ಪ್ರಾಚೀನ ಕಾಲದ ಶಿಕ್ಷೆಗಳು-ರಾಜರ ಕಾಲದ ಶಿಕ್ಷೆಗಳು

0
266

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಕಳ್ಳರ ಬಾಯಿಂದ ಸತ್ಯವನ್ನು
ಬಾಯಿ ಬಿಡಲು ಬಾಯಿ ಕಟ್‍ ಮಾಡುವುದು, ಶಾಕ್‍ ಟ್ರೀಟ್‍ಮೆಂಟ್‍ ಕೊಡುವುದು, ಇಲಿಗಳಿಂದ ಕಚ್ಚಿಸುವುದು
ಹೀಗೆಲ್ಲಾ ಮಾಡುತ್ತಿದ್ದರು. ಆದರೆ ಪ್ರಾಚೀನ ಕಾಲದಲ್ಲಿ ರಾಜರುಗಳ ಕಾಲದಲ್ಲಿ ತುಂಬಾ ಕಠೋರವಾದ ಶಿಕ್ಷೆಗಳನ್ನು
ನೀಡುತ್ತಿದ್ದರು. ಯಾರಿಂದಲಾದರೂ ಸತ್ಯ ಬಾಯಿ ಬಿಡಿಸಬೇಕೆಂದರೆ, ಅವರಿಗೇ ಶಿಕ್ಷೆ ನೀಡಬೇಕು ಎಂದೆನೂ
ಇರಲಿಲ್ಲ. ಸತ್ಯ ಹೇಳಬೇಕಾಗಿರುವ ವ್ಯಕ್ತಿಯ ಮುಂದೆ ಬೇರೆ ವ್ಯಕ್ತಿಗೆ ಶಿಕ್ಷೆ ನೀಡಿದರೆ ಸಾಕು ತಾನಾಗಿಯೇ
ಸತ್ಯವನ್ನು ಬಾಯಿ ಬಿಡುತ್ತಿದ್ದರು. ಅಷ್ಟರ ಮಟ್ಟಿಗೆ ಕಠೋರವಾದ ಶಿಕ್ಷೆ ನೀಡುತ್ತಿದ್ದರು. ಅಂತಹ ಕಠೋರವಾದ
10 ಶಿಕ್ಞೆಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ.

 1. ಬ್ರೇಸನ್‍
  ಬುಲ್‍: ಏಥಿಲ್ಸ್‍ ನಗರಕ್ಕೆ ಸೇರಿದ ಪೆಲಾರಿಸ್‍ ಎಂಬ ರಾಜ ಈ ಶಿಕ್ಷೆಯ ವಿಧಾನವನ್ನು ಬಳಸುತ್ತಿದ್ದನು.
  ತಾಮ್ರದಲ್ಲಿ ಎತ್ತಿನ ರೂಪದ ವಿಗ್ರಹವನ್ನು ಮಾಡಿಸಲಾಗುತ್ತದೆ. ಅದಕ್ಕೆ ಬಾಗಿಲು ಕೂಡ ಇರುತ್ತದೆ. ಅದರಲ್ಲಿ
  8 ಅಡಿ ಇರುವ ಮನುಷ್ಯ ಕೂಡ ಹಿಡಿಸುವಷ್ಟು ದೊಡ್ಡದಾಗಿತ್ತದೆ. ನಂತರ ವಿಗ್ರಹದ ಹೊಟ್ಟೆ ಕೆಳಗೆ ಬೆಂಕಿ
  ಇಡಲಾಗುತ್ತದೆ. ಹಾಗಾದಾಗ ವಿಗ್ರಹದ ಒಳಗಿರುವ ಮನುಷ್ಯನ ಗತಿ ಏನಾಗಬಹುದು ಎಂಬುದನ್ನು ನೀವೇ ಊಹೆ ಮಾಡಿ.
  ಒಳಗಿರುವ ಮನುಷ್ಯನ ಕೂಗು ದನ ಕೂಗಿದ ರೀತಿಯಲ್ಲೇ ಬರುತ್ತದೆ. ಈ ರೀತಿ ವಿಗ್ರಹವನ್ನು ತಯಾರು ಮಾಡಿದವನನ್ನು
  ಕೂಡ ಈ ರಾಜ ದನದ ಹೊಟ್ಟೆಯ ಒಳಗೆ ಹಾಕಿ ಬೇಯಿಸಿ ಬಿಡುತ್ತಾನೆ.
