ಪ್ರಪಂಚದ ಅತ್ಯಂತ ಕುಡುಕ ದೇಶಗಳು ಇವೆ ನೋಡಿ…! ಭಾರತಕ್ಕೆ ಎಷ್ಟನೇ ಸ್ಥಾನ..?

0
211

ಹಾಯ್ ಪ್ರೆಂಡ್ಸ್ ಈ ಲೇಖನದಲ್ಲಿ ಪ್ರಪಂಚದ ಅತ್ಯಂತ ಕುಡುಕ ದೇಶಗಳ ಬಗ್ಗೆ ಮಾಹಿತಿ ತಿಳಿಸಿ ಕೊಡ್ತೀನಿ
ಇನ್ನು ನಾನು ಈ ಲೇಖನದಲ್ಲಿ ಹೇಳಿರುವ ಈ ದೇಶಗಳು ಕುಡಿಯುವುದನ್ನು ಬಿಟ್ಟು ಬದುಕೋದೆ ಕಷ್ಟ ಅನ್ನುವ ಸ್ಥಿತಿಯಲ್ಲಿ ಈ ದೇಶಗಳು ಇದ್ದಾವೆ
ಹಾಗೂ ಈ ದೇಶಗಳಲ್ಲಿ ಹಣವನ್ನು ಕರೆನ್ಸಿ ಲೆಕ್ಕದಲ್ಲಿ ಅಳೆಯುವ ರೀತಿಯೇ ಆಲ್ಕೋಹಾಲನ್ನು ಲೀಟರ್ ಗಳ ಲೆಕ್ಕದಲ್ಲಿ ಅಳೆಯಲಾಗುತ್ತದೆ ಮತ್ತು ಅತ್ಯಂತ ಕುಡುಕ ದೇಶಗಳ ಲಿಸ್ಟ್ ನಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಅನ್ನೋದರ ಬಗ್ಗೆ ಕೂಡ ತಿಳಿಸಿ ಕೊಡ್ತೀನಿ
ಮುಂದೆ ಓದಿ

1 ) ಬೆಲಾರಸ್

ಯುರೋಪ್ ಕಾಂಡದ ಹಿಂದುಳಿದ ದೇಶವಾದ ಬೆಲಾರಸ್ ಜಗತ್ತಿನ ನಂಬರ್ ವನ್ ಕುಡುಕ ದೇಶ ಅನ್ನುವ ಹೆಸರನ್ನು ಗಳಿಸಿದೆ
1990ರ ದಶಕದಲ್ಲಿ ರಷ್ಯಾದಿಂದ ಸ್ವಾತಂತ್ರ್ಯ ಪಡೆದ ಈ ದೇಶ ವಿಶ್ವದಲ್ಲಿ ಮುಂಚೂಣಿಯಲ್ಲಿರುವುದು ಕುಡಿತದಲ್ಲಿ ಮಾತ್ರ
ಇನ್ನೂ ಈ ದೇಶದ ಪ್ರತಿಯೊಬ್ಬ ಪ್ರಜೆ ಕೂಡ ವರ್ಷಕ್ಕೆ ಸರಾಸರಿ 17.5 ಲೀಟರ್ನಷ್ಟು ಶುದ್ಧ ಆಲ್ಕೋಹಾಲ್ನ ಸೇವಿಸ್ತಾರೆ
ಮತ್ತೊಂದು ಆಶ್ಚರ್ಯವೇನೆಂದರೆ ಈ ದೇಶದ 35 % ಜನರ ಸಾವಿಗೆ ಕುಡಿತವೇ ಕಾರಣವಾಗಿದೆ .

