ಪ್ರತಿ ವರ್ಷಗಳು ಕಳೆದಂತೆ , ನೀರಿನ ಪ್ರಮಾಣ ಕಡಿಮೆ ಆಗುತ್ತಿರುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇದರ ನಿರ್ಲಕ್ಷ ಧೋರಣೆಗಳಿಂದ ಭವಿಷ್ಯದಲ್ಲಿ ಆಹಾರ ಸಾಮಾಗ್ರಿಗಳ ಉತ್ಪಾದನೆಗೆ ಜೀವಿಗಳಿಗೆ ಕುಡಿಯಲು ನೀರಿನ ಅಭಾವ ಉಂಟಾಗುವುದು, ಸತ್ಯವಾಗಿದೆ . ಇದರ ಬಗೆಗೆ ಅನೇಕ ವಿಜ್ಞಾನಿಗಳು ತಿಳಿಸಿದ್ದರು. ಜನರಲ್ಲಿ ಜಾಗೃತಿ ಮೂಡಿಲ್ಲ. ಈಗಾಗಲೇ ಹಲವು ಪ್ರದೇಶಗಳಲ್ಲಿ ಕ್ಷಾಮ ಆವರಿಸಿದೆ. ಮಳೆಯು ಕ್ರಮೇಣ ಕುಸಿಯುತ್ತಿದ್ದು , ನೀರಿನ ಸಂಗ್ರಹಣೆ ಕಡಿಮೆ ಇರುವ ಕಾರಣ ನೀರು ಸಮುದ್ರದ ಪಾಲಾಗುತ್ತಿದೆ. ಕೆರೆಗಳ ನಾಶ ಇದಕ್ಕೆ ಶಾಪವಾಗಿ ಪರಿಣಮಿಸಿದೆ. ಅಂತರ್ಜಲ ಕುಸಿಯುವಿಕೆ ಯನ್ನು ತಡೆಗಟ್ಟಲು ಶ್ರೀಸಾಮಾನ್ಯರು ಸರ್ಕಾರವು ಹೆಚ್ಚು ಯೋಜನೆಗಳನ್ನು ರೂಪಿಸುವುದು ಕರ್ತವ್ಯ ವಾಗಿರುವುದನ್ನು ಪ್ರತಿಯೊಬ್ಬರು ಅರಿಯಬೇಕಾಗಿದೆ.
ಹಾರಂಗಿ ಜಲಾಶಯ
- ಗರಿಷ್ಠ ನೀರಿನ ಮಟ್ಟ- 2,859 ಅಡಿಗಳು.
- ಇಂದಿನ ನೀರಿನ ಮಟ್ಟ- 2827.56 ಅಡಿಗಳು.
- ಕಳೆದ ವರ್ಷ ಇದೇ ದಿನ- 2857.41 ಅಡಿಗಳು.
- ಹಾರಂಗಿಯಲ್ಲಿ ಬಿದ್ದ ಮಳೆ- 4.20 ಮಿ.ಮೀಗಳು.
- ಕಳೆದ ವರ್ಷ ಇದೇ ದಿನ -18.20 ಮಿ.ಮೀಗಳು.
- ಇಂದಿನ ನೀರಿನ ಒಳ ಹರಿವು- 1748 ಕ್ಯುಸೆಕ್.
- ಕಳೆದ ವರ್ಷ ಇದೇ ದಿನ ನೀರಿನ ಒಳ ಹರಿವು- 11067 ಕ್ಯೂಸೆಕ್.
*ಇಂದಿನ ನೀರಿನ ಹೊರ ಹರಿವು- ನದಿಗೆ 30 ಕ್ಯೂಸೆಕ್. - ನಾಲೆಗೆ 500 ಕ್ಯೂಸೆಕ್.
*ಕಳೆದ ವರ್ಷ ಇದೇ ದಿನ ನದಿಗೆ- 8600, ನಾಲೆಗೆ 868 ಕ್ಯೂಸೆಕ್
ಕಬಿನಿ ಜಲಾಶಯ.
- ಇಂದಿನ ಮಟ್ಟ – 72.11 ಅಡಿ.
- ಕಳೆದ ವರ್ಷ ಇದೇ ದಿನ – 83.00 ಅಡಿ.
- ಒಳ ಹರಿವು – 10468 ಕ್ಯೂ.
- ಹೊರಹರಿವು – 5000 ಕ್ಯೂ.