 2. ಸಾಯಿಂಗ್‍:
  ಪ್ರಪಂಚದಲ್ಲಿ ತುಂಬಾ ಬಹುತೇಕ ಜನರು ಇದೇ ರೀತಿಯ ಶಿಕ್ಷೆಯ ವಿಧಾನವನ್ನು ಬಳಸುತ್ತಿದ್ದರು. ಒಬ್ಬ ವ್ಯಕ್ತಿ
  ತಲೆಕೆಳಗೆ ಮಾಡಿ, ಎರಡು ಭಾಗವಾಗಿ ಕುಯ್ದು ಹಾಕುತ್ತಿದ್ದರು. ಇನ್ನೂ ಕೆಲವರು ಮನುಷ್ಯನನ್ನು ತಲೆಕೆಳಗೆ
  ಮಾಡಿ ಕಾಲಿನ ಭಾಗದಿಂದ ತಲೆ ಭಾಗದವರೆಗೆ ಎರಡು ಭಾಗಗಳಾಗಿ ಕುಯ್ದು ಹಾಕುತ್ತಿದ್ದರು. ಈ ರೀತಿಯ ಶಿಕ್ಷೆ
  ಅನುಭವಿಸುತ್ತಿದ್ದ ವ್ಯಕ್ತಿ ಅದೆಷ್ಟು ಭಯಂಕರವಾದ ಶಿಕ್ಷೆಯನ್ನು ಅನುಭವಿಸುತ್ತಿದ್ದ ಎಂಬುದನ್ನು ನೀವೇ
  ಊಹಿಸಿ.
 3. ಸ್ಕಾಪಿಸಮ್:
  ಮನುಷ್ಯನನ್ನು ಚಿಕ್ಕ ದೋಣಿಯಲ್ಲಿ ಇಟ್ಟು ಆತನಿಗೆ ಹಾಲು-ಜೇನಿನ ಮಿಶ್ರಣವನ್ನು ಕುಡಿಸಿ ನಂತರ ಅದನ್ನು
  ದೇಹದ ಮೇಲೆ ಚೆಲ್ಲಿ ಸಮುದ್ರದಲ್ಲಿ ಎಸೆಯುತ್ತಿದ್ದರು, ಈ ರೀತಿ ಮಾಡುವುದರಿಂದ ಮನುಷ್ಯ ಹೆಚ್ಚು ದಿನ
  ಬದುಕುತ್ತಾನೆ. ಬದುಕಿರುವಷ್ಟು ದಿನ ಆತ ಟಾರ್ಚರ್‍ ಅನುಭವಿಸಬೇಕಾಗುತ್ತದೆ. ಈ ಮಿಶ್ರಣವನ್ನು ದೇಹದ
  ಮೇಲೆ ಚೆಲ್ಲುವುದರಿಂದ ನೊಣಗಳು ದೇಹದ ಮೇಲೆ ಮೊಟ್ಟೆಗಳಿಟ್ಟು, ಅದು ಲಾವಾ ಆಗಿ ಬದಲಾಗುತ್ತದೆ. ಇದರಿಂದ
  ಮನುಷ್ಯ ಬದುಕಿರುವಾಗಲೇ ಕೊಳೆಯುದಕ್ಕೆ ಪ್ರಾರಂಭವಾಗುತ್ತದೆ. ಈ ರೀತಿ 17 ದಿನಗಳ ಕಾಲ ಶಿಕ್ಷೆ ಅನುಭವಿಸುತ್ತಾ,
  ಮನುಷ್ಯ ಸಾವನ್ನಪ್ಪುತ್ತಿದ್ದನಂತೆ.
