ಭಾರತದ ಕೋಚ್ ಆಗಬೇಕಾದರೆ ಈ ಅರ್ಹತೆ ಹೊಂದಿರಬೇಕು..!

0
213

ವಿಶ್ವಕಪ್ ಟೂರ್ನಿಯ ನಂತರ ಟೀಮ್ ಇಂಡಿಯಾದಲ್ಲಿ ಮೇಜರ್ ಸರ್ಜರಿಗೆ ಮುಂದಾಗಿರುವ ಬಿಸಿಸಿಐ ಭಾರತ ತಂಡದ ಮುಖ್ಯ ಕೋಚ್ ಸೇರಿದಂತೆ ಸಹಾಯಕ ಸಿಬ್ಬಂದಿ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿರುವ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಮೂರು ಹೊಸ ನಿಯಮಗಳನ್ನು ಜಾರಿಗೆ ಸೇರ್ಪಡೆಗೊಳಿಸಿದೆ.

ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು 60 ವರ್ಷ ಕೆಳಗಿನವರಾಗಿರಬೇಕು. ಕನಿಷ್ಠ 2 ವರ್ಷ ಕೋಚ್ ಆಗಿ ಅನುಭವ ಹೊಂದಿರಬೇಕು ಹಾಗೂ ಟೆಸ್ಟ್ ತಂಡಗಳಲ್ಲಿ ಕಾರ್ಯ ನಿರ್ವಹಿಸಿರಬೇಕು ಎಂಬ ಹೊಸ ಮೂರು ನಿಯಮಗಳನ್ನು ಬಿಸಿಸಿಐ ಸೇರಿಸಿದೆ. ನೂತನ ನಿಯಮಗಳು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್‍ಗಳಿಗೂ ಅನ್ವಯವಾಗಲಿದೆ. ಇನ್ನು ರವಿಶಾಸ್ತ್ರಿ ಅವರ ಗುತ್ತಿಗೆ ಅವಧಿ ಮುಂದಿನ ತಿಂಗಳು ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ನಂತರ ಅಂತ್ಯಗೊಳ್ಳಲಿದೆ.

ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಟೆಸ್ಟ್ ತಂಡದ ಕೋಚ್ ಆಗಿ ಕನಿಷ್ಠ 2 ವರ್ಷ ಸೇವೆ ಸಲ್ಲಿಸಿರಬೇಕು. `ಎ’ ತಂಡದ ಅಥವಾ ಐಪಿಎಲ್ ತಂಡಗಳಲ್ಲಿ ಕನಿಷ್ಠ 3 ವರ್ಷ ಇರಬೇಕು. ಕನಿಷ್ಠ 30 ಟೆಸ್ಟ್ ಹಾಗೂ 50 ಏಕದಿನ ಪಂದ್ಯಗಳನ್ನು ಆಡಿರಬೇಕು.

LEAVE A REPLY

Please enter your comment!
Please enter your name here