ಎಂಪ್ಲಾಯೀ ಪ್ರಾವಿಡೆಂಟ್ ಫಂಡ್. ಉದ್ಯೋಗಿಗಳಿಗೆ ನಿವೃತ್ತಿ ನಂತರ ತಮ್ಮ ಜೀವನಕ್ಕೆ ಸಿಗುವಂತಹ ಉತ್ತಮ ಯೋಜನೆ. ಇನ್ನು ಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳುವುದು ಹೇಗೆ ಎಂಬ ಮಾಹಿತಿ ಅನೇಕರಿಗೆ ತಿಳಿದಿಲ್ಲ. ಆದರೆ ಯುಎಎನ್ ಮೂಲಕ ಆನ್ಲೈನ್ನಲ್ಲಿ ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ಪರಿಶೀಲನೆ ನಡೆಸಬಹುದು.
ಯುಎಎನ್ ಪೋರ್ಟಲ್ ಲಾಗಿನ್ ಆಗುವ ಮೂಲಕ ನೌಕರರು ಪಿಎಫ್ ಕೊಡುಗೆ ಹಾಗೂ ಸಂಗ್ರಹವಾದ ಹಣದ ಸಂಪೂರ್ಣ ವಿವರವನ್ನು ಪಾಸ್ಬುಕ್ ಮೂಲಕ ವೀಕ್ಷಿಸಬಹುದು. ಈ ಇಂಟರ್ಫೇಸ್ ಬಳಸಿ ಚಂದಾದಾರರು ಯುಎಎನ್ ಕಾರ್ಡ್ ಕೂಡ ಡೌನ್ಲೋಡ್ ಮಾಡಬಹುದು.
ಇನ್ನು ನಿಮ್ಮ ಪಿಎಫ್ ಖಾತೆಯಲ್ಲಿ ಹಣ ಎಷ್ಟಿದೆ ಎಂದು ಎಸ್ಎಂಎಸ್ ಮೂಲಕವೂ ಪರಿಶೀಲನೆ ನಡೆಸಬಹುದು. 7738299899 ನಂಬರ್ಗೆ ಮೆಸೇಜ್ ಮಾಡಬೇಕು. EPFOHOUAN ENG ಎಂದು ಟೈಪ್ ಮಾಡಿ ನಿಮ್ಮ ಪಿಎಫ್ನಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ನಿಂದ 7738299899 ನಂಬರ್ಗೆ ಸಂದೇಶ ರವಾನಿಸಿ. ಒಂದು ನಿಮಿಷದ ಒಳಗೆ ನಿಮ್ಮ ಪಿಎಫ್ ಹಣದ ಮಾಹಿತಿ ದೊರೆಯುತ್ತದೆ