 4. ಸ್ಪೈನಿಷ್‍
  ಡಾಂಕಿ: ಈ ಶಿಕ್ಷೆ ಹೇಗಿರುತ್ತದೆ ಎಂದರೆ, ಮನುಷ್ಯನನ್ನು ವಿವಸ್ತ್ರಧಾರಿಯನ್ನಾಗಿ ಮಾಡಿ, ತ್ರಿಕೋನಾಕೃತಿಯಲ್ಲಿರುವ
  ಮರದ ಮೇಲೆ ಕೂರಿಸಿ ಅಗಲವಾಗಿ ಕೂರಿಸಿ ಕೆಳಗೆ ಕಾಲಿಗೆ ಭಾರವಾದ ಕಬ್ಬಿಣದ ಗುಂಡನ್ನು ಕಟ್ಟುತ್ತಾರೆ.
  ಗುರುತ್ವಾಕರ್ಷಣದ ಕಾರಣದಿಂದಾಗಿ ಅವರು ಕೆಳಗೆ ಇಳಿಯುವ ಮೂಲಕ ದೇಹ ಎರಡು ಭಾಗವಾಗಿ ಇಬ್ಭಾಗವಾಗುತ್ತದೆ.
 5. ಬ್ರೆಸ್ಟ್‍
  ರಿಪ್ಪರ್‍: 15ನೇ ಶತಮಾನದಲ್ಲಿ ಫ್ರಾನ್ಸ್‍ ಮತ್ತು ಜರ್ಮನಿ ದೇಶದಲ್ಲಿ ಮಹಿಳೆಯರು ಮದುವೆಗೂ ಮುನ್ನಾ
  ಗರ್ಭಿಣಿಯಾದರೆ ಅಥವಾ ಅಕ್ರಮ ಸಂಬಂಧಗಳನ್ನು ಇಟ್ಟುಕೊಂಡಿದ್ದರೆ ಆಂಕ್ಲರ್‍ ಆಯುಧವನ್ನು ಬಳಸಿ ಎದೆಯನ್ನು
  ಕತ್ತರಿಸಿ ಹಾಕಲಾಗುತ್ತಿತ್ತು. ಇದರಿಂದ ರಕ್ತಸ್ರಾವ ಗಿ ಸಾಯುತ್ತಿದ್ದರು.
 6. ಕ್ರೂಸಿಫಿಕ್ಷನ್‍:
  ಈ ಶಿಕ್ಷೆ ಶಾರೀರಿಕ ಹಾಗೂ ಮಾನಸಿಕವಾಗಿರುತ್ತದೆ. ಈ ವಿಧಾನದಲ್ಲಿ ಒಬ್ಬ ಮನುಷ್ಯನನ್ನು ನಾನಾ ವಿಧಾನಗಳ
  ಮೂಲಕ ಬಹಿರಂಗವಾಗಿ ಅವಮಾನ ಮಾಡುತ್ತಾ, ಒಂದು ಎತ್ತರವಾದ ಪ್ರದೇಶದಲ್ಲಿ ಪ್ಲಸ್‍ ಆಕಾರದಲ್ಲಿರುವ ಶಿಲುಬೆಗೆ
  ಕಾಳು ಮತ್ತು ಕೈಗಳಿಗೆ ಮಳೆಯನ್ನು ಹೊಡೆದು ಬಿಸಿಲಿನಲ್ಲಿ ಒಣಗಿಸುತ್ತಾ ಸಾಯಿಸಲಾಗುತ್ತಿತ್ತು.
 7. ಚೈನೀಸ್‍
  ಬ್ಯಾಂಬೂ: ಇದೊಂದು ಜಾತಿಯ ಬಿದುರು ಗಿಡಗಳು ದಿನವೊಂದಕ್ಕೆ 3-4 ಅಡಿ ಎತ್ತರ ಬೆಳೆಯುತ್ತದೆ. ಈ ಪ್ರಾಕೃತಿಕ
  ವಿಸ್ಮಯವನ್ನು ಬಳಸಿಕೊಂಡು ಚೈನಾದವರು ಶಿಕ್ಷೆ ನೀಡುತ್ತಿದ್ದರು ಎನ್ನಲಾಗುತ್ತದೆ. 4 ಅಡಿ ಎತ್ತರ ಬೆಳೆದ
  ಮರದ ಮೇಲೆ ಮನುಷ್ಯನನ್ನು ಮರಗಳ ಸಹಾಯದಿಂದ ಕಟ್ಟಿ ಹಾಕುತ್ತಿದ್ದರಂತೆ. ಆ ಗಿಡ ಬೆಳೆಯುವ ವೇಗಕ್ಕೆ
  ಮನುಷ್ಯ ಪ್ರತಿ ಕ್ಷಣ ನೋವನ್ನು ಅನುಭವಿಸಿ ಸಾಯುತ್ತಿದ್ದನು.