2 )ಮಾಲ್ಡೊವ

ಯುರೋಪ್ ಕಾಂಡದ ರಿಪಬ್ಲಿಕ್ ಆಫ್ ಮಾಲ್ಡೊವ ಜಗತ್ತಿನ ಎರಡನೇ ಕುಡುಕ ದೇಶವಾಗಿದೆ
ಹಾಗೂ ವಿಶ್ವದ ಬಡ ರಾಷ್ಟ್ರಗಳ ಸಾಲಿನಲ್ಲಿರುವ ಮಾಲ್ಡೊವಾದಲ್ಲಿ ಶೇಕಡ 16.6 ರಷ್ಟು ಜನ ಕಡು ಬಡವರು
ಇನ್ನು ಈ ರಾಷ್ಟ್ರ ಯುರೋಪ್ ನಲ್ಲಿ ಅತಿ ಹೆಚ್ಚು ಬಡತನ ಹೊಂದಿರುವ ರಾಷ್ಟ್ರವಾಗಿದೆ
ಆದರೆ ಕುಡಿತದಲ್ಲಿ ಮಾತ್ರ ವಿಶ್ವದಲ್ಲಿ ಎರಡುನೆ ಸ್ಥಾನದಲ್ಲಿದೆ
ಮತ್ತು ಈ ದೇಶದ ಪ್ರತಿಯೊಬ್ಬ ವ್ಯಕ್ತಿ ಕೂಡ ವರ್ಷಕ್ಕೆ ಸರಾಸರಿ 16.8 ಲೀಟರ್ನಷ್ಟು ಮದ್ಯ ಸೇವನೆ ಮಾಡ್ತಾರೆ
ಮತ್ತೆ ಈ ದೇಶದ 33.1ರಷ್ಟು ಜನರು ಕುಡಿತ ದಿಂದಲೇ ಸಾವನ್ನಪ್ಪುತ್ತಾರೆ.

3 ) ಲಿತುವೇನಿಯಾ

ಯುರೋಪ್ ಕಾಂಡದ ದಕ್ಷಿಣ ಭಾಗದಲ್ಲಿರುವ ಲಿತುವೇನಿಯಾ ಜಗತ್ತಿನ ಮೂರನೇ ಕುಡುಕ ರಾಷ್ಟ್ರವಾಗಿದೆ
ಆಶ್ಚರ್ಯವೇನೆಂದರೆ ಈ ರಾಷ್ಟ್ರದ ಶೇಖಡ 33ಕ್ಕೂ ಹೆಚ್ಚಿನ ಮಹಿಳೆಯರು ಮಹಾ ಕುಡುಕರು ಹಾಗೂ ಈ ದೇಶದ ಪ್ರತಿಯೊಬ್ಬ ವ್ಯಕ್ತಿ ವರ್ಷಕ್ಕೆ ಸರಾಸರಿ 15.4 ಲೀಟರ್ನಷ್ಟು ಶುದ್ಧ ಆಲ್ಕೋಹಾಲ್ ಸೇವನೆಯನ್ನು ಮಾಡ್ತಾರೆ
ಹಾಗೂ ಕುಡಿತವನ್ನು ದೇಶದ ದೊಡ್ಡ ಸಮಸ್ಯೆ ಎಂದು ಭಾವಿಸಿರುವ ಈ ದೇಶದಲ್ಲಿ ಶೇಖದ 30% ಜನ ಸಾಯುವುದು ಕುಡಿತದಿಂದ ಎನ್ನಲಾಗಿದೆ.

4 ರಷ್ಯಾ

ಜಗತ್ತಿನ ಮುಂಚೂಣಿ ರಾಷ್ಟ್ರಗಳ ಪೈಕಿ ಗುರುತಿಸಿಕೊಂಡಿರುವ ರಷ್ಯಾ ಕುಡಿತದಲ್ಲಿಯೂ ಕೂಡ ಮುನ್ನಡೆಯನ್ನು ಕಾಯ್ದುಕೊಂಡಿದೆ
ರಷ್ಯಾದ ಪ್ರತಿಯೊಬ್ಬ ಪ್ರಜೆ ಕೂಡ ವರ್ಷಕ್ಕೆ 15.1 ಲೀಟರ್ನಷ್ಟು ಶುದ್ಧ ಆಲ್ಕೋಹಾಲ್ ಸೇವನೆಯನ್ನು ಮಾಡ್ತಾರೆ
ಮತ್ತು ಈ ದೇಶದ ಶೇಕಡ 18 % ರಷ್ಟು ಜನರು ಆಲ್ಕೋಹಾಲ್ ಸಂಬಂಧಿತ ರೋಗ ರುಜಿನಗಳಿಂದ ಬಳಲ್ತ ಇದ್ದಾರೆ ಮತ್ತು ಶೇಕಡ 30.5% ಜನ ಕುಡಿತ ದಿಂದಲೇ ಸಾವನ್ನಪ್ಪುತ್ತಾರೆ.

