ರಾತ್ರಿ
ಊಟ ಮಾಡಿದ ನಂತರ, ನಿಮ್ಮ ದೇಹದ ಕೊಬ್ಬನ್ನು ಕರಗಿಸಬೇಕೆಂದರೆ ಈ ರೀತಿ ಮಾಡಿದರೆ, ದೇಹದ ಕೊಬ್ಬನ್ನು
ಕರಗಿಸಿಕೊಳ್ಳಬಹುದು.

ಸಾಮಾನ್ಯವಾಗಿ ಒಬ್ಬ ಮನುಷ್ಯ ರಾತ್ರಿ ನಿದ್ರೆ ಮಾಡುತ್ತಾ,
800 ಗ್ರಾಂನಿಂದ 1 ಕೆಜಿವರೆಗೆ ತೂಕವನ್ನು ಇಳಿಸಿಕೊಳ್ಳಬಹುದು. ಅದಕ್ಕಾಗಿ ಮಾಡಬೇಕಿರುವುದು ಇಷ್ಟೇ.
ತೂಕ ಕಡಿಮೆ ಮಾಡುವ ಸಲುವಾಗಿ ಫ್ಯಾಟ್‍ ಬರ್ನಿಂಗ್‍ ಪೌಡರ್‍ ಅನ್ನು ಮನೆಯಲ್ಲೇ ತಯಾರು ಮಾಡುವುದು ಹೇಗೆ
ಎಂಬುದನ್ನು ನಾವಿಲ್ಲಿ ಹೇಳುತ್ತೇವೆ. ನೀವೂ ಪ್ರಯತ್ನ ಮಾಡಿ.

ತೂಕ ಕಡಿಮೆ ಮಾಡಲು ಸಹಕಾರಿಯಾಗುವ ಪುಡಿಯನ್ನು ತಯಾರಿಸಲು ಬೇಕಾದ
ಪದಾರ್ಥಗಳು:

ಸೋಂಪು, ಅರಿಶಿನ, ಅಗಸೆ ಬೀಜಗಳು, ಜೀರಿಗೆ, ಕರಿಬೇವಿನಸೊಪ್ಪು,
ಹಳಲೆ ಕಾಯಿ, ಸೋಡಾ ಉಪ್ಪು, ಇಂಗು. ಈ ಎಲ್ಲಾ ಪದಾರ್ಥಗಳಲ್ಲಿ ದೇಹದ ಕೊಬ್ಬನ್ನು ಕರಗಿಸುವ ಸಾಮರ್ಥ್ಯವಿದೆ.
ಹಳಲೆ ಕಾಯಿ ದೇಹದ ಜೀರ್ಣ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ. ಹೆಚ್ಚು ಜಂಗ್‍ ಫುಡ್‍ ಮತ್ತು ರೆಡಿ
ಟು ಈಟ್‍ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುವವರು ಈ ಹಳಲೆ ಕಾಯಿಯನ್ನು ತಿನ್ನಬೇಕು.

25 ಗ್ರಾಂ ಅಗಸೆ ಬೀಜ, ಸೋಂಪು ಮತ್ತು ಜೀರಿಗೆಯನ್ನು ಚೆನ್ನಾಗಿ
25-30 ನಿಮಿಷಗಳ ಕಾಲ ಚೆನ್ನಾಗಿ ಹುರಿದುಕೊಳ್ಳಿ. ಆರಿದ ನಂತರ ಇವೆಲ್ಲವನ್ನೂ ಮಿಕ್ಸಿ ಮಾಡಿಟ್ಟುಕೊಳ್ಳಿ.
ಈ ಪೌಡರ್‍ಗೆ 20 ಗ್ರಾಂ ಹರಳೆ ಪುಡಿ, 1 ಚಮಚ ಅರಿಶಿನ ಮತ್ತು ½ ಚಮಚ ಸೋಡಾವನ್ನು ಬೆರೆಸಿ. ಸೋಡಾ ಇಲ್ಲದಿದ್ದರೆ,
ಕಪ್ಪುಪ್ಪನ್ನು ಕೂಡ ಬಳಸಬಹುದು. ಇದಾದ ನಂತರ 20 ಗ್ರಾಂ ಕರಿಬೇವಿನ ಸೊಪ್ಪು ಮತ್ತು ಇಂಗನ್ನು ಹಾಕಿ
ಚೆನ್ನಾಗಿ ಮಿಶ್ರಣ ಮಾಡಿ.

ಈ ಪೌಡರ್‍ ನಿಮ್ಮ ದೇಹದಲ್ಲಿರುವ ಕೆಟ್ಟ ಕೊಬ್ಬನ್ನು ಕರಗಿಸಲು
ಸಹಾಯ ಮಾಡುತ್ತದೆ. ಈ ಪುಡಿಯನ್ನು ರಾತ್ರಿ ಊಟವಾದ ನಂತರ ಮಲಗುವುದಕ್ಕೆ 1 ಗಂಟೆ ಮುನ್ನಾ ಬಿಸಿ ನೀರಿನಲ್ಲಿ
ತೆಗೆದುಕೊಳ್ಳಿ. ಫಲಿತಾಂಶ ಬೇಗ ಬೇಕೆನಿಸಿದರೆ, ಪ್ರತಿದಿನ 3 ಬಾರಿ ತಿಂಡಿ-ಊಟವಾದ ನಂತರ ಪ್ರತಿದಿನ
ಸೇವನೆ ಮಾಡಬಹುದು. ಪ್ರತಿ ಬಾರಿಯೂ 1 ಚಮಚದಷ್ಟು ಪುಡಿಯನ್ನು ಮಾತ್ರ ತೆಗೆದುಕೊಳ್ಳಬೇಕಾಗುತ್ತದೆ.

ದೇಹದ ತೂಕ ಇಳಿಸಿಕೊಳ್ಳುವ ಜೊತೆಗೆ ತಲೆಕೂದಲು ಉದುರುವ ಸಮಸ್ಯೆ
ಇರುವವರು ಕೂಡ ಈ ಪುಡಿಯನ್ನು ತೆಗೆದುಕೊಳ್ಳಬಹುದು. ಈ ಪುಡಿಯನ್ನು ತಿನ್ನುವಷ್ಟು ಕಾಲ ಫಾಸ್ಟ್‍ಪುಡ್‍
ಅನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಒಂದು ಕಡೆ ಕೊಬ್ಬನ್ನು ಸಂಗ್ರಹ ಮಾಡುವ ಆಹಾರ ಸೇವನೆ
ಮಾಡುವುದರಿಂದ ಪುಡಿ ದೇಹದಲ್ಲಿ ಯಾವುದೇ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಈ ಪುಡಿಯನ್ನು ಕನಿಷ್ಠ
1 ತಿಂಗಳು ತೆಗೆದುಕೊಳ್ಳುವುದರಿಂದ ಪರಿಣಾಮ ನಿಮಗೇ ತಿಳಿಯುತ್ತದೆ

LEAVE A REPLY

Please enter your comment!
Please enter your name here