 8. ಫ್ಲೇಯಿಂಗ್‍:
  ಕ್ರಿಪೂ 883ರಲ್ಲಿ ಅಶ್ವರ್‍ ನಸೀರ್‍ ಪಾಲ್‍ ಎನ್ನುವ ವ್ಯಕ್ತಿ, ಅನ ಖೈದಿಗಳನ್ನು ಶಿಕ್ಷಿಸಲು ಬದುಕಿರುವಾಗಲೇ
  ಆತನ ದೇಹದಿಂದ ಚರ್ಮವನ್ನು ಬೇರೆ ಮಾಡುತ್ತಿದ್ದರಂತೆ. ಕುರಿ, ಕೋಳಿಗಗಳಿಗೆ ಹೇಗೆ ಚರ್ಮವನ್ನು ತೆಗೆಯಲಾಗುತ್ತದೆಯೋ
  ಅದೇ ರೀತಿ ಮನುಷ್ಯನಿಗೆ ಮಾಡಲಾಗುತ್ತಿತ್ತಂತೆ. ಇದರಿಂದ ವಿಪರೀತ ರಕ್ತಸ್ರಾವವಾಗಿ ಅಥವಾ ಇನ್ಫೆಕ್ಷನ್‍
  ಆಗಿ ಸಾಯುತ್ತಿದ್ದರು.
 9. ಬ್ರೇಕಿಂಗ್‍
  ವೀಲ್‍: ಫ್ರಾನ್ಸ್‍ ಮತ್ತು ರೋಮ್‍ ದೇಶಗಳಲ್ಲಿ ಈ ವಿಧಾನವನ್ನು ಅನುಸರಿಸಲಾಗುತ್ತಿತ್ತು. ಇದು ಉಳಿದೆಲ್ಲಾ
  ವಿಧಾನಗಳಿಂತಲೂ ನೋವು ಕೊಡುತ್ತಿತ್ತು. ಚಕ್ರವೊಂದಕ್ಕೆ ಮನುಷ್ಯನನ್ನು ಕಟ್ಟಿ ಹಾಕಿ ಸುತ್ತಿಗೆಯೊಂದರಿಂದ
  ದೇಹದ ಮೂಳೆಗಳನ್ನು ಪುಡಿ ಪುಡಿ ಮಾಡಲಾಗುತ್ತಿತ್ತಂತೆ. ನಂತರ ಊರಿನ ಹೊರಗೆ ಹಾಕಲಾಗುತ್ತಿತ್ತಂತೆ.
  ಹೀಗೆ 2-3 ದಿನಗಳ ಕಾಲ ನೋವು ಅನುಭವಿಸುತ್ತಾ ಸಾವನ್ನಪ್ಪುತ್ತಿದ್ದರು.

ಇಂಪೀಲ್ಮೆಂಟ್‍: ಈ ವಿಧಾನದ ಮೂಲಕ ಮನುಷ್ಯನ ಕೆಳಭಾಗಕ್ಕೆ ಚೂಪಾದ
ಮರದಿಂದ ಚುಚ್ಚಲಾಗುತ್ತದೆ. ಗುರುತ್ವಾಕರ್ಷಣ ಬಲದಿಂದ ಮನುಷ್ಯ ಕೆಳಗೆ ಬರುತ್ತಾ ಬಾಯಿಯಿಂದ ಕೋಲು ಹೊರಬರುತ್ತದೆ.
ಕೊನೆಗೆ ಮನುಷ್ಯ ಸಾಯುತ್ತಾನೆ. 15ನೇ ಶತಮಾನದಲ್ಲಿ ಲ್ಯಾಡ್‍ ಎನ್ನುವ ರಾಜ ಈ ವಿಧಾನವನ್ನು ಬಳಸಿ ಸುಮಾರು
20,000 ಜನರನ್ನು ಸಾಯಿಸುತ್ತಾನೆ

LEAVE A REPLY

Please enter your comment!
Please enter your name here