5 ) ರೊಮಾನಿಯಾ

ಯುರೋಪ್ನ ಆಗ್ನೇಯ ಭಾಗದಲ್ಲಿರುವ ರೊಮಾನಿಯಾ ಜಗತ್ತಿನ ಅತ್ಯಂತ ಕುಡುಕ ದೇಶಗಳ ಲಿಸ್ಟ್ ನಲ್ಲಿ ಐದನೇ ಸ್ಥಾನದಲ್ಲಿದೆ
15 ರಿಂದ 19 ವರ್ಷದ ಒಳಗಿನ ಶೇಖಡ 37 % ರಷ್ಟು ಯುವಜನರು ಈ ದೇಶದಲ್ಲಿ ಕುಡುಕರೇ ಆಗಿದ್ದರೆ
ಹಾಗೂ ಅದರಲ್ಲಿ ಯುವಕರ ಸಂಖ್ಯೆ ಶೇಕಡ 55 % ರಷ್ಟು ಮತ್ತು ಯುವತಿಯರ ಸಂಖ್ಯೆ ಶೇಕಡ 45 % ರಷ್ಟು
ಜಗತ್ತಿನ ಅತ್ಯಂತ ಯುವಕುಡುಕರನ್ನು ಹೊಂದಿರುವ ದೇಶಗಳ ಲಿಸ್ಟ್ ನಲ್ಲಿ ರೊಮಾನಿಯಾ ನಂಬರ್ ಒನ್ ಸ್ಥಾನದಲ್ಲಿದೆ
ಇಲ್ಲಿನ ಪ್ರತಿಯೊಬ್ಬ ಪ್ರಜೆ ವರ್ಷಕ್ಕೆ 14.4 ಲೀಟರ್ನಷ್ಟು ಮದ್ಯ ಸೇವನೆ ಮಾಡುತ್ತಾರೆ.

6 ) ಯುಕ್ರೇನ್

ಯುರೋಪ್ ಕಾಂಡದ ಯುಕ್ರೇನ್ ಗೆ ಕುಡುಕ ದೇಶಗಳ ಲಿಸ್ಟ್ ನಲ್ಲಿ ಆರನೇ ಸ್ಥಾನದಲ್ಲಿದೆ
ಈ ದೇಶದ ಪ್ರತಿಯೊಬ್ಬ ಪ್ರಜೆ ಕೂಡ ವರ್ಷಕ್ಕೆ 13.4 ಲೀಟರ್ನಷ್ಟು ಮದ್ಯ ಸೇವನೆಯಿಂದ ಮಾಡ್ತಾರೆ
ಇನ್ನು ಈ ದೇಶದಲ್ಲಿ ಕುಡಿತದಿಂದ ಸಾವನ್ನಪ್ಪುವ ಜನರ ಸಂಖ್ಯೆ ಶೇಕಡ 32% ರಷ್ಟು ಇದೆ ಹಾಗೂ ಆಲ್ಕೋಹಾಲ್ ನಿಂದ ಸಾಯುವವರ ಸಂಖ್ಯೆಯಲ್ಲಿ ಯುಕ್ರೇನ್ ಎರಡನೇ ಸ್ಥಾನದಲ್ಲಿದೆ.

7 ) ಅಂಡೋರ

ಬೆಂಗಳೂರಿನ ಅರ್ಧದಷ್ಟು ಜನಸಂಖ್ಯೆ ಇರುವ ಅಂಡೋರ ದೇಶ ಕುಡುಕ ದೇಶಗಳ ಲಿಸ್ಟ್ನಲ್ಲಿ ಏಳನೇ ಸ್ಥಾನದಲ್ಲಿದೆ
ಸುಮಾರು 80,000 ಜನಸಂಖ್ಯೆ ಇರುವ ಈ ದೇಶದ ಪ್ರತಿಯೊಬ್ಬ ಪ್ರಜೆ ಕೂಡ ವರ್ಷಕ್ಕೆ 13.8 ಲೀಟರ್ನಷ್ಟು ಮದ್ಯ ಸೇವನೆಯನ್ನು ಮಾಡ್ತಾರೆ.

