‘ಚೆಕ್ಕ ಚಿವಂತ ವಾನಮ್’ ಸಕ್ಸ್ಸ್ ನಲ್ಲಿರುವ ನಿರ್ದೇಶಕ ಮಣಿರತ್ನಂ ಇದೀಗ ತಮ್ಮ ಕನಸಿನ ಕೂಸು ‘ಪೊನ್ನಿಯಿನ್ ಸೆಲ್ವನ್’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ನಟಿಸೋದು ಪಕ್ಕಾ ಆಗಿದೆ.
ತಮಿಳಿನ ಬ್ಲಾಕ್ ಬಸ್ಟರ್ ಮೂವಿ ‘ದಳಪತಿ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಕ್ರಿಯೇಟಿವ್ ಡೈರೆಕ್ಟರ್ ಮಣಿರತ್ನಂ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಈಗ ಮತ್ತೊಮ್ಮೆ ಜೋಡಿಯಾಗಿ ಮತ್ತೊಂದು ಹಿಟ್ ಕೊಡಲು ಸಜ್ಜಾಗಿದ್ದಾರೆ!
ಇನ್ನು ಈ ಚಿತ್ರವನ್ನು ಲೈಕಾ ಸಂಸ್ಥೆ ಚಿತ್ರವನ್ನು ನರ್ಮಾಣ ಮಾಡಲಿದ್ದು ಬಹು ಭಾಷೆಯಲ್ಲಿ ತೆರೆಗೆ ಬರಲಿದೆ.
ಬಹು ತಾರಾಗಣದ ಚಿತ್ರ ಇದಾಗಿದ್ದು, ಅಮಿತಾಬ್ ಬಚ್ಚನ್, ವಿಕ್ರಮ್, ಐಶ್ವರ್ಯ ರೈ, ಕಾರ್ತಿ, ಜಯಂ ರವಿ, ಮೋಹನ್ ಬಾಬು, ಕೀರ್ತಿ ಸುರೇಶ್ ಸೇರಿದಂತೆ ಹಲವರು ನಟಿಸಲಿದ್ದಾರೆ. ಸದ್ಯ ಚಿತ್ರಕ್ಕೆ ಎಂಟ್ರಿಕೊಡೋದರ ಬಗ್ಗೆ ಸ್ವತಃ ರಜಿನಿಕಾಂತ್ ಹೇಳಿಕೊಂಡಿದ್ದಾರೆ. ಸದ್ಯ ‘ದರ್ಬಾರ್’ ಚಿತ್ರೀಕರಣದಲ್ಲಿರುವ ರಜಿನಿಕಾಂತ್ , ‘ಪೊನ್ನಿಯಿನ್ ಸೆಲ್ವನ್’ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