ಕೆ.ಆರ್.ಸಾಗರ
- ನೀರಿನ ಮಟ್ಟ – 87.75 ಅಡಿ
- ಗರಿಷ್ಠ ಮಟ್ಟ – 124.80 ಅಡಿ
- ಒಳಹರಿವು – 3703 ಕ್ಯೂಸೆಕ್
- ಹೊರಹರಿವು – 6007 ಕ್ಯೂಸೆಕ್
- ಸಂಗ್ರಹ – 14.641 ಟಿಎಂಸಿ
ಸೂಪಾ ಜಲಾಶಯದ
- ಗರಿಷ್ಠ ಮಟ್ಟ – 564 ಮೀ
- ಇಂದಿನ ಮಟ್ಟ – 541.80 ಮೀ
- ಕಳೆದ ವರ್ಷ – 550.30ಮೀ
- ಒಳಹರಿವು – 12318.967 ಕ್ಯೂಸೆಕ್
- ಹೊರಹರಿವು – 1591.621 ಕ್ಯೂಸೆಕ್
ಭದ್ರಾ ಜಲಾಶಯದ
- ಗರಿಷ್ಠ ಮಟ್ಟ – 186 ಅಡಿ.
- ಇಂದಿನ ಮಟ್ಟ – 139.1 ಅಡಿ.
- ಒಳಹರಿವು – 8.579 ಕ್ಯೂಸೆಕ್
- ಹೊರಹರಿವು – 211
- ನದಿಗೆ – 150 ಕ್ಯೂಸೆಕ್ .
- ಹಿಂದಿನ ವರ್ಷ – 181.10 ಅಡಿ.
ಲಿಂಗನಮಕ್ಕಿ ಜಲಾಶಯ - ಗರಿಷ್ಟ ಮಟ್ಟ -1819 ಅಡಿ.
- ಇಂದಿನ ಮಟ್ಟ – 1768.80 ಅಡಿ.
- ಒಳ ಹರಿವು – 16.153 ಕ್ಯೂಸೆಕ್.
- ಹೊರ ಹರಿವು – 0.727.56 ಕ್ಯೂಸೆಕ್.( ವಿದ್ಯುತ್ ಉತ್ಪಾದನೆಗೆ)
- ಹಿಂದಿನ ವರ್ಷ – 1802.30 ಅಡಿ.
ತುಂಗಾ ಜಲಾಶಯ - ಗರಿಷ್ಟ ಮಟ್ಟ – 588.24.ಮೀಟರ್
- ಇಂದಿನ ನೀರಿನ ಮಟ್ಟ – 588.24. ಮೀಟರ್
- ಒಳ ಹರಿವು – 16.463.93 ಕ್ಯೂಸೆಕ್.
- ಹೊರಹರಿವು – 14.860 ಕ್ಯೂಸೆಕ್.
- ಹಿಂದಿನ ವರ್ಷ – 588.24 ಅಡಿ.
ಮಾಣಿ ಜಲಾಶಯ - ಗರಿಷ್ಟ ಮಟ್ಟ – 594. ಮೀಟರ್.
- ಇಂದಿನ ನೀರಿನ ಮಟ್ಟ – 576.28 ಮೀಟರ್.
- ಒಳ ಹರಿವು – 7.503 ಕ್ಯೂಸೆಕ್.
- ಹೊರ ಹರಿವು – ಇಲ್ಲ.
- ಹಿಂದಿನ ವರ್ಷ – 585.13 ಮೀಟರ್.
ತುಂಗಭದ್ರಾ ಜಲಾಶಯ
- ಇಂದಿನ ನೀರಿನ ಮಟ್ಟ – 1598.06 ಅಡಿ
- ಗರಿಷ್ಟ ಮಟ್ಟ – 1633 ಅಡಿ
- ನೀರಿನ ಸಂಗ್ರಹ – 17.339 ಟಿಎಂಸಿ
- ಒಳಹರಿವು – 8521 ಕ್ಯೂಸೆಕ್
- ಹೊರ ಹರಿವು – 1797 ಕ್ಯೂಸೆಕ್
- ಕಳೆದ ವರ್ಷ – 23-07-2018
- ನೀರಿನ ಮಟ್ಟ – 1631.37 ಅಡಿ
- ಗರಿಷ್ಟ ಮಟ್ಟ -1633 ಅಡಿ
- ನೀರಿನ ಸಂಗ್ರಹ – 94.068 ಟಿಎಂಸಿ
- ಒಳಹರಿವು – 58557 ಕ್ಯೂಸೆಕ್
- ಹೊರ ಹರಿವು – 54803 ಕ್ಯೂಸೆಕ್
ನಾರಾಯಣಪುರ ಬಸವ ಸಾಗರ ಜಲಾಶಯ.
- ಆರ್.ಎಲ್ – 491.19 ಎಂಟಿಆರ್ಎಸ್
- ಸಾಮರ್ಥ್ಯ (ಟಿಎಂಸಿ) ಒಟ್ಟು: 28.615 & ಲೈವ್: 13.855,
- ಒಳಹರಿವು (ಕ್ಯೂಸೆಕ್): 411
- ಸರಾಸರಿ ಹೊರಹರಿವು: (ಕ್ಯೂಸೆಕ್): 5017 (ವಾಪಸಾತಿ: 5017, ನದಿ: 00).