8 ) ಹಂಗೇರಿ

ಯುರೋಪ್ನ ಮಧ್ಯ ದೇಶವಾದ ಹಂಗೇರಿ ಕುಡುಕ ದೇಶಗಳ ಲಿಸ್ಟ್ ನಲ್ಲಿ ಎಂಟನೇ ಸ್ಥಾನದಲ್ಲಿದೆ
ಈ ದೇಶದ ಪ್ರತಿಯೊಬ್ಬ ಪ್ರತಿಯೊಬ್ಬ ಪ್ರಜೆ ಕೂಡ ವರ್ಷಕ್ಕೆ 13.3 ಲೀಟರ್ನಷ್ಟು ಮದ್ಯ ಸೇವನೆಯನ್ನು ಮಾಡ್ತಾರೆ
ಮತ್ತು ಈ ದೇಶದಲ್ಲಿ ಕುಡುಕ ಸಂಬಂಧಿತ ರೋಗಗಳಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಹಂಗೇರಿ ಜಗತ್ತಿನ ನಂಬರ್ ಒನ್ ಸ್ಥಾನದಲ್ಲಿದೆ.

9 ) ಚೆಟ್
ಜಗತ್ತಿನ ಅತ್ಯಂತ ಕುಡುಕ ದೇಶಗಳ ಪೈಕಿ ಚೆಟ್ ದೇಶಕ್ಕೆ ಒಂಬತ್ತನೇ ಸ್ಥಾನ ಯುರೋಪ್ನ ಚೆಟ್ ಗಣರಾಜ್ಯ ಬೀಯರ್ ಗಳಿಂದಲೇ ಪ್ರಖ್ಯಾತಿ ಹಾಗೂ ಕುಖ್ಯಾತಿ ಎರಡನ್ನೂ ಗಳಿಸಿದೆ ಇನ್ನು ಈ ದೇಶದ ಪ್ರತಿಯೊಬ್ಬ ಪ್ರಜೆ ವರ್ಷಕ್ಕೆ 13 ಲೀಟರ್ನಷ್ಟು ಮದ್ಯ ಸೇವನೆಯನ್ನು ಮಾಡ್ತಾರೆ.

10 ) ಸ್ಲೊವಾಕಿಯಾ

ಯುರೋಪ್ ಸ್ಲೋವಾಕಿಯಾ ದೇಶ ಪ್ರಪಂಚದ ಕುಡುಕ ದೇಶಗಳಲ್ಲಿ ಹತ್ತನೇ ಸ್ಥಾನದಲ್ಲಿದೆ. ಈ ದೇಶದ ಪ್ರತಿಯೊಬ್ಬ ಪ್ರಜೆ ವರ್ಷಕ್ಕೆ 12.8 ರಷ್ಟು ಮದ್ಯ ಸೇವನೆಯನ್ನು ಮಾಡ್ತಾರೆ ಮತ್ತು ಈ ದೇಶದ ಶೇಕಡ 7.7% ರಷ್ಟು ಜನರು ಕುಡಿತದಿಂದ ಸಾವನ್ನಪ್ಪುತ್ತಾರೆ. ಕೊನೆಯದಾಗಿ ಕುಡುಕ ರಾಷ್ಟ್ರಗಳ ಸಾಲಿನಲ್ಲಿ ನಮ್ಮ ಭಾರತ ದೇಶ 119 ನೇ ಸ್ಥಾನದಲ್ಲಿದೆ ನಮ್ಮ ದೇಶದಲ್ಲಿ ಕುಡಿತದ ಅಭ್ಯಾಸ ಇರುವವರು ವರ್ಷಕ್ಕೆ ಸರಾಸರಿ 4.3 ಲೀಟರ್ನಷ್ಟು ಆಲ್ಕೋಹಾಲ್ ಸೇವನೆಯನ್ನು ಮಾಡ್ತಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಕುಡಿಯುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು .

LEAVE A REPLY

Please enter your comment!
Please enter your name here