ಮದುವೆಗೂ ಮುನ್ನ ಪಾಪು ಬೇಕು ಎಂದ ಸ್ಟಾರ್ ನಟಿ ಯಾರು ಗೊತ್ತಾ ..?

0
198

ಮದುವೆಗೆ ಮುನ್ನ ಮಗುವನ್ನು ಹೆರುತ್ತೇನೆ ಎಂದು ಹೇಳುವುದರ ಮೂಲಕ ಹೊಸ ಸಂಚಲನ ಉಂಟು ಮಾಡಿದ್ದಾಳೆ ಲವ್ಲಿ ಗರ್ಲ್ ಶ್ರುತಿ ಹಾಸನ್. ಅಪ್ಪ ಕಮಲ್ ಹಾಸನ್ ಕಂಡ್ರೆ ಅತಿಯಾಗಿ ಇಷ್ಟ ಪಡುವ ಈಕೆ, ಆತನ ಹಾದಿಯಲ್ಲೆ ನಡೆದು ಚಿತ್ರರಂಗದಲ್ಲಿ ತನಗೊಂದು ಸ್ಥಾನ ಪಡೆದಿದ್ದಾಳೆ. ತಂದೆಯ ಈ ಆದರ್ಶ ಬದುಕನ್ನು ಇನ್ನು ವಿಸ್ತರಿಸುವ ಉದ್ದೇಶ ಹೊಂದಿರುವಂತಿದೆ ಈ ಚೆಲುವೆಗೆ..

ಈಗ ಈಕೆ ತನ್ನ ತಂದೆಯಂತೆ ಮದುವೆ ಇಲ್ಲದೇ ಮಗುವನ್ನು ಹೆರುವ ಯೋಚನೆ ಮಾಡಿ ಇಡೀ ಚಿತ್ರರಂಗ ಆಕೆಯತ್ತ ನೋಡುವಂತೆ ಮಾಡಿದ್ದಾಳೆ. ತನ್ನ ತಾಯಿತಂದೆ ದಂಪತಿಗಳಾಗಿ ಅತ್ಯುತ್ತಮ ಜೋಡಿ.. ಆಗ ನಾವು ತುಂಬಾ ಖುಷಿಯಾಗಿ ಕಾಲ ಕಳೆದಿದ್ದೆವು ಎನ್ನುವ ಮಾತು ಹೇಳಿದ್ದಾಳೆ ಈ ಸುಂದರಿ.
ಅಷ್ಟೇ ಅಲ್ಲದೆ ತನ್ನ ತಾಯಿತಂದೆಯಂತೆ ಮದುವೆಗೆ ಮುನ್ನ ಮಗುವನ್ನು ಹೆರುವ ಆಲೋಚನೆಯೂ ಇರುವ ಬಗ್ಗೆ ಮಾಧ್ಯಮದ ಮುಂದೆ ವ್ಯಕ್ತ ಪಡಿಸಿದ್ದಾಳೆ.

ಆಕೆ ಹೇಳಿದ ಮಾತುಗಳು ಈಗ ಮಾಧ್ಯಮದಲ್ಲಿ ಸುದ್ದಿಯಾಗಿ ಸದ್ದು ಮಾಡುತ್ತಿದೆ. ಸಾರಿಕಾ ಮದುವೆಗೆ ಮುನ್ನ ಗರ್ಭಿಣಿ ಆದ ಬಳಿಕ ತಾನು ತಂದೆ ಆಗುತ್ತಿರುವುದಾಗಿ ಮಾಧ್ಯಮದ ಮುಂದೆ ಹೇಳಿದ್ದರು ಕಮಲ್.

ಶ್ರುತಿ ಮತ್ತು ಅಕ್ಷರ ಹಾಸನ್ ಗೆ ಜನ್ಮ ನೀಡಿರುವ ಕಮಲ್ ಸಾರಿಕಾ ದಂಪತಿಗಳ ನಡುವೆ ಸ್ವಲ್ಪ ಕಾಲದ ನಂತರ ಉಂಟಾದ ಭೇದವು ಅವರಿಬ್ಬರೂ ಬೇರೆ ಆಗುವಂತೆ ಮಾಡಿತ್ತು. ಈಗ ಆಕೆ ಮುಂಬೈನಲ್ಲಿ ವಾಸ ಮಾಡುತ್ತಿದ್ದಾರೆ. ಚಿಕ್ಕ ಮಗಳು ಅಕ್ಷರ ಹಾಸನ್ ಆಕೆಯ ಜೊತೆಯಲ್ಲಿ ವಾಸ ಮಾಡುತ್ತಿದ್ದಾಳೆ. ಶ್ರುತಿ ಒಂಟಿಯಾಗಿ ವಾಸ ಮಾಡುತ್ತಿದ್ದಾಳೆ.

LEAVE A REPLY

Please enter your comment!
Please enter your name here